The protest has come to the Galle International Stadium. While there is a Test match underway, what’s happening elsewhere and all around Sri Lanka today is way more significant. It’s the people’s call for change #SLvAus #LoveForLanka pic.twitter.com/9nYOlNz7Ar
— Bharat Sundaresan (beastieboy07) July 9, 2022
ಸರ್ಕಾರ ಬದಲಾವಣೆಗೆ ಒತ್ತಾಯ
ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದ ಹೊರಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿದ್ದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಸರ್ಕಾರವನ್ನು ಬದಲಾವಣೆ ಮಾಡಬೇಕು ಎಂದು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಆದರೆ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯಕ್ಕೆ ಯಾವುದೇ ಅಡ್ಡಿಯುಂಟು ಮಾಡುವ ಪ್ರಯತ್ನವನ್ನು ಪ್ರತಿಭಟನಾಕಾರರು ನಡೆಸಿಲ್ಲ.
Protesters have lapped the ground and entered the Fort walls. Fans and protesters alike have been banned from climbing the Fort during playing hours. pic.twitter.com/EOTXbAuHJR
— Adam Collins (collinsadam) July 9, 2022
ಕ್ರೀಡಾಂಗಣಕ್ಕೆ ಪೊಲೀಸ್ ಸರ್ಪಗಾವಲು
ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯಕ್ಕೆ ಪ್ರತಿಭಟನಾಕಾರರು ಈವರೆಗೆ ಯಾವುದೇ ಅಡ್ಡಿಯುಂಟು ಮಾಡುವ ಪ್ರಯತ್ನಗಳನ್ನು ನಡೆಸಿಲ್ಲ. ಟೆಸ್ಟ್ ಪಂದ್ಯ ಮುಂದುವರಿದಿದೆ. ಆದರೆ ಕ್ರೀಡಾಂಗಣದ ಹೊರಗೆ ಭಾರೀ ಪ್ರಮಾಣದಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಈ ಮೂಲಕ ಪೊಲೀಸ್ ಸರ್ಪಗಾವಲಿನಲ್ಲಿಯೇ ಈ ಪಂದ್ಯ ನಡೆಯುತ್ತಿದೆ.
#WATCH | Massive protests erupt in economic crisis-laden Sri Lanka as protesters amass at the President's Secretariat, who has reportedly fled the country.
— ANI (ANI) July 9, 2022
(Source: unverified) pic.twitter.com/SvZeLGTvKG
ಕಟ್ಟೆಯೊಡೆದ ಲಂಕಾ ಆಕ್ರೋಶ
ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಸಂಪೂರ್ಣವಾಗಿ ತತ್ತರಿಸಿದ್ದು ವಿದೇಶೀ ಕರೆನ್ಸಿಯ ಕೊರತೆ ತೀವ್ರವಾಗಿ ಕಾಡುತ್ತಿದೆ. ತೈಲ ಸೇರಿದಂತೆ ಕೆಲ ಮೂಲಭೂತ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕೂಡ ಸರ್ಕಾರಕ್ಕೆ ಅಸಾಧ್ಯವಾಗಿದ್ದು ಶ್ರೀಲಂಕಾ ಸರ್ಕಾರ ಸಂಪೂರ್ಣವಾಗಿ ಕೈಚೆಲ್ಲಿ ಕುಳಿತಿರುವುದು ಜನರನ್ನು ಮತ್ತಷ್ಟು ಆಕ್ರೋಶಕ್ಕೆ ದೂಡಿದೆ. ಇದರ ಭಾಗವಾಗಿ ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ.
The siege is over. Your bastion has fallen. Aragalaya and peoples power has won. Please have the dignity to resign now ! #GoHomeGota
— Sanath Jayasuriya (Sanath07) July 9, 2022
ಜನಶಕ್ತಿ ಗೆದ್ದಿದೆ ಎಂದ ಸನತ್ ಜಯಸೂರ್ಯ
ಇನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ತಮ್ಮ ಬೆಂಬಲ ಸೂಚಿಸಿದ್ದು ಪ್ರತಿಭಟನಾನಿರತರ ಪರವಾಗಿ ತಮ್ಮ ಧ್ವನಿಗೂಡಿಸಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಜಯಸೂರ್ಯ "ನಾನು ಶ್ರೀಲಂಕಾದ ಜನತೆಯೊಂದಿಗೆ ಯಾವಾಗಲೂ ನಿಲ್ಲುತ್ತೇನೆ. ಶೀಘ್ರದಲ್ಲಿಯೇ ವಿಜಯದ ಸಂಭ್ರಮವನ್ನು ಆಚರಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದರೆ ಮತ್ತೊಂದು ಟ್ವೀಟ್‌ನಲ್ಲಿ "ಮುತ್ತಿಗೆ ಮುಗಿದಿದ್ದು ನಿಮ್ಮ ಭದ್ರಕೋಟೆ ಕುಸಿದಿದೆ. ಅರಗಳಯ್ಯ ಮತ್ತು ಜನಶಕ್ತಿ ಗೆದ್ದಿದೆ. ಘನತೆಯಿಂದ ರಾಜೀನಾಮೆ ನೀಡಿ" ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಜಯಸೂರ್ಯ ಪ್ರತಿಭಟನೆಯಲ್ಲೂ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕೂಡ ವರದಿಯಾಗಿದೆ.


Click it and Unblock the Notifications












