For Quick Alerts
ALLOW NOTIFICATIONS  
For Daily Alerts
 

SL vs BAN: ಏಂಜೆಲೊ ಮ್ಯಾಥ್ಯೂಸ್ 'ಟೈಮ್ ಔಟ್' ಬಗ್ಗೆ ಪಂದ್ಯದ ನಾಲ್ಕನೇ ಅಂಪೈರ್ ನೀಡಿದ ವಿವರಣೆ ಏನು?

ನವದೆಹಲಿಯಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳ ನಡುವಿನ 38ನೇ ಪಂದ್ಯವು ವಿವಾದದ ಕೇಂದ್ರ ಬಿಂದುವಾಗಿತ್ತು.

ಏಕೆಂದರೆ, ಶ್ರೀಲಂಕಾದ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ನವೆಂಬರ್ 6ರಂದು 'ಟೈಮ್ ಔಟ್' ಮೂಲಕ ವಿಕೆಟ್ ಒಪ್ಪಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

SL vs BAN Match: What Was the Fourth Umpires Explanation of Angelo Mathews Time out?

ಐಸಿಸಿಯ ಕ್ರಿಕೆಟ್ ಪರಿಸ್ಥಿತಿಗಳ ಪ್ರಕಾರ, ಮೊದಲ ಇನಿಂಗ್ಸ್‌ನ 25ನೇ ಓವರ್‌ನಲ್ಲಿ ನಿಗದಿತ ಎರಡು ನಿಮಿಷಗಳ ಅವಧಿಯಲ್ಲಿ ಚೆಂಡನ್ನು ಎದುರಿಸಲು ಶ್ರೀಲಂಕಾ ಬ್ಯಾಟರ್ ಸಿದ್ಧವಾಗಲು ವಿಫಲವಾದ ಬಳಿಕ ಈ ಘಟನೆ ನಡೆಯಿತು.

ಗಮನಾರ್ಹವಾಗಿ, ಏಂಜೆಲೊ ಮ್ಯಾಥ್ಯೂಸ್‌ನ ಹೆಲ್ಮೆಟ್‌ನ ಬೆಲ್ಟ್ ಕಿತ್ತು ಬಂದಿತ್ತು ಮತ್ತು ಬ್ಯಾಟರ್ ತನ್ನ ಮೊದಲ ಎಸೆತವನ್ನು ಎದುರಿಸುವ ಮೊದಲೇ ಹೆಲ್ಮೆಟ್ ಬದಲಾಯಿಸಲು ಯತ್ನಿಸಿದನು.

ಆದಾಗ್ಯೂ, ಈ ಪ್ರಕ್ರಿಯೆಯಲ್ಲಿ ಸಿದ್ಧರಾಗಲು ಅವರಿಗೆ ನೀಡಲಾದ ನಿಗದಿತ ಎರಡು ನಿಮಿಷಗಳು ಮುಗಿದು ಹೋಗಿದ್ದವು ಮತ್ತು ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರ ಮನವಿಯ ನಂತರ ಪಂದ್ಯದ ಅಂಪೈರ್‌ಗಳು ಏಂಜೆಲೊ ಮ್ಯಾಥ್ಯೂಸ್ ಅವರನ್ನು ಟೈಮ್ ಔಟ್ ಎಂದು ನಿರ್ಧರಿಸಿದರು.

SL vs BAN Match: What Was the Fourth Umpires Explanation of Angelo Mathews Time out?

ಶ್ರೀಲಂಕಾ ತಂಡದ ಮೊದಲ ಇನ್ನಿಂಗ್ಸ್ ಮುಗಿದ ನಂತರ, ಈ ಪಂದ್ಯದ ನಾಲ್ಕನೇ ಅಂಪೈರ್ ಆಡ್ರಿಯನ್ ಹೋಲ್ಡ್‌ಸ್ಟಾಕ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಔಟ್‌ಗೆ ಕಾರಣವಾದ ಘಟನೆಯ ಸಂಪೂರ್ಣ ವಿವರಣೆ ನೀಡಿದರು.

ಆಡ್ರಿಯನ್ ಹೋಲ್ಡ್‌ಸ್ಟಾಕ್ ನಿಯಮಗಳನ್ನು ವಿವರಿಸುತ್ತಾ, 2023ರ ವಿಶ್ವಕಪ್‌ನ ಕಾನೂನುಗಳು ಎಂಸಿಸಿ ಕಾನೂನುಗಳನ್ನು ಮೀರಿಸುತ್ತದೆ ಎಂದು ಹೇಳಿದ್ದಾರೆ. ಇದು ವಿಕೆಟ್ ಬಿದ್ದ ನಂತರ ಬ್ಯಾಟರ್ ಸಿದ್ಧವಾಗಲು ಮೂರು ನಿಮಿಷಗಳ ಅವಧಿಯನ್ನು ನೀಡುತ್ತದೆ.

SL vs BAN Match: What Was the Fourth Umpires Explanation of Angelo Mathews Time out?

"ಮೊದಲಿಗೆ ನಾನು ವಿಶ್ವಕಪ್ ಆಡುವ ಪರಿಸ್ಥಿತಿಗಳು ಕ್ರಿಕೆಟ್‌ನ ಎಂಸಿಸಿ ಕಾನೂನುಗಳನ್ನು ಮೀರಿಸಿದೆ ಎಂದು ನಮೂದಿಸಲು ಬಯಸುತ್ತೇನೆ. ಇದು 'ಟೈಮ್ ಔಟ್' ಆಗುವ ಮುನ್ನ, ಕ್ರೀಸ್‌ಗೆ ಬರುವ ಬ್ಯಾಟರ್ ಎರಡು ನಿಮಿಷಗಳಲ್ಲಿ ಚೆಂಡನ್ನು ಸ್ವೀಕರಿಸುವ ಸಿದ್ಧವಾಗಿರಬೇಕು," ಎಂದರು.

"ವಿಕೆಟ್ ಬಿದ್ದ ಬಳಿಕ ಟಿವಿ ಅಂಪೈರ್ ಎರಡು ನಿಮಿಷಗಳ ಕಾಲ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಆನ್-ಫೀಲ್ಡ್ ಅಂಪೈರ್‌ಗಳಿಗೆ ಸಂದೇಶವನ್ನು ರವಾನಿಸುತ್ತಾರೆ," ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿದ ವಿಡಿಯೋದಲ್ಲಿ ಆಡ್ರಿಯನ್ ಹೋಲ್ಡ್‌ಸ್ಟಾಕ್ ಹೇಳಿದರು.

ತಮ್ಮ ಹೆಲ್ಮೆಟ್‌ನ ಬೆಲ್ಟ್ ಹೊರಬರುವ ಮೊದಲೇ ಏಂಜೆಲೊ ಮ್ಯಾಥ್ಯೂಸ್ ಅವರು ಎರಡು ನಿಮಿಷಗಳ ಅವಧಿಯನ್ನು ಈಗಾಗಲೇ ಮೀರಿದ್ದರು ಎಂದು ನಾಲ್ಕನೇ ಅಂಪೈರ್ ಬಹಿರಂಗಪಡಿಸಿದರು. ನಂತರ ಶಕೀಬ್ ಅಲ್ ಹಸನ್ ಅವರು ಆನ್-ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಅವರಿಗೆ ಮನವಿ ಮಾಡಿದರು.

"ಶ್ರೀಲಂಕಾ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಅವರ ಹೆಲ್ಮೆಟ್ ಬೆಲ್ಟ್ ಸಮಸ್ಯೆಯಾಗುವ ಮೊದಲು ಆ ಎರಡು ನಿಮಿಷಗಳಲ್ಲಿ ಬಾಲ್ ಎದುರಿಸಲು ಸಿದ್ಧರಿರಲಿಲ್ಲ. ಆಟದ ಪರಿಸ್ಥಿತಿಗಳ ಪ್ರಕಾರ, ಹೆಲ್ಮೆಟ್‌ನ ಬೆಲ್ಟ್ ಸಡಿಲವಾದ ನಂತರ, ಸ್ಟ್ಯಾಂಡಿಂಗ್ ಅಂಪೈರ್ ಆಗಿದ್ದ ಮರೈಸ್ ಎರಾಸ್ಮಸ್‌ಗೆ ಫೀಲ್ಡಿಂಗ್ ನಾಯಕ ಸಮಯ ಮೀರುತ್ತಿದೆ ಎಂದು ಮನವಿ ಮಾಡಿದರು," ಎಂದು ಆಡ್ರಿಯನ್ ಹೋಲ್ಡ್‌ಸ್ಟಾಕ್ ತಿಳಿಸಿದರು.

ಮಾತು ಮುಂದುವರೆಸಿದ ಆಡ್ರಿಯನ್ ಹೋಲ್ಡ್‌ಸ್ಟಾಕ್, ಏಂಜೆಲೊ ಮ್ಯಾಥ್ಯೂಸ್ ತಮ್ಮ ಹೆಲ್ಮೆಟ್‌ನ ಸ್ಥಿತಿಯನ್ನು ಪರಿಗಣಿಸಲಿಲ್ಲ. ಹೆಲ್ಮೆಟ್ ಸಮಸ್ಯೆಯಾಗುವ ಮೊದಲೇ ಸಿದ್ಧವಾಗಲು ಎರಡು ನಿಮಿಷಗಳ ಅವಧಿಯನ್ನು ಅವರು ಅದಾಗಲೇ ಮೀರಿದ್ದರು. 15 ಸೆಕೆಂಡುಗಳ ಒಳಗೆ ಬ್ಯಾಟರ್‌ಗಳು ತಮ್ಮ ಎಲ್ಲಾ ಉಪಕರಣಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ನಾಲ್ಕನೇ ಅಂಪೈರ್ ಸಲಹೆ ನೀಡಿದರು.

ಎಲ್ಲಾ ಉಪಕರಣಗಳು ಸರಿಯಾಗಿವೆಯೇ ಎಂದು ನೀವು ಖಚಿತಪಡಿಸಿಕೊಳ್ಳಿ; ಹೋಲ್ಡ್‌ಸ್ಟಾಕ್

"ಒಬ್ಬ ಬ್ಯಾಟ್ಸ್‌ಮನ್ ಆಗಿ, ನೀವು ಕ್ರೀಸ್‌ಗೆ ಬರುವುದಕ್ಕಿಂತ ಮುನ್ನ ನಿಮ್ಮ ಎಲ್ಲಾ ಉಪಕರಣಗಳು ಸರಿಯಾಗಿವೆಯೇ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಔಟಾದ ನಂತರದ ಎರಡು ನಿಮಿಷಗಳಲ್ಲಿ ಬಾಲ್ ಎದುರಿಸಲು ನೀವು ಸಿದ್ಧರಾಗಿರಬೇಕು," ಎಂದು ಆಡ್ರಿಯನ್ ಹೋಲ್ಡ್‌ಸ್ಟಾಕ್ ಸಲಹೆ ನೀಡಿದರು.

ಇದೇ ವೇಳೆ ಏಂಜೆಲೊ ಮ್ಯಾಥ್ಯೂಸ್‌ನ ಹೆಲ್ಮೆಟ್‌ನ ಸ್ಥಿತಿಯನ್ನು ಪರಿಗಣಿಸದಿದ್ದಕ್ಕಾಗಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್‌ನನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗಿದ್ದರೆ, ಇನ್ನು ಕೆಲವರು ಅವರನ್ನು ಬೆಂಬಲಿಸಿದ್ದಾರೆ.

Story first published: Tuesday, November 7, 2023, 7:45 [IST]
Other articles published on Nov 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+