For Quick Alerts
ALLOW NOTIFICATIONS  
For Daily Alerts
 

SL vs IRE: 33 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ವನಿಂದು ಹಸರಂಗ; ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್

ಶ್ರೀಲಂಕಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳಖ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಅವರು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲಿ ಐದು ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆರ್‌ಸಿಬಿ ತಂಡದಲ್ಲಿ ಭಾರತದ ಸ್ಟಾರ್ ವಿರಾಟ್ ಕೊಹ್ಲಿಯ ಸಹ ಆಟಗಾರರಾಗಿರುವ ವನಿಂದು ಹಸರಂಗ ಅವರು ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್ ಅವರ 33 ವರ್ಷಗಳ ಹಳೆಯ ದಾಖಲೆಯನ್ನು ಇದೀಗ ಸರಿಗಟ್ಟಿದ್ದಾರೆ. ವಕಾರ್ ಯೂನಿಸ್ ಕೂಡ ಏಕದಿನ ಕ್ರಿಕೆಟ್‌ನಲ್ಲಿ ಸತತ ಮೂರು ಐದು ವಿಕೆಟ್‌ಗಳನ್ನು ಪಡೆದ ಮೊದಲ ವೇಗದ ಬೌಲರ್ ಆಗಿದ್ದಾರೆ.

SL vs IRE: Wanindu Hasaranga Equals 33-year-old Record Of Waqar Younis In ODI Cricket

ವನಿಂದು ಹಸರಂಗ ಅವರ 5 ವಿಕೆಟ್‌ಗಳ ಕಬಳಿಕೆಯ ಅದ್ಭುತ ಪ್ರದರ್ಶನ, ಬುಲವಾಯೊದಲ್ಲಿ ಭಾನುವಾರ, ಜೂನ್ 25ರಂದು ನಡೆದ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 133 ರನ್‌ಗಳಿಂದ ಸೋಲಿಸುವಲ್ಲಿ ನೆರವಾಯಿತು. ಶ್ರೀಲಂಕಾ ತಂಡವು ಐರ್ಲೆಂಡ್ ತಂಡವನ್ನು 192 ರನ್‌ಗಳಿಗೆ ನಿಯಂತ್ರಿಸಿ ಸೂಪರ್ ಸಿಕ್ಸ್ ಸ್ಥಾನವನ್ನು ಪಡೆದುಕೊಂಡಿತು.

ಸತತ ಮೂರು ಏಕದಿನ ಪಂದ್ಯಗಳಲ್ಲಿ 5 ವಿಕೆಟ್ ಕಬಳಿಸಿದ ನಂತರ, ವನಿಂದು ಹಸರಂಗ ಪಾಕಿಸ್ತಾನದ ದಂತಕಥೆ ಬೌಲರ್ ವಕಾರ್ ಯೂನಿಸ್ ಅವರ 33 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದರು.

ಕಳೆದ ಮೂರು ಪಂದ್ಯಗಳಲ್ಲಿ ವನಿಂದು ಹಸರಂಗ 24 ರನ್‌ಗಳಿಗೆ 6 ವಿಕೆಟ್, 13 ರನ್‌ಗಳಿಗೆ 5 ವಿಕೆಟ್ ಮತ್ತು 79 ರನ್‌ಗಳಿಗೆ 5 ವಿಕೆಟ್‌ಗಳ ಬೌಲಿಂಗ್ ಅಂಕಿಅಂಶಗಳನ್ನು ಹೊಂದಿದ್ದರೆ, ಈ ಹಿಂದೆ ವಕಾರ್ ಯೂನಿಸ್ 11 ರನ್‌ಗಳಿಗೆ 5 ವಿಕೆಟ್, 16 ರನ್‌ಗಳಿಗೆ 5 ವಿಕೆಟ್ ಮತ್ತು 52 ರನ್‌ಗಳಿಗೆ 5 ವಿಕೆಟ್‌ಗಳ ದಾಖಲೆಯನ್ನು ದಾಖಲಿಸಿದ್ದರು.

ಭಾನುವಾರದ ಪಂದ್ಯದಲ್ಲಿ ಬಲಗೈ ಲೆಗ್ ಸ್ಪಿನ್ನರ್ ವನಿಂದು ಹಸರಂಗ ತನ್ನ 10 ಓವರ್‌ಗಳಲ್ಲಿ 7.90ರ ಯೋಗ್ಯ ಎಕಾನಮಿ ದರದಲ್ಲಿ 79 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು.

ಶ್ರೀಲಂಕಾ ಮತ್ತು ಐರ್ಲೆಂಡ್ ಪಂದ್ಯದ ಕುರಿತು ಮಾತನಾಡುವುದಾದರೆ, ಐರ್ಲೆಂಡ್ ಟಾಸ್ ಗೆದ್ದು ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.

ಶ್ರೀಲಂಕಾ ತಂಡ ಕರುಣಾರತ್ನೆ ಅವರ ಭರ್ಜರಿ ಶತಕ ಮತ್ತು ಸದೀರ ಸಮರವಿಕ್ರಮ ಅವರ 82 ರನ್‌ಗಳು ಮತ್ತು ಧನಂಜಯ ಡಿ ಸಿಲ್ವಾ ಅವರ 42 ರನ್‌ಗಳ ನೆರವಿನಿಂದ 49.5 ಓವರ್‌ಗಳಲ್ಲಿ 325 ರನ್ ಕಲೆಹಾಕಿತು. ಮಾರ್ಕ್ ಆಡೈರ್ 46 ರನ್‌ಗೆ 4 ವಿಕೆಟ್ ಮತ್ತು ಬ್ಯಾರಿ ಮೆಕಾರ್ಥಿ 56 ರನ್‌ಗಳಿಗೆ 3 ವಿಕೆಟ್ ಪಡೆದು ಮಿಂಚಿದರು.

ಪ್ರತ್ಯುತ್ತರವಾಗಿ, ಐರ್ಲೆಂಡ್ ತಂಡ 31 ಓವರ್‌ಗಳಲ್ಲಿ ಕೇವಲ 192 ರನ್‌ಗಳಿಗೆ ಆಲೌಟ್ ಆಯಿತು. ಕರುಣಾರತ್ನೆ ತಮ್ಮ ಶತಕಕ್ಕಾಗಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಈ ಫಲಿತಾಂಶದೊಂದಿಗೆ ಶ್ರೀಲಂಕಾ ಕ್ವಾಲಿಫೈಯರ್‌ನ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಿದರೆ, ಐರ್ಲೆಂಡ್ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯುವ ರೇಸ್‌ನಿಂದ ಹೊರಗುಳಿದಿದೆ.

Story first published: Monday, June 26, 2023, 15:37 [IST]
Other articles published on Jun 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+