ನ್ಯೂಜಿಲೆಂಡ್ vs ಶ್ರೀಲಂಕಾ: ಶಿಪ್ಲಿ ಶಾಕ್‌ಗೆ ಲಂಕಾ ವಿಲವಿಲ: ಮೊದಲ ಏಕದಿನದಲ್ಲೂ ಸೋಲಿನ ಆಘಾತ

ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಟಾಸ್ ಗೆಲುವು ಸಾಧಿಸಿದರೂ ಶ್ರೀಲಂಕಾ ತಂಡ ಅದರ ಲಾಭವನ್ನು ಪಡೆಯಲು ವಿಫಲವಾಗಿದ್ದು ಮೊದಲಿಗೆ ಬೌಲಿಂಗ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ವಿಫಲವಾದ ಶ್ರೀಲಂಕಾ ತಂಡ ಬಳಿಕ ಬ್ಯಾಟಿಂಗ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆತಿಥೆಯ ನ್ಯೂಜಿಲೆಂಡ್ ತಂಡಕ್ಕೆ ಹೇಳಿಕೊಳ್ಳುವಂತಾ ಜೊತೆಯಾಟ ದೊರೆಯಲಿಲ್ಲ. ಆದರೆ ಫಿನ್ ಅಲೆನ್ ಸಿಡಿಸಿದ ಅರ್ಧ ಶತಕ ಡ್ಯಾರೆಲ್ ಮಿಚೆಲ್ ಅವರ 47 ರನ್‌ಗಳ ಕೊಡುಗೆ ಹಾಗೂ ರಚಿನ್ ರವೀಂದ್ರ ಅವರ 49 ರನ್‌ಗಳ ಕೊಡುಗೆಯ ಕಾರಣದಿಂದಾಗಿ 49.3 ಓವರ್‌ಗಳಲ್ಲಿ ನ್ಯೂಜಿಲೆಂಡ್ ತಂಡ 274 ರನ್‌ಗಳಿಸಿತು, ಈ ಮೂಲಕ ನ್ಯೂಜಿಲೆಂಡ್ ತಂಡ ಸವಾಲಿನ ಗುರಿ ನಿಗದಿ ಪಡಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಆರಂಭದಿಂದಲೇ ಆಘಾತ ಅನುಭವಿಸುತ್ತಾ ಸಾಗಿತು. ತಂಡದ ಯಾವೊಬ್ಬ ಆಟಗಾರ ಕೂಡ ಹೆಚ್ಚು ಹೊತ್ತ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಲೇ ಇಲ್ಲ. ಎಂಜಲೋ ಮ್ಯಾಥ್ಯೂಸ್ ಅವರ ಬ್ಯಾಟ್‌ನಿಂದ ಬಂದ 18 ರನ್‌ಗಳ ಕೊಡುಗೆ ಲಂಕಾ ಪರ ದಾಖಲಾದ ಅತಿ ಹೆಚ್ಚಿನ ಮೊತ್ತವಾಗಿದೆ. ಹೀಗಾಗಿ ಶ್ರೀಲಂಕಾ ತಂಡ 19.5 ಓವರ್‌ಗಳಲ್ಲಿ ಕೇವಲ 76 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಶ್ರೀಲಂಕಾ ತಂಡ 198 ರನ್‌ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿದಂತಾಗಿದೆ.
ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದ್ದು ಐದು ವಿಕೆಟ್ ಕಿತ್ತು ಅಬ್ಬರಿಸಿದರು. ತಮ್ಮ 7 ಓವರ್‌ಗಳ ಬೌಲಿಂಗ್‌ನಲ್ಲಿ 4.40 ಎಕಾನಮಿಯಲ್ಲಿ 31 ನೀಡಿ ಈ ಐದು ವಿಕೆಟ್‌ಗಳ ಗೊಂಚಲು ತಮ್ಮದಾಗಿಸಿದರು. ಉಳಿದಂತೆ ಡೆರೆಲ್ ಮಿಚೆಲ್ ಹಾಗೂ ಬ್ಲೈರ್ ಟಿಕ್ನರ್ ತಲಾ 2 ವಿಕೆಟ್ ಕಬಳಿಸಿದರು.
ಈ ಸೋಲಿನಿಂದಿಗೆ ಶ್ರೀಲಂಕಾ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-1 ಅಂತರದಿಂದ ಹಿನ್ನಡೆ ಅನುಭವಿಸಿದೆ. ಇನ್ನು ಇದಕ್ಕೂ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿಯೂ ಶ್ರೀಲಂಕಾ ತಂಡ ವೈಟ್‌ವಾಶ್ ಮುಖಭಂಗ ಅನುಭವಿಸಿತ್ತು.
ನ್ಯೂಜಿಲೆಂಡ್ ಆಡುವ ಬಳಗ: ಫಿನ್ ಅಲೆನ್, ಚಾಡ್ ಬೋವ್ಸ್, ವಿಲ್ ಯಂಗ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಹೆನ್ರಿ ಶಿಪ್ಲಿ, ಇಶ್ ಸೋಧಿ, ಮ್ಯಾಟ್ ಹೆನ್ರಿ, ಬ್ಲೇರ್ ಟಿಕ್ನರ್
ಬೆಂಚ್: ಲಾಕಿ ಫರ್ಗುಸನ್, ಮಾರ್ಕ್ ಚಾಪ್ಮನ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್, ಬೆನ್ ಲಿಸ್ಟರ್
ಶ್ರೀಲಂಕಾ ಆಡುವ ಬಳಗ: ನುವಾನಿಡು ಫೆರ್ನಾಂಡೊ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದಾಸುನ್ ಶನಕ (ನಾಯಕ), ವನಿಂದು ಹಸರಂಗ,
ಚಾಮಿಕ ಕರುಣಾರತ್ನೆ, ಕಸುನ್ ರಜಿತ, ಲಹಿರು ಕುಮಾರ, ದಿಲ್ಶನ್ ಮಧುಶಂಕ
ಬೆಂಚ್: ಧನಂಜಯ ಡಿ ಸಿಲ್ವ, ಮಹೇಶ ತೀಕ್ಷಣ, ಸದೀರ ಸಮರವಿಕ್ರಮ, ಪ್ರಮೋದ್ ಮದುಶನ್, ಸಹನ್ ಆರಚ್ಚಿಗೆ, ದುನಿತ್ ವೆಳ್ಳಾಲಗೆ, ಮತೀಶ ಪತಿ ರಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications