SL vs NZ: ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಯಂಗ್ ಬ್ಯಾಟರ್ ಸಂಚಲನ
ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನವೇ ಶ್ರೀಲಂಕಾ ಬ್ಯಾಟರ್ ಕಮಿಂದು ಮೆಂಡಿಸ್ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ 25 ವರ್ಷದ ಯುವ ಬ್ಯಾಟರ್ ಟೆಸ್ಟ್ ಕ್ರಿಕೆಟ್ ತಮ್ಮ ವೃತ್ತಿಜೀವನವನ್ನು ಉತ್ತಮವಾಗಿ ಆರಂಭಿಸಿದ್ದಾರೆ.
ಕಮಿಂದು ಮೆಂಡಿಸ್ ಮೊದಲ ಟೆಸ್ಟ್ ಪಂದ್ಯದಿಂದಲ್ಲೂ ಶ್ರೀಲಂಕಾ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಅವರು ತಮ್ಮ 8ನೇ ಟೆಸ್ಟ್ ಪಂದ್ಯದಲ್ಲಿ ವಿಶ್ವ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್‌ಗಳನ್ನು ಮುರಿದ್ದಾರೆ. ಅಲ್ಲದೆ, ಇಲ್ಲಿವರೆಗೆ ಯಾವ ಬ್ಯಾಟರ್ ಮಾಡದ ದಾಖಲೆಯನ್ನು ಕಮಿಂದು ಮೆಂಡಿಸ್ ಸೃಷ್ಟಿಸಿದ್ದಾರೆ.

ಗುರುವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿದೆ. ಶ್ರೀಲಂಕಾ ಪರ ದಿನೇಶ್ ಚಾಂದಿಮಾಲ್ ಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟರು. ಇದಾದ ಬಳಿಕ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಭರ್ಜರಿ ಫಾರ್ಮ್‌ನಲ್ಲಿರುವ ಕಮಿಂದು ಮೆಂಡಿಸ್ ದಿನದಾಟದ ಅಂತ್ಯಕ್ಕೆ ಅರ್ಧಶತಕ (51) ಬಾರಿಸಿದ್ದು, ಅಜೇಯರಾಗಿ ಉಳಿದ್ದಾರೆ.
ಮೆಂಡಿಸ್ ವಿಶ್ವ ದಾಖಲೆ
147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕಮಿಂದು ಮೆಂಡಿಸ್ ವಿಶೇಷ ಸಾಧನೆ ಗೈದಿದ್ದಾರೆ. ಟೆಸ್ಟ್ ಕ್ರಿಕೆಟ್ ಪಾರ್ದಪಣೆ ಮಾಡಿದ ಬಳಿಕ ಅವರು ಸತತ ಎಂಟು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಸತತ 8 ಟೆಸ್ಟ್ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಂತರ ಯಾರೂ ಸತತ 8 ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿರಲಿಲ್ಲ.
ಮೆಂಡಿಸ್‌ಗೂ ಮುನ್ನ ಈ ವಿಶ್ವ ದಾಖಲೆ ಪಾಕಿಸ್ತಾನದ ಬ್ಯಾಟರ್ ಸೌದ್ ಶಕೀಲ್ ಹೆಸರಿನಲ್ಲಿತ್ತು. ಸೌದ್ ಶಕೀಲ್ ಅವರು ಚೊಚ್ಚಲ ಪಂದ್ಯದಿಂದ ಸತತ 7 ಟೆಸ್ಟ್‌ಗಳಲ್ಲಿ ಅರ್ಧ ಶತಕಗಳನ್ನು ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಜೊತೆಗೆ ನ್ಯೂಜಿಲೆಂಡ್‌ನ ಬರ್ಟ್ ಸಟ್‌ಕ್ಲಿಫ್, ಭಾರತದ ಸುನೀಲ್ ಗವಾಸ್ಕರ್, ಪಾಕಿಸ್ತಾನದ ಸಯೀದ್ ಅಹ್ಮದ್ ಮತ್ತು ವೆಸ್ಟ್ ಇಂಡೀಸ್‌ನ ಬಾಸಿಲ್ ಬಚಾರ್ ಕೂಡ ಈ ದಾಖಲೆಯನ್ನು ಬರೆದಿದ್ದರು. ಈ ಎಲ್ಲಾ ದಿಗ್ಗಜ ಬ್ಯಾಟರ್‌ಗಳು ತಮ್ಮ ಪಾದಾರ್ಪಣೆ ಟೆಸ್ಟ್ ಪಂದ್ಯದಿಂದ ಸತತ 6 ಟೆಸ್ಟ್ ಪಂದ್ಯಗಳಲ್ಲಿ ಅರ್ಧ ಶತಕ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications