For Quick Alerts
ALLOW NOTIFICATIONS  
For Daily Alerts
 

SL vs NZ Test: ಇನಿಂಗ್ಸ್‌ ಮುನ್ನಡೆಯತ್ತ ನ್ಯೂಜಿಲೆಂಡ್ ದಾಪುಗಾಲು

ಗಾಲೆ: ಭರವಸೆಯ ಆಟಗಾರರಾದ ಟಾಮ್‌ ಲಾಥಮ್‌ ಹಾಗೂ ಕೇನ್‌ ವಿಲಿಯಮ್ಸನ್‌ ಅವರ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ಮೊದಲ ಟೆಸ್ಟ್‌ನಲ್ಲಿ, ಶ್ರೀಲಂಕಾ ವಿರುದ್ಧ ಇನಿಂಗ್ಸ್‌ ಮುನ್ನಡೆಯತ್ತ ದಾಪುಗಾಲು ಇಟ್ಟಿದೆ.

ಗುರುವಾರ ಮೊದಲ ಟೆಸ್ಟ್‌ನ ಎರಡನೇ ದಿನದಾಟವನ್ನು ಆರಂಭಿಸಿದ ಶ್ರೀಲಂಕಾ 305 ರನ್‌ಗಳಿಗೆ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ದಿನದಾಟದಂತ್ಯಕ್ಕೆ 4 ವಿಕೆಟ್‌ಗೆ 255 ರನ್‌ ಸೇರಿಸಿತು. ಕಿವೀಸ್ ತಂಡದ ಪರ ಡೇರಿಲ್ ಮಿಚೆಲ್ (ಅಜೇಯ 41) ಹಾಗೂ ಟಾಮ್ ಬ್ಲಂಡೆಲ್ (ಅಜೇಯ 18) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಇನಿಂಗ್ಸ್‌ ಮುನ್ನಡೆ ಸಾಧಿಸಲು ನ್ಯೂಜಿಲೆಂಡ್ ತಂಡಕ್ಕೆ ಇನ್ನು 50 ರನ್‌ ಅವಶ್ಯಕತೆ ಇದೆ.

SL vs NZ Test New Zealand close to innings lead after Latham and Williamson s knocks in Galle Test

3 ರನ್‌ಗೆ 3 ವಿಕೆಟ್‌

ಗುರುವಾರದ ಆಟವನ್ನು ಶ್ರೀಲಂಕಾ 7 ವಿಕೆಟ್‌ಗೆ 302 ರನ್‌ಗಳಿಂದ ಮುಂದುವರೆಸಿ, ಕೇವಲ ಮೂರು ರನ್‌ ಸೇರಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು 305 ರನ್‌ ಸೇರಿಸಿತು. ಕಿವೀಸ್ ತಂಡದ ಪರ ವಿಲಿಯಂ ಒ'ರೂರ್ಕ್ ಐದು ವಿಕೆಟ್‌ ಪಡೆದು ಮಿಂಚಿದರು.

ಉತ್ತಮ ಆರಂಭ

ಪ್ರವಾಸಿ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ ಉತ್ತಮವಾಗಿ ಆರಂಭಿಸಿತು. ಟಾಮ್‌ ಲಾಥಮ್‌ ಹಾಗೂ ಡೇವನ್‌ ಕಾನ್ವೆ (17) ಜೊತೆಗೂಡಿ ಮೊದಲ ವಿಕೆಟ್‌ಗೆ 63 ರನ್‌ ಸೇರಿಸಿದರು. ಎರಡನೇ ವಿಕೆಟ್‌ಗೆ ಟಾಮ್‌ ಲಾಥಮ್ ಹಾಗೂ ಕೇನ್‌ ವಿಲಿಯಮ್ಸನ್‌ ಜೊತೆಗೂಡಿ ತಂಡಕ್ಕೆ ಆಧಾರವಾದರು. ಈ ಜೊಡಿ 120 ಎಸೆತಗಳಲ್ಲಿ 73 ರನ್‌ ಸೇರಿಸಿತು. ಟಾಮ್‌ ಲಾಥಮ್‌ 6 ಬೌಂಡರಿ ಸೇರಿದಂತೆ 70 ರನ್‌ ಸಿಡಿಸಿ ಔಟ್ ಆದರು.

SL vs NZ Test New Zealand close to innings lead after Latham and Williamson s knocks in Galle Test

ಕೇನ್‌ ಅರ್ಧಶತಕ

ನ್ಯೂಜಿಲೆಂಡ್ ತಂಡದ ಭರವಸೆಯ ಆಟಗಾರ ಕೇನ್‌ ವಿಲಿಯಮ್ಸನ್‌ ತಂಡಕ್ಕೆ ನೆರವಾದರು. ಇವರು ಮೂರನೇ ವಿಕೆಟ್‌ಗೆ ರಚಿನ್ ರವಿಂದ್ರ (39) ಅವರೊಂದಿಗೆ 84 ಎಸೆತಗಳಲ್ಲಿ 51 ರನ್‌ ಸಿಡಿಸಿದರು. ಕೇನ್‌ ತಮ್ಮ ನೈಜ ಆಟವನ್ನು ಆಡಿ 55 ರನ್‌ ಸಿಡಿಸಿ ಔಟ್ ಆದರು. ಡೇರಿಲ್ ಮಿಚೆಲ್ ಹಾಗೂ ಟಾಮ್ ಬ್ಲಂಡೆಲ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರೂ ಮೊದಲಾವಧಿಯ ಆಟದಲ್ಲಿ ಎಚ್ಚರಿಕೆಯ ಆಟವನ್ನು ಆಡುವ ಅವಶ್ಯಕತೆ ಇದೆ. ಅಂದಾಗ ದೊಡ್ಡ ಮುನ್ನಡೆಯ ಕನಸು ನನಸಾಗುತ್ತದೆ.

ಲಂಕಾ ಪರ ಧನಂಜಯ್ ಡಿಸಿಲ್ವಾ 2, ಪ್ರಭಾತ್ ಜಯಸೂರ್ಯ ಹಾಗೂ ರಮೇಶ್ ಮೆಂಡಿಸ್ ತಲಾ ಒಂದು ವಿಕೆಟ್‌ ಪಡೆದರು.

Story first published: Thursday, September 19, 2024, 23:47 [IST]
Other articles published on Sep 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+