ಬಯೋಬಬಲ್ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರಿಗೆ ಒಂದು ವರ್ಷಗಳ ನಿಷೇಧ

ಇಂಗ್ಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ಆಟಗಾರರು ಬಯೋಬಬಲ್ ಉಲ್ಲಂಘಿಸಿ ಸುದ್ದಿಯಾಗಿದ್ದರು. ಈ ಆಟಗಾರರನ್ನು ಶ್ರೀಲಂಕಾ ತಲ್ಷಣವೇ ಅಮಾನತುಗೊಳಿಸಿ ತವರಿಗೆ ವಾಪಾಸ್ ಕಳುಹಿಸಿತ್ತು. ಇದೀಗ ಮತ್ತಷ್ಟು ಕಠಿಣ ಕ್ರಮಕೈಗೊಂಡಿದ್ದು ಬಯೋಬಬಲ್ ಉಲ್ಲಂಘಿಸಿದ ಮೂವರು ಆಟಗಾರರಾದ ಕುಸಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ ಮತ್ತು ದನುಷ್ಕಾ ಗುಣತಿಲಕ ಅವರಿಗೆ ಒಂದು ವರ್ಷಗಳ ನಿಷೇಧವನ್ನು ವಿಧಿಸಲಾಗಿದೆ.
ಶ್ರೀಲಂಕಾದ ಕ್ರಿಕೆಟಿಗರಾದ ಕುಸಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ ಮತ್ತು ದನುಷ್ಕಾ ಗುಣತಿಲಕ ಇಂಗ್ಲೆಂಡ್‌ನಲ್ಲಿ ಟಿ20 ಸರಣಿಯ ಅಂತ್ಯದ ಬಳಿಕ ಬಯೋಬಬಲ್ ಉಲ್ಲಂಘನೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಇದಕ್ಕೆ ಪೂರಕವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾರಣ ಲಂಕಾ ಮಂಡಳಿ ಈ ಆಟಗಾರರನ್ನು ತಕ್ಷಣವೇ ಅಮಾನತುಗೊಳಿಸಿ ತವರಿಗೆ ವಾಪಾಸ್ ಕರೆಸಿಕೊಳ್ಳುವ ನಿರ್ಧಾರ ಮಾಡಿತ್ತು. ಮಂಗಳವಾರ ಈ ಆಟಗಾರರು ಶ್ರೀಲಂಕಾಗೆ ವಾಪಾಸಾಗಿದ್ದರು.

ನಾಲ್ಕು ದಿನಗಳಲ್ಲಿ ನಿರ್ಧಾರ
ಜೂನ್ 30ರಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇಂಗ್ಲೆಂಡ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರು ಬಯೋಬಬಲ್ ಉಲ್ಲಂಘಿಸಿದ ನಾಲ್ಕೇ ದಿನಗಳಲ್ಲಿ ಈ ದೊಡ್ಡ ನಿರ್ಧಾರವನ್ನು ಶ್ರೀಲಂಕಾ ಕ್ರಿಕೆಟ್ ಪ್ರಕಟಿಸಿದೆ. ಈ ಮೂವರು ಶ್ರೀಲಂಕಾ ಕ್ರಿಕೆಟಿಗರು ಕೂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿದಿದ್ದರು.

ಶನಿವಾರ ರಾತ್ರಿ ಬಯೋಬಬಲ್ ಉಲ್ಲಂಘನೆ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶ್ರೀಲಂಕಾ 0-3 ಅಂತರದಿಂದ ಸೋಲು ಕಂಡ ರಾತ್ರಿಯೇ ಈ ಆಟಗಾರರು ಬಯೋಬಬಲ್ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದರು. ಕೊರೊನಾವೈರಸ್‌ನ ಕಾರಣದಿಂದಾಗಿ ಕಠಿಣ ನಿಯಮಗಳ ಹೊರತಾಗಿಯೂ ಕುಸಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ ಮತ್ತು ದನುಷ್ಕಾ ಗುಣತಿಲಕ ಬಯೋಬಬಲ್ ವ್ಯಾಪ್ತಿಯಿಂದ ಹೊರಹೋಗಿದ್ದರು.

ವಿಶ್ವಕಪ್‌ನಿಂದಲೂ ದೂರ
ಶ್ರೀಲಂಕಾ ಕ್ರಿಕೆಟ್ ಮಂಡಳಿ ತೆಗೆದುಕೊಂಡಿರುವ ಈ ಕಠಿಣ ನಿರ್ಧಾರದಿಂದಾಗಿ ಈ ಮೂವರು ಕ್ರಿಕೆಟಿಗರು ಮುಂದಿನ ಜೂನ್ ತಿಂಗಳಿನವರೆಗೂ ಕ್ರಿಕೆಟ್ ಚಟುವಟಿಕೆಗಳಿಂದ ದೂರವುಳಿಯಲಿದ್ದಾರೆ. ಹೀಗಾಗಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದಲೂ ಈ ಆಟಗಾರರು ಹೊರಗುಳಿಯಲಿದ್ದಾರೆ.

ಶ್ರೀಲಂಕಾ ತಂಡಕ್ಕೆ ಹಿನ್ನಡೆ
ಈ ಮೂವರು ಆಟಗಾರರ ನಿಷೇಧ ಶ್ರೀಲಂಕಾ ಕ್ರಿಕೆಟ್ ತಂಡದ ಪಾಲಿಗೆ ನಿಜಕ್ಕೂ ದೊಡ್ಡ ಹಿನ್ನೆಡೆಯಾಗಲಿದೆ. ಈಗಾಗಲೇ ಸೋಲಿನ ಮೇಲೆ ಸೋಲನ್ನು ಕಂಡು ಸಾಕಷ್ಟು ಟೀಕೆಗೆ ಗುರಿಯಾಗಿರುವ ಲಂಕಾ ಕ್ರಿಕೆಟ್ ತಂಡ ಹಠಾತ್ ಆಗಿ ಮೂವರು ಆಟಗಾರರ ಸೇವೆಯಿಂದ ವಂಚಿತವಾಗಲಿದೆ. ಮೂವರು ಕೂಡ ಲಂಕಾ ತಂಡದ ಅನುಭವಿ ಆಟಗಾರರಾಗಿದ್ದಾರೆ. ಮೂವರು ಆಟಗಾರರು ಕೂಡ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಕನಿಷ್ಟ 25 ಪಂದ್ಯಗಳನ್ನು ಆಡಿದ ಅನುಭವಿಗಳಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications