Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿದೇಶಿ ಫುಟ್ಬಾಲ್‌ ಆಟಗಾರ ಶಿವನ ಆರಾಧಕ, ಬೆನ್ನಿನ ಮೇಲಿದೆ ಮಹಾದೇವನ ಟ್ಯಾಟೋ

ಭಾರತೀಯ ಆಟಗಾರರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಆದರೆ ಹಲವು ವಿದೇಶಿ ಆಟಗಾರರು ಭಾರತೀಯ ಸಂಸ್ಕೃತಿಯತ್ತ ಗಮನ ಹರಿಸುತ್ತಿದ್ದಾರೆ. ಕೆಲವು ಆಟಗಾರರು ಮಾನಸಿಕ ನೆಮ್ಮದಿ ಹಾಗೂ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಧ್ಯಾನದ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವು ವಿದೇಶಿ ಆಟಗಾರರು ಆಧ್ಯಾತ್ಮಿಕತೆ ಮತ್ತು ಹಿಂದೂ ದೇವತೆಗಳ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂಬಂತೆ, ವಿದೇಶಿ ಫುಟ್‌ಬಾಲ್ ಆಟಗಾರನೊಬ್ಬ ತನ್ನ ಬೆನ್ನಿನ ಮೇಲೆ ಭಗವಾನ್ ಶಿವನ ಬೃಹತ್ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಆ ಕುರಿತ ವಿವರ ಇಲ್ಲಿದೆ.

ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಆಧ್ಯಾತ್ಮಿಕತೆಯು ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ, ಅದು ಜಗತ್ತಿನಾದ್ಯಂತ ಪ್ರಭಾವ ಬೀರಿದೆ ಎಂಬುದಕ್ಕೆ ಈ ಫುಟ್ಬಾಲ್ ಆಟಗಾರನೇ ಸಾಕ್ಷಿ. ಸ್ಲೊವೇನಿಯನ್ ಫುಟ್ಬಾಲ್ ಆಟಗಾರ ಲುಕಾ ಮೆಜ್ಸೆನ್ ಪ್ರಸ್ತುತ ಭಾರತದಲ್ಲಿ ಚರ್ಚೆಯಲ್ಲಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಆರ್‌ಜಿ ಪಂಜಾಬ್ ಫುಟ್‌ಬಾಲ್ ಕ್ಲಬ್ ಪರ ಆಡಿರುವ ಈ ವಿದೇಶಿ ಆಟಗಾರ ಇದೀಗ ಸುದ್ದಿಯಲ್ಲಿದ್ದಾರೆ. ಇವರು ತಮ್ಮ ಬೆನ್ನಿನ ಮೇಲೆ ಮಹಾಕಾಲ ಶಿವನ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

Slovenian Footballer

ಲುಕಾ ಮೆಜ್ಸೆನ್ ತಮ್ಮ ಬೆನ್ನಿನ ಮೇಲೆ ಶಿವನ ದೊಡ್ಡ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೋದ ಸುತ್ತಲೂ ಮಹಾಮೃತ್ಯುಂಜಯ ಮಂತ್ರವನ್ನು ಸಹ ಹಾಕಿಸಿಕೊಂಡಿದ್ದಾರೆ. ವಿದೇಶಿ ಆಟಗಾರ ಶಿವನ ಪ್ರೀತಿ ಜನರನ್ನು ಆಕರ್ಷಿಸುತ್ತಿದೆ. ಇವರು ಸ್ಲೊವೇನಿಯಾ ಪರ 18 ವರ್ಷದೊಳಗಿನ ಮತ್ತು 21 ವರ್ಷದೊಳಗಿನ ತಂಡಗಳಲ್ಲಿ ಸ್ಲೊವೇನಿಯಾ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಭಾರತೀಯ ಸ್ನೇಹಿತನ ಮನೆಗೆ ಭೇಟಿ ನೀಡಿದಾಗ, ಮೆಜ್ಸೆನ್‌ ಅವರಿಗೆ ಶಿವನ ಮೇಲೆ ಭಕ್ತಿ ಬೆಳೆಯಿತು ಎಂದು ತಿಳಿದು ಬಂದಿದೆ.

2020 ರಲ್ಲಿ, ಲುಕಾ ಮೆಜ್ಸೆನ್ ಮೊದಲು ಐ-ಲೀಗ್‌ನಲ್ಲಿ ಚರ್ಚಿಲ್ ಬ್ರದರ್ಸ್ ಪರ ಆಡಿದರು. 2021 ರಲ್ಲಿ, ಅವರು ಅದೇ ಪಂದ್ಯಾವಳಿಯ ಎರಡನೇ ವಿಭಾಗದಲ್ಲಿ ಬೆಂಗಳೂರು ಯುನೈಟೆಡ್ ಪರ ಆಡಿದರು. ಈ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಮೆಜ್ಸೆನ್ ಅತಿ ಹೆಚ್ಚು ಗೋಲು ದಾಖಲಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಇದೇ ಲೀಗ್‌ನಲ್ಲಿ ಬೆಂಗಳೂರು ತಂಡ ಚಾಂಪಿಯನ್ ಆಗುವಲ್ಲಿ ಇವರ ಕಾಣಿಕೆ ಅಪಾರ. 2022ರಲ್ಲಿ ಇವರು ಗೋಕುಲಂ ಕೇರಳ ತಂಡದ ಪರ ಸಹ ಆಡಿದರು. ಮತ್ತೆ ತಂಡವನ್ನು ಪ್ರಶಸ್ತಿ ಸುತ್ತಿಗೆ ಕೊಂಡೊಯ್ಯುವಲ್ಲಿ ಸಫಲರಾದರು. ಇನ್ನು 2023ರಲ್ಲಿ ಇವರು ಐಎಸ್‌ಎಲ್‌ಗೆ ಪದಾರ್ಪಣೆ ಮಾಡಿದರು.

ಕೋಪ ಕಡಿಮೆ ಮಾಡಿಕೊಳ್ಳಲು ಶಿವ ಪ್ರೇರಣೆ

ಲುಕಾ ಮೆಜ್ಸೆನ್ ಆರಂಭದಲ್ಲಿ ಕೋಪಿಷ್ಟರಾಗಿದ್ದರು. ಇವರು ಶಿವನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದರು. ಆಗ ಅವರು ಶಿವನಿಗೆ ರುದ್ರ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ಅವರು ಕಂಡುಹಿಡಿದರು. ಮೆಜ್ಸೆನ್ ತುಂಬಾ ಕೋಪಗೊಳ್ಳುತ್ತಿದ್ದರು. ಶಿವನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ನಂತರ, ಮೆಜ್ಸೆನ್ ತಮ್ಮ ಕೋಪವನ್ನು ಧ್ಯಾನವಾಗಿ ಪರಿವರ್ತಿಸಿದ್ದಾರೆ. ಭಾರತಕ್ಕೆ ಬಂದ ನಂತರ ಶಿವನ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ಈ ವಿದೇಶಿ ಫುಟ್ಬಾಲ್ ಆಟಗಾರ ಒಪ್ಪಿಕೊಂಡರು.

Story first published: Wednesday, June 24, 2026, 22:14 [IST]
Other articles published on Jun 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+