For Quick Alerts
ALLOW NOTIFICATIONS  
For Daily Alerts
 

Maharaja T20 Trophy: ಐಪಿಎಲ್‌ ಮಾಲೀಕರ ಚಿತ್ತ ಕದ್ದ ಆರ್‌. ಸ್ಮರಣ್‌; ಮೈಸೂರು ವಿರುದ್ಧ ಆರ್ಭಟ

ಈ ಬಾರಿ ಐಪಿಎಲ್‌ನಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೆ ಭರದ ಸಿದ್ಧತೆಗಳು ನಡೆದಿವೆ. ಈ ಹರಾಜಿನಲ್ಲಿ ಮಾಲೀಕರ ಚಿತ್ತ ಕದಿಯುವುದೇ ಯುವ ಆಟಗಾರರ ಮೇನ್‌ ಟಾರ್ಗೆಟ್‌. ಈ ನಿಟ್ಟಿನಲ್ಲಿ ಕನ್ನಡಿಗನೊಬ್ಬ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ಮಾಲೀಕರ ಚಿತ್ತ ಕದಿಯಲು ಸಫಲನಾಗಿದ್ದಾನೆ. ಮಹಾರಾಜ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ಆಟಗಾರ ಗುಲ್ಬರ್ಗ ಜಯದಲ್ಲಿ ಮಿಂಚಿದ್ದಾರೆ.

18ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಈ ಬಾರಿ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಐಪಿಎಲ್‌ ತಂಡಗಳ ಮಾಲೀಕರು ರಿಟೇನ್‌ ಮಾಡಿದ ಹಾಗೂ ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ನೀಡಬೇಕಿದೆ. ಈ ಮಧ್ಯದಲ್ಲಿ ದೇಶದಲ್ಲಿ ಹಲವು ಟೂರ್ನಿಗಳು ಆರಂಭವಾಗಿವೆ. ಕರ್ನಾಟಕದಲ್ಲಿ ಟಿ20 ಲೀಗ್‌ ಆರಂಭವಾಗಿದ್ದು, ಗುಲ್ಬರ್ಗ ಮಿಸ್ಟೆಕ್ಸ್ ತಂಡದ ಆಟಗಾರ ಆರ್‌. ಸ್ಮರಣ್‌ ಎಲ್ಲರ ಚಿತ್ತ ಕದ್ದಿದ್ದಾರೆ.

Smaran R s Century Seals Last-Ball Win for Gulbarga Mystics

ಮೈಸೂರುಗೆ ಸೋಲು

ಈಗಾಗಲೇ ಐಪಿಎಲ್‌ನಲ್ಲಿ ಹಲವು ಕರ್ನಾಟಕದ ಆಟಗಾರರು ಮಿಂಚು ಹರಿಸಿದ್ದಾರೆ. ಈ ಸಾಲಿಗೆ ಸೇರಲು ಆರ್‌. ಸ್ಮರಣ್‌ ಸಿದ್ಧರಾಗಿದ್ದಾರೆ. ಭಾನುವಾರ ಮಹಾರಾಜ್ ಟ್ರೋಫಿಯ ಏಳನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಗುಲ್ಬರ್ಗ ಮಿಸ್ಟೆಕ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ಮೊದಲು ಬ್ಯಾಟ್ ಮಾಡಿ 8 ವಿಕೆಟ್‌ ವಿಕೆಟ್‌ ಕಳೆದುಕೊಂಡು 196 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಲ್ಬರ್ಗ್‌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ನಷ್ಟಕ್ಕೆ 200 ರನ್‌ ಸೇರಿಸಿ ಜಯ ಸಾಧಿಸಿತು.

ಸ್ಮರಣ್‌ ಶತಕದ ಸಂಭ್ರಮ

ಎಡಗೈ ಬ್ಯಾಟರ್‌ ಆರ್‌. ಸ್ಮರಣ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಗುಲ್ಬರ್ಗ ಸುಲಭ ಜಯ ಸಾಧಿಸಿತು. ಆರ್‌. ಸ್ಮರಣ್‌ ಕೇವಲ 60 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್‌ ನೆರವಿನಿಂದ ಅಜೇಯ 104 ರನ್ ಸಿಡಿಸಿದರು. ಈ ಮೂಲಕ ಬೃಹತ್‌ ಮೊತ್ತವನ್ನು ಗುಲ್ಭರ್ಗ ಸುಲಭವಾಗಿ ಬೆನ್ನಟ್ಟಿತು.

ಆರ್‌. ಸ್ಮರಣ್‌ ತಮ್ಮ ಸ್ಮರಣೀಯ ಇನಿಂಗ್ಸ್ ಮೂಲಕ ಐಪಿಎಲ್‌ ಮಾಲೀಕರ ಚಿತ್ತ ಕದ್ದಿದ್ದಾರೆ. ಈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಆರ್‌. ಸ್ಮರಣ್‌ ತಮ್ಮನ್ನು ಆಯ್ಕೆಗೆ ಪರಿಗಣಿಸಿ ಎಂದು ಸಾರಿ ಹೇಳಿದ್ದಾರೆ.

Smaran R s Century Seals Last-Ball Win for Gulbarga Mystics

ಸಮಿತ್ ದ್ರಾವಿಡ್ ಮಿಂಚು

ಇದೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡದ ಪರ ಸಮಿತ್ ದ್ರಾವಿಡ್‌ ಮಿಂಚಿದರು. ಇವರು 24 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 33 ರನ್‌ ಬಾರಿಸಿ ಅಬ್ಬರಿಸಿದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಇದನ್ನು ಬಾಕ್ಸ್ ಮಾಡಿ

ಮಹಾರಾಜ್‌ ಕ್ರಿಕೆಟ್ ಟೂರ್ನಿಯಲ್ಲಿ ಶತಕ ಬಾರಿಸಿದ ಆಟಗಾರರು
ಆಟಗಾರ, ರನ್, ವಿರುದ್ಧ, ವರ್ಷ,
ಮಯಾಂಕ್‌ ಅಗರ್‌ವಾಲ್‌, 112, ಗುಲ್ಬರ್ಗ, 2022,
ರೋಹನ್ ಪಾಟೀಲ್‌, 108, ಬೆಂಗಳೂರು, 2022,
ಬಿಆರ್‌ ಶರತ್‌, 111, ಬೆಂಗಳೂರು, 2023,
ಕೆ.ವಿ ಸಿದ್ಧಾರ್ಥ್, 100, ಬೆಂಗಳೂರು, 2023,
ಎಲ್‌ಎಸ್‌ ಸಿಸೋಡಿಯಾ, 105, ಬೆಂಗಳೂರು, 2023,
ಮಯಾಂಕ್ ಅಗರ್‌ವಾಲ್‌, 105, ಬೆಂಗಳೂರು, 2023,
ಕರುಣ್‌ ನಾಯರ್‌, 107, ಬೆಂಗಳೂರು, 2023,

Story first published: Monday, August 19, 2024, 12:34 [IST]
Other articles published on Aug 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+