Ranji Trophy: ಸ್ಮರಣ್ ದ್ವಿಶತಕ: ಬೃಹತ್ ಮೊತ್ತ ಪೇರಿಸಿದ ಕರ್ನಾಟಕ
ಹುಬ್ಬಳ್ಳಿ: ಭರವಸೆಯ ಮಧ್ಯಮ ಕ್ರಮಾಂಕದ ಆಟಗಾರ ರವಿಚಂದ್ರನ್ ಸ್ಮರಣ್ (ಅಜೇಯ 227) ರನ್‌ಗಳ ಭರ್ಜರಿ ಆಟದ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿ ಎಲೈಟ್ "ಬಿ" ಗುಂಪಿನಲ್ಲಿ ಚಂಡೀಗಢ ವಿರುದ್ಧ ಬೃಹತ್ ಮೊತ್ತವನ್ನು ಪೇರಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಸೋಮವಾರ ಕರ್ನಾಟಕ 5 ವಿಕೆಟ್‌ಗೆ 298 ರನ್‌ಗಳಿಂದ ಆಟವನ್ನು ಮುಂದುವರಿಸಿತು. ಸ್ಮರಣ್ ಹಾಗೂ ಶ್ರೇಯಸ್ ಗೋಪಾಲ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಆರನೇ ವಿಕೆಟ್‌ಗೆ 272 ಎಸೆತಗಳಲ್ಲಿ 141 ರನ್‌ಗಳ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಶ್ರೇಯಸ್ ಗೋಪಾಲ್ 5 ಬೌಂಡರಿ ನೆರವಿನಿಂದ 62 ರನ್ ಬಾರಿಸಿದ್ದಾಗ ಔಟ್ ಆದರು.

ಶ್ರೇಯಸ್ ಗೋಪಾಲ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ವಿದ್ಯಾಧರ್ ಪಾಟೀಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಚಂಡೀಗಢ ಬೌಲರ್‌ಗಳು ವಿಫಲರಾದರು. ಈ ಜೋಡಿ 98 ಎಸೆತಗಳಲ್ಲಿ 76 ರನ್ ಸೇರಿಸಿತು. ವಿದ್ಯಾಧರ್ ಪಾಟೀಲ್ 4 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಔಟ್ ಆದರು.
ಶಿಖರ್ ಶೆಟ್ಟಿ ಹಾಗೂ ಸ್ಮರಣ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಸುಮಾರ 33 ಓವರ್‌ಗಳ ವರೆಗೂ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಈ ಜೋಡಿ ತಂಡ ಬೃಹತ್ ಮೊತ್ತ ಕಲೆ ಹಾಕಲು ಕಾರಣವಾಯಿತು. ಈ ಜೋಡಿ 8ನೇ ವಿಕೆಟ್‌ಗೆ 191 ಎಸೆತಗಳಲ್ಲಿ 111 ರನ್ ಸೇರಿಸಿತು. ಈ ವೇಳೆ ಶಿಖರ್ ಶೆಟ್ಟಿ 7 ಬೌಂಡರಿ ಸಹಾಯದಿಂದ 59 ರನ್ ಸಿಡಿಸಿ ಔಟ್ ಆದರು.
ಸ್ಮರಣ್ ದ್ವಿಶತಕ
ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಸ್ಮರಣ್ ರವಿಚಂದ್ರನ್ ಅವರು ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿದರು. ಸ್ಮರಣ್ ಮೊದಲ ದಿನದಾಟದಲ್ಲಿ ಶತಕ ಬಾರಿಸಿ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಸೋಮವಾರ ತಮ್ಮ ನೈಜ್ಯ ಆಟವನ್ನು ಆಡಿದರು. ಇವರು 362 ಎಸೆತಗಳನ್ನು ಎದುರಿಸಿ 16 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 227 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಕರ್ನಾಟಕ 8 ವಿಕೆಟ್‌ಗೆ 547 ರನ್ ಸೇರಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.
ಫಾಲೋ ಆನ್ ಭೀತಿಯಲ್ಲಿ ಚಂಡೀಗಢ
ಮೊದಲ ಇನಿಂಗ್ಸ್ ಆರಂಭಿಸಿರುವ ಚಂಡೀಗಢ ತಂಡದ ಬ್ಯಾಟರ್‌ಗಳು ಕರ್ನಾಟಕದ ಬಿಗುವಿನ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ತಂಡದ ಪರ ಯಾವೊಬ್ಬ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಮೂರನೇ ದಿನಕ್ಕೆ ಭರವಸೆಯ ಬ್ಯಾಟರ್ ಮನನ್ ವೋಹ್ರಾ ಅಜೆಯ 14 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನದ ಮುಕ್ತಾಯಕ್ಕೆ ಚಂಡೀಗಢ ತಂಡ 4 ವಿಕೆಟ್ ನಷ್ಟಕ್ಕೆ 72 ರನ್ ಸೇರಿಸಿದೆ. ಕರ್ನಾಟಕದ ಪರ ಶ್ರೇಯಸ್ ಗೋಪಾಲ್ 3 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications