ಸೈಯದ್ ಮುಷ್ತಾಕ್ ಅಲಿ: ಕರ್ನಾಟಕ vs ಮಹಾರಾಷ್ಟ್ರ: ಟಾಸ್ ರಿಪೋರ್ಟ್ ಹಾಗೂ ಆಡುವ ಬಳಗ

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಇಂದು ಕರ್ನಾಟಕ ತಂಡ ಮೊದಲ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಮಹಾರಾಷ್ಟರ ಹಾಗ್ಊ ಕರ್ನಾಟಕ ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಕರ್ನಾಟಕ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಕಳೆದ ವರ್ಷದ ರನ್ನರ್‌ಅಪ್ ಆಗಿರುವ ಕರ್ನಾಟಕ ತಂಡವನ್ನು ಈ ಬಾರಿ ಮಯಾಂಕ್ ಅಗರ್ವಾಲ್ ಮುನ್ನಡೆಸುತ್ತಿದ್ದಾರೆ. ಮನೀಶ್ ಪಾಂಡೆ ಅನುಭವಿ ಆಟಗಾರನಾಗಿ ತಂಡದಲ್ಲಿದ್ದು ದೇವದತ್ ಪಡಿಕ್ಕಲ್, ಅಭಿನವ್ ಮನೋಹರ್‌ರಂತಾ ಭರವಸೆಯ ಆಟಗಾರರು ತಂಡದಲ್ಲಿದ್ದಾರೆ. ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್, ವೈಶಾಕ್ ಮೊದಲಾದ ಆಟಗಾರರಿಂದ ಕೂಡ ಅತ್ಯುತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ ಕರ್ನಾಟಕದ ಅಭಿಮಾನಿಗಳು
ಮಹಾರಾಷ್ಟ್ರ ವಿರುದ್ಧ ನಡೆಯುತ್ತಿರುವ ಈ ಪಂದ್ಯ ಕರ್ನಾಟಕ ತಂಡಕ್ಕೆ ದೇಶಿಯ ಕ್ರಿಕೆಟ್‌ನಲ್ಲಿ 100ನೇ ಟಿ20 ಪಂದ್ಯವಾಗಿದೆ. ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದು ಚುಟುಕು ಮಾದರಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುವ 10ನೇ ನಾಯಕ ಎನಿಸಿಕೊಂಡಿದ್ದಾರೆ. ಇನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳು ಟಿ20 ಮಾದರಿಯಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು ಈ ಹಿಂದಿನ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಕರ್ನಾಟಕ ಗೆಲುವು ಸಾಧಿಸಿದ್ದರೆ ಒಂದು ಪಂದ್ಯದಲ್ಲಿ ಮಹಾರಾಷ್ಟ್ರ ಗೆಲುವು ಸಾಧಿಸಿದೆ.
ಇತ್ತಂಡಗಳ ಆಡುವ ಬಳಗ ಹೀಗಿದೆ
ಕರ್ನಾಟಕ ಆಡುವ ಬಳಗ: ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ಲುವ್ನಿತ್ ಸಿಸೋಡಿಯಾ(ಪ), ಜಗದೀಶ ಸುಚಿತ್, ವಿಜಯಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್
ಮಹಾರಾಷ್ಟ್ರ ಆಡುವ ಬಳಗ: ಸತ್ಯಜೀತ್ ಬಚಾವ್ (ನಾಯಕ), ಅಜೀಮ್ ಕಾಜಿ, ನೌಶಾದ್ ಶೇಖ್ (ವಿಕೆಟ್ ಕೀಪರ್), ಪವನ್ ಶಾ, ಯಶ್ ನಹರ್, ಸಿದ್ಧೇಶ್ ವೀರ್, ಆಶಯ್ ಪಾಲ್ಕರ್, ಕೌಶಲ್ ತಾಂಬೆ, ದಿವ್ಯಾಂಗ್ ಹಿಂಗನೇಕರ್, ರಾಜವರ್ಧನ್ ಹಂಗರ್ಗೇಕರ್, ರಾಮಕೃಷ್ಣ ಘೋಷ್
ಇತ್ತಂಡಗಳ ಸಂಪೂರ್ಣ ಸ್ಕ್ವಾಡ್ ಹೀಗಿದೆ
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಚೇತನ್ ಎಲ್‌ಆರ್, ಅಭಿನವ್ ಮನೋಹರ್, ಮನೋಜ್ ಬಂಡಾಗೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಸುಚಿತ್ ಜೆ, ಲಿನಿತ್ ಸಿಸೋಡಿಯಾ(ವಿಕೆಟ್ ಕೀಪರ್), ಶರತ್ ಬಿಆರ್(ವಿಕೆಟ್ ಕೀಪರ್), ಕೌಶಿಕ್ ವಿ, ವೈಶಾಕ್ ವಿ, ವಿದ್ವತ್ ಕಾವೇರಪ್ಪ, ವೆಂಕಟೇಶ್ ಎಂ
ಮಹಾರಾಷ್ಟ್ ಸ್ಕ್ವಾಡ್: ಋತುರಾಜ್ ಗಾಯಕ್ವಾಡ್ (ನಾಯಕ), ರಾಹುಲ್ ತ್ರಿಪಾಠಿ, ಸತ್ಯಜೀತ್ ಬಚಾವ್, ಶಂಶುಜಾಮ ಕಾಜಿ, ನೌಶಾದ್ ಶೇಖ್, ದಿವ್ಯಾಂಗ್ ಹಿಂಗಾನೇಕರ್, ಆಶಯ್ ಪಾಲ್ಕರ್, ಪವನ್ ಶಾ, ರಾಜವರ್ಧನ್ ಹಂಗರ್ಗೇಕರ್, ಯಶ್ ನಹರ್, ಮನೋಜ್ ಇಂಗಳೆ, ಅಜೀಂ ಕಾಜಿ, ಸಿದ್ಧೇಶ್ ವೀರ್, ಯಶ್ ಕ್ಷೀರಸಾಗರ್, ಕೌಶಲ್ ತಾಂಬೇರ್, ಕೌಶಲ್ ತಾಂಬೇಕರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications