SMAT: ಪಂಜಾಬ್ ವಿರುದ್ಧ ಸೆಮಿಫೈನಲ್ ಗೆದ್ದ ಬರೋಡ, ತಮಿಳುನಾಡು ವಿರುದ್ಧ ಫೈನಲ್ ಹೋರಾಟಕ್ಕೆ ವೇದಿಕೆ ಸಿದ್ಧ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ 2ನೇ ಸೆಮಿ ಫೈನಲ್ ಕಾದಾಟದಲ್ಲಿ ಬರೋಡಾ ತಂಡ ಪಂಜಾಬ್ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಮೂಲಕ ಪ್ರತಿಷ್ಟಿತ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಫೈನಲ್‌ನಲ್ಲಿ ಬರೋಡಾ ತಮಿಳುನಾಡು ತಂಡವನ್ನು ಎದುರಿಸಲಿದೆ.
ಪಂಜಾಬ್ ತಂಡ ಟಾಸ್ ಗೆದ್ದು ಮೊದಲಿಗೆ ಬರೋಡಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಇದರ ಲಾಭವನ್ನು ಪಡೆದ ಬರೋಡಾ ನಾಯಕ ದೇವಧರ್ ಹಾಗೂ ಕಾರ್ತಿಕ್ ಕಾಕಡೆ ಅವರ ಉತ್ತಮ ಪ್ರದರ್ಶನದಿಂದಾಗಿ ಕೇವಲ 3 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ನಾಯಕ ದೇವಧರ್ 64 ರನ್ ಸಿಡಿಸಿದರೆ ಕಾರ್ತಿಕ್ ಕಾಕಡೆ 53 ರನ್‌ಗಳ ಕೊಡುಗೆ ನೀಡಿದರು. ಈ ಜೋಡಿ 3ನೇ ವಿಕೆಟ್‌ಕೆ 97 ರನ್‌ಗಳ ಕೊಡುಗೆಯನ್ನು ನೀಡಿದರು.
ಬರೋಡಾ ತಂಡ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ದಿಡ್ಡ ಹೋರಾಟವನ್ನು ನೀಡುವಲ್ಲಿ ಆರಂಭದಿಂದಲೇ ಎಡವಿತು. ಪಂಜಾಬ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಫೆವಿಲಿಯನ್‌ಗಟ್ಟಲು ಬರೋಡ ಬೌಲರ್‌ಗಳು ಯಶಸ್ವಿಯಾದರು. ನಾಯಕ ಪಂದೀಪ್ ಸಿಂಗ್ ಹಾಗೂ ಗುರ್‌ಕೀರತ್ ಸಿಂಗ್ ಮನ್ ಮಾತ್ರ ಸ್ವಲ್ಪ ಕಾಲ ದಿಡ್ಡ ಪ್ರತಿರೋಧವನ್ನು ಒಡ್ಡಿದರಾದರೂ ಇದರಿಂದ ಪಂಜಾಬ್‌ಗೆ ಹೆಚ್ಚಿನ ಪ್ರಯೋಜನ ದೊರೆಯಲಿಲ್ಲ.
ಗುರ್‌ಕೀರತ್ ಸಿಂಗ್ 37 ಎಸೆತಗಳಲ್ಲಿ 39 ರನ್ ಬಾರಿಸಿದರೆ ಮಂದೀಪ್ ಸಿಂಗ್ 24 ಎಸೆತಗಳಲ್ಲಿ 42 ರನ್ ಬಾರಿಸಿ ಹೋರಾಟವನ್ನು ನೀಡಿದರು. ಆದರೆ ಪಂಜಾಬ್ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲವಾಗಿದ್ದು ಹಿನ್ನೆಡೆಯಾಯಿತು. ಅಂತೊಮವಾಗಿ ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ 8 ವಿಕೆಟ್ ಕಳೆದುಕೊಂಡು 135 ರನ್ ಮಾಡಲಷ್ಟೇ ಶಕ್ತವಾಯಿತು.
ಬರೋಡಾ ತಂಡದ ಪರವಾಗಿ ಕುಕ್ಮಾನ್ ಮೆರಿವಾಲ 3 ವಿಕೆಟ್ ಕಿತ್ತು ಮಿಂಚಿದರೆ ನಿನಾದ್ ರಾತ್ವ 2 ವಿಕೆಟ್ ಪಡೆದರು. ಅತಿತ್ ಶೇಠ್, ಬಾಬಾ ಶಫಿ ಪಠಾಣ್ ಹಾಗೂ ಕಾರ್ತಿಕ್ ಕಾಕಡೆ ತಲಾ 1 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಬರೋಡಾ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಪ್ರಶಸ್ತಿ ಸುತ್ತಿಗೇರುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications