Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ರಿಸ್ಬೇನ್‌ನಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳ ಮುಖದಲ್ಲಿ ಮಂದಹಾಸ

ಭಾರಹ ಹಾಗೂ ಆಸ್ಟ್ರೇಲಿಯಾ ಬಾರ್ಡರ್‌ ಗವಾಸ್ಕರ್‌ ಸರಣಿ ನಡೆಯುತ್ತಿದೆ. ಈ ಸರಣಿಯ ಮೂರನೇ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಇಂದು ಬ್ರಿಸ್ಬೇನ್‌ಗೆ ಹಾರಿದೆ. ಈ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತದ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸುವಂತಹ ಘಟನೆ ನಡೆದಿದೆ. ಗುರುವಾರ ಬ್ರಿಸ್ಬೇನ್‌ ಟೀಮ್ ಇಂಡಿಯಾ ತಲುಪಿದೆ. ಈ ವೇಳೆ ಅಭ್ಯಾಸ ಪಂದ್ಯ ನಡೆಸಲಾಯಿತು.

ಉಭಯ ತಂಡಗಳು ಈಗಾಗಲೇ ಈ ಟೆಸ್ಟ್‌ ಸರಣಿಯಲ್ಲಿ ತಲಾ ಒಂದು ಪಂದ್ಯವನ್ನು ಗೆದ್ದಿವೆ. ಈ ವೇಳೆ ಭಾರತ ಪರ್ತ್‌ನಲ್ಲಿ ಜಯ ಸಾಧಿಸಿದರೆ, ಆಸ್ಟ್ರೇಲಿಯಾ ಆಡಿಲೇಡ್‌ನಲ್ಲಿ ಗೆಲುವು ದಾಖಲಿಸಿದೆ. ಇನ್ನು ಡಿಸೆಂಬರ್ 14 ರಿಂದ ಮೂರನೇ ಪಂದ್ಯ ಗಬ್ಬಾದಲ್ಲಿ ನಡೆಯಲಿದೆ. ಈ ಟೆಸ್ಟ್‌ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೂರನೇ ಪಂದ್ಯಕ್ಕಾಗಿ ಅಭ್ಯಾಸ ನಡೆಸಿದವು. ಈ ಅಭ್ಯಾಸವನ್ನು ಅಭಿಮಾನಿಗಳು ಕಣ್ಣು ತುಂಬಿಕೊಂಡರು.

Smiles on Indian Fans Faces as Team India Prepares for Brisbane Test

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಹೊಸ ತಂತ್ರವನ್ನು ಹೆಣೆದುಕೊಡಿದ್ದರು. ಅದರಂತೆ ಲಾಕ್‌ಡೌನ್‌ ಮಂತ್ರಕ್ಕೆ ಮಣೆ ಹಾಕಿತು. ಇದರಂತೆ ಟೀಮ್ ಇಂಡಿಯಾ ಅಭ್ಯಾಸವನ್ನು ವೀಕ್ಷಿಸಲು ಯಾರಿಗೂ ಅವಕಾಶ ನೀಡರಲಿಲ್ಲ. ಅಲ್ಲದೆ ಪತ್ರಕರ್ತರಿಗೂ ನಿಷೇಧ ಹೇರಲಾಗಿತ್ತು. ವಿಡಿಯೋ ಹಾಗೂ ದೃಶ್ಯಗಳನ್ನು ಸಹ ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಕ್ಲೋಸ್‌ ಡೋರ್‌ನಲ್ಲಿ ಅಭ್ಯಾಸವನ್ನು ನಡೆಸಿತು. ಇದರಿಂದ ಆಸೀಸ್‌ ಮಿಡೀಯಾಗಳಿಗೂ ಟೀಮ್ ಇಂಡಿಯಾದ ಸ್ಟ್ರೆಂತ್ ಹಾಗೂ ವಿಕ್ನೆಸ್‌ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ ಡೇ ಆಂಡ್‌ ನೈಟ್ ಆಗಿತ್ತು. ಈ ವೇಳೆ ಒಂದು ಅಭ್ಯಾಸ ಪಂದ್ಯವನ್ನು ನಡೆಸಲಾಗಿತ್ತು. ಅಲ್ಲದೆ ಹಲವು ಸೆಷನ್‌ ಅಭ್ಯಾಸವನ್ನು ನಡೆಸಲಾಯಿತು. ಈಗ ಟೀಮ್ ಇಂಡಿಯಾ ರೆಡ್‌ ಬಾಲ್‌ ಕ್ರಿಕೆಟ್‌ಗೆ ಸಜ್ಜಾಗಿದ್ದು, ಬ್ರಿಸ್ಬೇನ್‌ನಲ್ಲಿ ಮತ್ತೊಂದು ಅಗ್ನಿ ಪರೀಕ್ಷೆಗೆ ಸಜ್ಜಾಗಲಿದೆ.

ಗಬ್ಬಾ ಸವಿ ನೆನಪು

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್‌ ದೃಷ್ಟಿಯಿಂದ ಟೀಮ್ ಇಂಡಿಯಾಕ್ಕೆ ಈ ಸರಣಿಯಲ್ಲಿ ಜಯ ಅನಿವಾರ್ಯ. ಗಬ್ಬಾ ಮೈದಾನದಲ್ಲಿ ಟೀಮ್ ಇಂಡಿಯಾ ಈ ಹಿಂದೆ ಭರ್ಜರಿ ಜಯ ಕಂಡಿದೆ. ಈ ಜಯದ ನೆನಪು ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಈಗ ಮತ್ತೊಮ್ಮೆ ಟೀಮ್ ಇಂಡಿಯಾ ಅಂತಹದ್ದೇ ಸಾಧನೆ ಮಾಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಸುಲಭವಾಗಿ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ.

ಮೂರನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಲವು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಸ್ಪಿನ್ ಬೌಲರ್ ಅಶ್ವಿನ್‌ ಬದಲಿಗೆ, ಮತ್ತೆ ತಂಡದಲ್ಲಿ ವಾಷಿಂಗ್ಟನ್‌ ಸುಂದರ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಹರ್ಷಿತ್ ರಾಣಾ ಬದಲಿಗೆ ಇನ್ನೊಬ್ಬ ವೇಗದ ಬೌಲರ್‌ ತಂಡ ಸೇರಬಹುದು.

Story first published: Thursday, December 12, 2024, 23:58 [IST]
Other articles published on Dec 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+