Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆಂಡು ವಿರೂಪ ಕೇಸ್ : ಸ್ಮಿತ್, ವಾರ್ನರ್ ಮೇಲಿನ ನಿಷೇಧ ಮುಂದುವರಿಕೆ

Ban Contiuned | ಮುಂದುವರೆದ ನಿಷೇಧ | Oneindia Kannada
Smith, Warner, Bancroft bans to stand as CA rejects ACA submission

ಬೆಂಗಳೂರು, ನವೆಂಬರ್ 20: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೆ ಒಳಗಾಗಿರುವ ಕ್ರಿಕೆಟರ್ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ರ್ಯಾನ್​ಕ್ರಾಫ್ಟ್​ಅವರ ಮೇಲಿನ ನಿಷೇಧವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

ಆಸ್ಟ್ರೇಲಿಯನ್​ ಕ್ರಿಕೆಟರ್ಸ್​ ಅಸೋಸಿಯೇಷನ್(ಎಸಿಎ) ಮರು ಪರಿಶೀಲನಾ ಅರ್ಜಿ ಸಲ್ಲಿಸಿ, ಮೂವರು ಕ್ರಿಕೆಟರ್ ಗಳ ಮೇಲಿನ ನಿಷೇಧವನ್ನು ಅವಧಿಗೆ ಮುನ್ನ ಹಿಂಪಡೆಯುವಂತೆ ಕೋರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯಾ, ನಿಷೇಧವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದಿದೆ.

'ನಿಷೇಧವನ್ನು ಹಿಂಪಡೆಯಲು ಇದು ಸೂಕ್ತ ಸಮಯವಲ್ಲ. ಸದ್ಯದ ನಿಷೇಧ ಸರಿಯಾದ ನಿರ್ಧಾರ ಮತ್ತು ಪ್ರಕರಣ ಆಸ್ಟ್ರೇಲಿಯಾ ಕ್ರಿಕೆಟ್​ನ ಘನತೆಗೆ ಕುಂದು ತಂದಿದೆ ಎನ್ನುವ ಕಾರಣವನ್ನು ನೀಡಿ ನಿಷೇಧವನ್ನು ಎತ್ತಿಹಿಡಿದಿದೆ.

2018ರ ಮಾರ್ಚ್ 23ರಂದು ಕೇಪ್​ಟೌನ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಅವರು ಚೆಂಡು ವಿರೂಪ ಸಂಚಿನಲ್ಲಿ ಪಾಲ್ಗೊಂಡಿದ್ದರು ಹಾಗೂ ಬ್ಯಾನ್ ಕ್ರಾಫ್ಟ್ ಚೆಂಡು ವಿರೂಪಗೊಳಿಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು.

ನಾಯಕ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ಅವರಿಗೆ 12 ತಿಂಗಳುಗಳ ಕಾಲ ಅಮಾನತು ಮಾಡಲಾಯಿತು. ವಿಚಾರಣೆ ವೇಳೆ ಈ ಮೂವರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.

ಕ್ಯಾಮರೂನ್ ಬ್ರ್ಯಾನ್​ಕ್ರಾಫ್ಟ್​​ಗೆ ಒಂಭತ್ತು ತಿಂಗಳುಗಳ ಕಾಲ ಕ್ರಿಕೆಟ್​ನಿಂದ ನಿಷೇಧ ಹೇರಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಲದೆ, ಶೆಫೀಲ್ಡ್ ಶೀಲ್ಡ್ ಹಾಗೂ ಬಿಗ್ ಬ್ಯಾಶ್ ಟ್ವೆಂಟಿ20 ಲೀಗ್ ನಲ್ಲೂ ಪಾಲ್ಗೊಳ್ಳುವಂತಿರಲಿಲ್ಲ.

ಕ್ಯಾಮರೂನ್ ಬ್ರ್ಯಾನ್​ಕ್ರಾಫ್ಟ್​ಅವರ ಮೇಲಿನ ನಿಷೇಧ ಡಿಸೆಂಬರ್​ 29ಕ್ಕೆ ಮುಕ್ತಾಯವಾಗಲಿದ್ದು, ಸ್ಮಿತ್ ಹಾಗೂ ವಾರ್ನರ್ ಬ್ಯಾನ್ 29 ಮಾರ್ಚ್ 2019ಕ್ಕೆ ಕೊನೆಗೊಳ್ಳಲಿದೆ.

Story first published: Tuesday, November 20, 2018, 11:49 [IST]
Other articles published on Nov 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+