For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ ಮಹಿಳಾ ಟೆಸ್ಟ್: ಶತಕ ಸಿಡಿಸಿದ ಸ್ಮೃತಿ ಮಂಧಾನ, ಉತ್ತಮ ಸ್ಥಿತಿಯಲ್ಲಿ ಭಾರತ

Smriti Mandhana becomes first Indian women cricketer to score century in Pink Ball Test

ಆಸ್ಟ್ರೇಲಿಯಾ ಮಹಿಳೆಯರು ಹಾಗೂ ಭಾರತ ಮಹಿಳೆಯರ ತಂಡಗಳ ನಡುವಿನ ಏಕೈಕ ಪಂದ್ಯದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಭಾರತದ ಪರವಾಗಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಶತಕವನ್ನು ಗಳಿಸಿದ್ದು ಭರ್ಜರಿ ಆಟವನ್ನು ಮುಂದುವರಿಸಿದ್ದಾರೆ. ಮೊದಲ ದಿನದಾಟ ಮಳೆಗೆ ಸ್ಥಗಿತಗೊಳ್ಳುವ ಸಂದರ್ಭದಲ್ಲಿ 80 ರನ್‌ಗಳಿಸಿ ಮಂಧಾನ ಅಜೇಯವಾಗುಳಿದಿದ್ದರು. ಇಂದು ಎರಡನೇ ದಿನದಾಟದಲ್ಲಿ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ದಾಖಲಿಸಿದ್ದಾರೆ ಸ್ಮೃತಿ ಮಂಧಾನ. ಈ ಮೂಲಕ ಪಿಂಕ್ ಬಾಲ್ ಟೆಸ್ಟ್ನಲ್ಲಿ ಮೊದಲ ಶತಕ ಗಳಿಸಿದ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಯನ್ನು ಕೂಡ ಸ್ಮೃತಿ ತಮ್ಮದಾಗಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಕ್ಯಾರೆರಾ ಓವಲ್‌ನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲಿಗೆ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿದೆ. ಈ ಅವಕಾಶವನ್ನು ಭಾರತದ ಆರಂಭಿಕರು ಅದ್ಭುತವಾಗಿ ಬಳಸಿಕೊಂಡರು. ಮೊದಲ ವಿಕೆಟ್‌ಗೆ ಆರಂಭಿಕ ಜೋಡಿ 93 ರನ್‌ಗಳ ಜೊತೆಯಾಟವನ್ನು ನೀಡಿದೆ. ಸ್ಮೃತಿ ಮಂಧಾನ ಹಾಗೂ ಹಾಗೂ ಶಫಾಲಿ ವರ್ಮಾ ಆಸಿಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ 64 ಎಸೆತಗಳಲ್ಲಿ 31 ರನ್‌ಗಳಿಸಿದ್ದ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡರು. ನಂತರ ಸ್ಮೃತಿ ಮಂಧಾನಾಗೆ ಪೂನಮ್ ರಾವತ್ ಜೊತೆಯಾಗಿದ್ದಾರೆ.

ಆಸ್ಟ್ರೇಲಿಯಾ ಮಹಿಳೆಯರ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಭಾರೀ ಹೋರಾಟನ್ನು ನೀಡಿ 1-2 ಅಂತರದಿಂದ ಸೋಲು ಕಂಡ ಭಾರತೀಯ ಮಹಿಳೆಯರ ತಂಡ ಈಗ ಏಕೈಕ ಪಂದ್ಯವನ್ನೊಳಗೊಂಡ ಟೆಸ್ಟ್ ಸರಣಿಯಲ್ಲಿ ಭಾಗಿದೆ. ಈ ಟೆಸ್ಟ್ ಪಂದ್ಯ ಭಾರತದ ಮಹಿಳಾ ತಂಡದ ಪ್ರಪ್ರಥಮ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಏಕದಿನ ಸರಣಿಯಲ್ಲಿ ನೀಡಿದ ಗಮನಾರ್ಹ ಪ್ರದರ್ಶನದ ನಂತರ ಟೆಸ್ಟ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡದ ಪ್ರದರ್ಶನ ಕುತೂಹಲ ಮೂಡಿಸಿದೆ. ಅದಕ್ಕೆ ಪೂರಕವಾಗಿ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಲು ಭಾರತ ಯಶಸ್ವಿಯಾಗಿದೆ.

ಭಾರತೀಯ ಮಹಿಳೆಯ ತಂಡ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡದ 26 ಏಕದಿನ ಪಂದ್ಯಗಳ ಗೆಲುವಿನ ಸರಪಳಿಯನ್ನು ತುಂಡರಿಸಲು ಯಶಸ್ವಿಯಾಗಿತ್ತು. ಇದೇ ಹುಮ್ಮಸ್ಸಿನೊಂದಿಗೆ ಈಗ ಟೆಸ್ಟ್ ಸರಣಿಯಲ್ಲೂ ಥಾಲಿ ರಾಜ್ ಬಳಗ ಕಣಕ್ಕಿಳಿದಿದೆ. ಹಾಗೆ ನೋಡಿದರೆ ಏಕದಿನ ಸರಣಿಯನ್ನು ಭಾರತ ಗೆಲ್ಲುವ ಸಂಪೂರ್ಣ ಅವಕಾಶವಿತ್ತು. ಎರಡನೇ ಏಕದಿನ ಪಮದ್ಯದಲ್ಲಿ ಭಾರತೀಯ ಮಹಿಳೆಯರ ತಂಡ ಗೆಲ್ಲುವ ಎಲ್ಲಾ ಅವಕಾಶವನ್ನು ಹೊಂದಿತ್ತು. ಆದರೆ ಕೊನೆಯ ಎಸೆತದಲ್ಲಿ ಈ ಪಂದ್ಯವನ್ನು ಸೋತ ಕಾರಣ ಸರಣಿಯನ್ನು ಕಳೆದುಕೊಂಡಿತ್ತು.

ಭಾರತ ಮಹಿಳೆಯರ ಆಡುವ ಬಳಗ:
ಸ್ಮೃತಿ ಮಂಧನ, ಶಫಾಲಿ ವರ್ಮಾ, ಪುನಮ್ ರಾವತ್, ಮಿಥಾಲಿ ರಾಜ್ (ನಾಯಕಿ), ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಸ್ನೇಹ್ ರಾಣಾ, ಏಕತಾ ಬಿಶ್ತ್, ಶಿಖಾ ಪಾಂಡೆ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ಪೂನಂ ಯಾದವ್

ಆಸ್ಟ್ರೇಲಿಯಾ ಆಡುವ ಬಳಗ: ಅಲಿಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ಎಲಿಸ್ ಪೆರ್ರಿ, ತಹ್ಲಿಯಾ ಮೆಕ್‌ಗ್ರಾತ್, ಆಶ್ಲೇ ಗಾರ್ಡ್ನರ್, ಅನ್ನಾಬೆಲ್ ಸದರ್‌ಲ್ಯಾಂಡ್, ಸೋಫಿ ಮೊಲಿನಕ್ಸ್, ಜಾರ್ಜಿಯಾ ವೇರ್‌ಹ್ಯಾಮ್, ಡಾರ್ಸಿ ಬ್ರೌನ್, ಸ್ಟೆಲ್ಲಾ ಕ್ಯಾಂಪ್‌ಬೆಲ್
ನಿಕೋಲಾ ಕ್ಯಾರಿ, ಜಾರ್ಜಿಯಾ ರೆಡ್‌ಮೇನ್, ಮೈಟ್ಲಾನ್ ಬ್ರೌನ್, ಮೊಲಿ ಸ್ಟ್ರಾನೊ, ಟೇಲಾ ವ್ಲೆಮಿಂಕ್, ಹನ್ನಾ ಡಾರ್ಲಿಂಗ್ಟನ್

Story first published: Friday, October 1, 2021, 12:20 [IST]
Other articles published on Oct 1, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+