Smriti Mandhana: ಚಿಕ್ಕ ಇನಿಂಗ್ಸ್ ಮೂಲಕ ದೊಡ್ಡ ದಾಖಲೆ ಬರೆದ ಸ್ಮೃತಿ ಮಂಧಾನ
ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಸ್ಮೃತಿ ವಿಫಲರಾಗಿದ್ದಾರೆ. ಇವರು ಆಸೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 24 ರನ್‌ಗಳ ಚಿಕ್ಕ ಇನಿಂಗ್ಸ್ ಕಟ್ಟಿದರು. ಈ ಚಿಕ್ಕ ಇನಿಂಗ್ಸ್ ಮೂಲಕ ಸ್ಮೃತಿ ದೊಡ್ಡ ದಾಖಲೆಯನ್ನು ಬರೆದರು. ಸ್ಮೃತಿ ಬರೆದ ದಾಖಲೆ ಏನು ಎಂಬ ಬಗ್ಗೆ ವಿವರ ಇಲ್ಲಿದೆ.
ಸ್ಮೃತಿ ಮಂಧಾನ ಆಸ್ಟ್ರೇಲಿಯಾ ನೀಡಿದ ದೊಡ್ಡ ಮೊತ್ತದ ಬೆನ್ನು ಹತ್ತಿದಾಗ ತಾವು ಎದುರಿಸಿದ 24ನೇ ಎಸೆತದಲ್ಲಿ ಔಟ್ ಆದರು. ಆಸೀಸ್ ತಂಡದ ಕಿಮ್ ಗ್ರಾತ್ ಎಸೆತದಲ್ಲಿ, ಸ್ಮೃತಿ ಅವರ ಬ್ಯಾಟಿನ ಅಂಚಿಗೆ ಬಡಿದ ಚೆಂಡು ವಿಕೆಟ್ ಕೀಪರ್ ಹೀಲಿ ಅವರ ಕೈ ಸೇರಿತು. ಆದರೆ ಫೀಲ್ಡ್ ಅಂಪೈರ್ ಇದನ್ನು ನಟೌಟ್ ಎಂದು ನೀಡಿದರು. ಆದರೆ ಆಸೀಸ್ ಮೇಲ್ಮನವಿ ಸಲ್ಲಿಸಿತು. ಈ ವೇಳೆ ಅಲ್ಟ್ರಾ ಎಡ್ಜ್‌ನಲ್ಲಿ ಚೆಂಡು ಬ್ಯಾಟ್‌ಗೆ ತಾಗಿ ವಿಕೆಟ್ ಕೀಪರ್ ಕೈ ಸೇರಿದ್ದು ಔಟ್ ಎಂದು ನೀಡಲಾಯಿತು. ಸ್ಮೃತಿ ಮಂಧಾನ ಭಾರದ ಮನಸ್ಸಿನಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಈ ಚಿಕ್ಕ ಇನಿಂಗ್ಸ್ ಮೂಲಕ ಸ್ಮೃತಿ ದೊಡ್ಡ ದಾಖಲೆ ಬರೆದರು.

ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟಿಂಗ್‌ನಿಂದ ಹೆಸರುವಾಸಿಯಾಗಿರುವ ಸ್ಮೃತಿ ಮಂಧಾನ, ಭಾರತದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಮಂಧಾನ ಆಸ್ಟ್ರೇಲಿಯಾ ವಿರುದ್ಧ ಒಟ್ಟು 21 ಏಕದಿನ ಪಂದ್ಯಗಳ, 21 ಇನ್ನಿಂಗ್ಸ್‌ಗಳಲ್ಲಿ 51 ಸರಾಸರಿಯಲ್ಲಿ 1020 ರನ್ ಗಳಿಸಿದ್ದಾರೆ. ಈ ವೇಳೆ ಸ್ಮೃತಿ 4 ಶತಕ, 6 ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಸ್ಮೃತಿ ಆಸೀಸ್ ವಿರುದ್ಧ 1000 ರನ್‌ಗಳನ್ನು ಕಲೆ ಹಾಕಿದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ಸಾಧನೆಯನ್ನು ಲೇಡಿ ಸಚಿನ್ ಖ್ಯಾತಿ ಮಿಥಾಲಿ ರಾಜ್ ಅವರು ಮಾಡಿದ್ದರು. ಮಿಥಾಲಿ 37 ಪಂದ್ಯಗಳಲ್ಲಿ 34.03 ಸರಾಸರಿಯಲ್ಲಿ 1,123 ರನ್ ಗಳಿಸಿದ್ದಾರೆ. ಆಸೀಸ್ ವಿರುದ್ಧ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿಶ್ವದಲ್ಲಿ 10ನೇ ಸ್ಥಾನ ಪಡೆದಿದ್ದಾರೆ.
ಮಹಿಳಾ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತದ ಆಟಗಾರ್ತಿಯರು
ಮಿಥಾಲಿ ರಾಜ್, 1123 ರನ್
ಸ್ಮೃತಿ ಮಂಧಾನ, 1020 ರನ್
ಹರ್ಮನ್‌ಪ್ರೀತ್ ಕೌರ್, 751 ರನ್
ಅಂಜುಮ್ ಚೋಪ್ರಾ, 580 ರನ್
ದೀಪ್ತಿ ಶರ್ಮಾ, 987 ರನ್
ವಿಶ್ವಕಪ್‌ನಲ್ಲಿ ಅಮೋಘ ಸಾಧನೆ
ಭಾರತದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಮೃತಿ ಮಂಧಾನ ಅಬ್ಬರಿಸಿದ್ದಾರೆ. ಇವರು ಆಡಿದ 8 ಪಂದ್ಯಗಳಲ್ಲಿ 55.57 ರ ಸರಾಸರಿಯಲ್ಲಿ 389 ರನ್ ಗಳಿಸಿ ಅಬ್ಬರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications