Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Rankings: ಮತ್ತೆ ಸ್ಮೃತಿಗೆ ನಂಬರ್‌ 1 ಪಟ್ಟ

ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್‌ ನಡೆಯಲಿದೆ. ಈ ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಆಟಗಾರ್ತಿಯ ಮುಖದಲ್ಲಿ ಮಂದಹಾಸ ಮೂಡುವಂತಹ ಸುದ್ದಿಯೊಂದು ಬಂದಿದೆ. ಐಸಿಸಿ ಮಹಿಳಾ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸ್ಮೃತಿ ಮಂಧನಾ ಅಮೋಘ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಅವರನ್ನು ಹಿಂದಿಕ್ಕಿದ ಸ್ಮೃತಿ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ.

ಇತ್ತೀಚಿಗೆ ಚಂಡೀಗಢದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಮೃತಿ ಭರ್ಜರಿ ಪ್ರದರ್ಶನ ನೀಡಿದರು. ಅಲ್ಲದೆ 58 ರನ್‌ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು. ಇದರ ಲಾಭ ಈಗ ಸ್ಮೃತಿ ಅವರಿಗೆ ಸಿಕ್ಕಿದೆ. ಈ ಇನಿಂಗ್ಸ್‌ ಪ್ರಭಾವದಿಂದ ಇವರು 7 ರೇಟಿಂಗ್ ಪಾಯಿಂಟ‌ ಪಡೆದು, ಇಂಗ್ಲೆಂಡ್‌ ಸ್ಟಾರ್ ಆಟಗಾರ್ತಿ ಬ್ರಂಟ್‌ ಅವರಿಗಿಂತ ಮುಂದೆ ಸಾಗಿದರು. ಸ್ಮೃತಿ ಮಂಧನಾ 2025ರ ಮಧ್ಯದಲ್ಲಿ ಹಾಗೂ 2019ರ ಆರಂಭದಲ್ಲಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದರು.

Smriti Mandhana Crowned Number 1 Batter in ICC ODI Rankings

ಟೀಮ್ ಇಂಡಿಯಾದ ಮತ್ತೊರ್ವ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್‌ ನಾಲ್ಕು ಸ್ಥಾನ ಜಿಗಿತ ಕಂಡಿದ್ದು, ಸದ್ಯ 42ನೇ ಸ್ಥಾನ ತಲುಪಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರ್ತಿ ಹರ್ಲೀನ್ ಡಿಯೋಲ್ ಐದು ಸ್ಥಾನ ಜಿಗಿದು 43 ನೇ ಸ್ಥಾನಕ್ಕೆ ಪಡೆದಿದ್ದಾರೆ. ಬರೀ ಟೀಮ್ ಇಂಡಿಯಾದಷ್ಟೇ ಅಲ್ಲ, ಆಸ್ಟ್ರೇಲಯಾ ಮಹಿಳಾ ಆಟಗಾರ್ತಿಯರ ಶ್ರೇಯಾಂಕದಲ್ಲೂ ಸುಧಾರಣೆ ಕಂಡಿದೆ. ಬೆತ್ ಮೂನಿ ಮೂರು ಸ್ಥಾನ ಜಿಗಿದು ಐದನೇ, ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ಫೋಬೆ ಲಿಚ್‌ಫೀಲ್ಡ್ ಜಂಟಿಯಾಗಿ 25ನೇ ಸ್ಥಾನ ಪಡೆದಿದ್ದಾರೆ.

ಟೀಮ್ ಇಂಡಿಯಾ ನಾಯಕಿ ಹರ್ಮನ್‌ ಪ್ರೀತ್ ಕೌರ್‌ ಒಂದು ಸ್ಥಾನ ಇಳಿಕೆ ಕಡಿದ್ದು, 12ನೇ ಸ್ಥಾನ ತಲುಪಿದ್ದಾರೆ. ಉಳಿದಂತೆ ಜೆಮಿಮಾ ರೋಡ್ರಿಗಸ್‌ ಸಹ 2 ಸ್ಥಾನ ಇಳಿಕೆ ಕಂಡಿದ್ದು 15ನೇ ಸ್ಥಾನದಲ್ಲಿದ್ದಾರೆ.

Smriti Mandhana Crowned Number 1 Batter in ICC ODI Rankings

ಟಾಪ್‌ 20ಯಲ್ಲಿ ಇಬ್ಬರು ಬೌಲರ್ಸ್‌

ಭಾರತದ ಪರ ದೀಪ್ತಿ ಶರ್ಮಾ ಮಾತ್ರ ಟಾಪ್‌ 10ರಲ್ಲಿ ಸ್ಥಾನ ಪಡೆದ ಬೌಲರ್ ಆಗಿದ್ದಾರೆ. ಇವರು 3 ಸ್ಥಾನ ಇಳಿಕೆ ಕಂಡಿದ್ದು, 7ನೇ ಸ್ಥಾನದಲ್ಲಿದ್ದಾರೆ. ಟಾಪ್‌ 20 ರಲ್ಲೂ ಟೀಮ್ ಇಂಡಿಯಾದ ಕೇವಲ 2 ಬೌಲರ್‌ಗಳು ಇದ್ದಾರೆ. ಭಾರತದ ಸ್ಪಿನ್ ಬೌಲರ್‌ ಸ್ನೇಹಾ ರಾಣಾ 13ನೇ ಸ್ಥಾನವನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದ ಬೌಲರ್‌ಗಳು ಸಹ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ವೇಗದ ಬೌಲರ್‌ ಕಿಮ್ ಗಾರ್ತ್ ನಾಲ್ಕನೇ ಸ್ಥಾನ ತಲುಪಿದ್ದಾರೆ. ಇವರು ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಇನ್ನು ಸ್ಪಿನ್ನರ್ ಅಲಾನಾ ಕಿಂಗ್ ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಅನ್ನಾಬೆಲ್ ಸದರ್ಲ್ಯಾಂಡ್ 6, ಎಲ್ಲಿಸ್ ಪೆರ್ರಿ 13 ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಢ್‌ ತಂಡದ ಸೋಫಿ ಎಕ್ಲೆಸ್ಟೋನ್ ನಂಬರ್‌ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ವನಿತೆಯರ ನಡುವಣ ಎರಡನೇ ಪಂದ್ಯ ಬುಧವಾರ ನಡೆಯಲಿದೆ.

Story first published: Tuesday, September 16, 2025, 15:17 [IST]
Other articles published on Sep 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+