ಸ್ಮೃತಿ ಮಂಧಾನ ಮದುವೆ ಸಂಭ್ರಮ: ಹಳದಿ ಕಾರ್ಯಕ್ರಮದ ವಿಡಿಯೋಗಳು ವೈರಲ್!
ಬಹುದಿನಗಳ ಚರ್ಚಾ ವಸ್ತುವಾಗಿದ್ದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರ ವಿವಾಹಕ್ಕೆ ಸಂಬಂಧಿಸಿದಂತೆ, ಈಗ ವಿಡಿಯೋಗಳು ಹೊರ ಬರುತ್ತಿವೆ. ಇತ್ತೀಚೆಗೆ ಸ್ಮೃತಿ ತಮ್ಮ ಹಾಗೂ ತಮ್ಮ ಬಹು ಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ನಿಶ್ಚಿತಾರ್ಥ ಆಗಿದ್ದನ್ನು ದೃಢಪಡಿಸಿದ್ದರು. ಶನಿವಾರ ಸಾಮಾಜಿಕ ತಾಣದಲ್ಲಿ ಸ್ಮೃತಿ ಮಂಧಾನ ಅವರು ಹಳದಿ ಕಾರ್ಯಕ್ರಮದಲ್ಲಿ ಮಾಡುತ್ತಿದ್ದ ಡ್ಯಾನ್ಸ್ ಈಗ ಸಖತ್ ವೈರಲ್ ಆಗಿದೆ.
ಭಾನುವಾರ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ವಿವಾಹವಾಗಲಿದ್ದಾರೆ. ಈ ವಿವಾಹ ಕಾರ್ಯಕ್ರಮ ಸಾಂಗ್ಲಿಯಲ್ಲಿ ನಡೆಯಲಿದೆ. ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಟೀಮ್ ಇಂಡಿಯಾ ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ. ಇದೇ ವೇಳೆ ಟೀಮ್ ಇಂಡಿಯಾದ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹ ಭಾಗವಹಿಸಲಿದ್ದಾರೆ.

ಶನಿವಾರ ಟೀಮ್ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸ್ಮೃತಿ ಹಳದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಡಿಯೋ ಸಖತ್ ವೈರಲ್ ಆಗುತ್ತಿವೆ. ಇದೇ ವೇಳೆ ಸ್ಮೃತಿ ಟೀಮ್ ಇಂಡಿಯಾದ ಆಟಗಾರ್ತಿಯರೊಂದಿಗೆ ಹೆಜ್ಜೆ ಹಾಕಿದರು. ಅಲ್ಲದೆ ಸ್ಮೃತಿ, ಪಲಾಶ್ ಅವರೊಂದಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋಗಳು ಸಹ ಸಖತ್ ಸದ್ದು ಮಾಡುತ್ತಿವೆ.
ಮುಂಬೈನಲ್ಲಿ ಇತ್ತೀಚಿಗೆ ನಡೆದಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡವುಣ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ವೇಳೆ, ಪಲಾಶ್ ಸಹ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದರು. ವಿಶ್ವಕಪ್ ಬಳಿಕ ಉಭಯ ಸ್ಟಾರ್‌ಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅಂತೆಯೇ ಸ್ಮೃತಿ ಭಾನುವಾರ ಸಪ್ತ ಪದಿ ತುಳಿಯಲಿದ್ದಾರೆ. ಈ ಮೂಲಕ ಪ್ರಸಕ್ತ ತಂಡದಲ್ಲಿ ಹಸೆ ಮಣೆ ಏರಿದ ಮೊದಲ ಆಟಗಾರ್ತಿ ಎಂಬ ಖ್ಯಾತಿಗೂ ಪಾತ್ರರಾಗಲಿದ್ದಾರೆ.
ಹಳದಿ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಆಟಗಾರ್ತಿಯರು, ಹಳದಿ ಬಣ್ಣದ ಉಡುಗೆಯನ್ನು ತೊಟ್ಟಿದ್ದರು. ಸ್ಮೃತಿ ಜೊತೆಗೆ, ಶಫಾಲಿ ವರ್ಮಾ, ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ಹಳದಿ ಉಡುಪಿನಲ್ಲಿ ಕಾಣಿಸಿಕೊಂಡರು.
ಮೈದಾನದಲ್ಲಿ ಪ್ರೇಮ ನಿವೇದನೆ
ಇದಕ್ಕೂ ಮುನ್ನ ಟೀಮ ಇಂಡಿಯಾದ ಆಟಗಾರ್ತಿಯರು ಒಂದು ವಿಡಿಯೋ ಸಖತ್ ವೈರಲ್ ಆಗಿತ್ತು. ಈ ವೇಳೆ ಲಗೇ ರಹೋ ಮುನ್ನಾ ಭಾಯ್ ಚಿತ್ರದ "ಸಮ್ಜೋ ಹೋ ಹಿ ಗಯಾ" ಹಾಡಿಗೆ ಆಟಗಾರ್ತಿಯರು ಸ್ಟೆಪ್ಸ್ ಹಾಕಿದರು. ಇದೇ ವೇಳೆ ಸ್ಮೃತಿ ತಮ್ಮ ಕೈಯಲ್ಲಿದ್ದ ಉಂಗರವನ್ನು ತೋರಿಸುತ್ತಾ ಡ್ಯಾನ್ಸ್ ಮಾಡಿದರು. ಇದಾದ ಬಳಿಕ ಮತ್ತೊಂದು ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು ಮಾಡಿಕೊಳ್ಳಲಾಗಿತ್ತು. ಈ ವಿಡಿಯೋದಲ್ಲಿ ಪಲಾಶ್, ಸ್ಮೃತಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಂದು ಡಿವೈ ಪಾಟೀಲ್ ಮೈದಾನದಲ್ಲಿ ಪ್ರೇಮ ನಿವೇದನೆಯನ್ನು ಮಾಡಿದ್ದರು. ಈ ದೃಶ್ಯಗಳು ಸಹ ಸಖತ್ ವೈರಲ್ ಆಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications