Smriti Mandhana: 500 ಬೌಂಡರಿಗಳ ಎಲೈಟ್ ಕ್ಲಬ್ ಸೇರಿದ ಸ್ಮೃತಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಬುಧವಾರ ರಾಜಕೋಟ್‌ನಲ್ಲಿ ಐರ್ಲೆಂಡ್ ವಿರುದ್ಧ ದಾಖಲೆಯ ಸರಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುರುವ ಸ್ಮೃತಿ ಭಾರತದ ಪರ ವೇಗವಾಗಿ ಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಈ ವೇಳೆ ಸ್ಮೃತಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರ ಈ ದಾಖಲೆಗಳಲ್ಲಿ ಎದ್ದು ಕಾಣುವ ದಾಖಲೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅವರು ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಅಪರೂಪದ ಸಾಧನೆಯ ಬಗ್ಗೆ ವರದಿ ಇಲ್ಲಿದೆ.
ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ ಅಬ್ಬರಿಸಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 435 ರನ್ ಸೇರಿಸಿತು. ಈ ಬೃಹತ್ ಮೊತ್ತದ ಹಿಂದೆ ಟೀಮ್ ಇಂಡಿಯಾದ ಆರಂಭಿಕರಾದ ಪ್ರತಿಕಾ ರಾವಲ್ ಹಾಗೂ ಸ್ಮೃತಿ ಮಂಧನಾ ಅವರ ಕೊಡುಗೆ ಅಪಾರ. ಈ ಇಬ್ಬರೂ ಆಟಗಾರ್ತಿಯರು ಶತಕ ಬಾರಿಸಿ ಮಿಂಚಿದರು. ಈ ಪಂದ್ಯದಲ್ಲಿ ಶತಕ ಬಾರಿಸುವಲ್ಲಿ ಸ್ಮೃತಿ 12 ಬೌಂಡರಿ ಬಾರಿಸಿದರು. ಈ ಮೂಲಕ ಮತ್ತೊಂದು ವಿಶೇಷ ದಾಖಲೆ ಬರೆದರು.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ಬೌಂಡರಿ ಬಾರಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಇದ್ದು, ಇವರು ಏಕದಿನ ಕ್ರಿಕೆಟ್‌ನಲ್ಲಿ 805 ಬೌಂಡರಿ ಬಾರಿಸಿದ್ದಾರೆ.
ಮಹಿಳಾ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ಬೌಂಡರಿ ಬಾರಿಸಿದ ಆಟಗಾರ್ತಿಯರು
- ಮಿಥಾಲಿ ರಾಜ್ (ಭಾರತ), 805+ ಬೌಂಡರಿ
- ಷಾರ್ಲೆಟ್ ಎಡ್ವರ್ಡ್ಸ್ (ಇಂಗ್ಲೆಂಡ್), 686+ ಬೌಂಡರಿ
- ಸೂಜಿ ಬೇಟ್ಸ್ (ನ್ಯೂಜಿಲೆಂಡ್), 673 ಬೌಂಡರಿ
- ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ), 572 ಬೌಂಡರಿ
- ಸ್ಟೀವನ್ ಟೇಲರ್ (ವೆಸ್ಟ್ ಇಂಡೀಸ್), 546 ಬೌಂಡರಿ
- ಕರೆನ್ ರೋಲ್ಟನ್ (ಆಸ್ಟ್ರೇಲಿಯಾ), 529 ಬೌಂಡರಿ
- ಆಮಿ ಸ್ಯಾಟರ್ತ್‌ವೈಟ್ (ನ್ಯೂಜಿಲೆಂಡ್), 514 ಬೌಂಡರಿ
- ಟ್ಯಾಮ್ಸಿನ್ ಬ್ಯೂಮಾಂಟ್ (ಇಂಗ್ಲೆಂಡ್), 508 ಬೌಂಡರಿ
- ಸ್ಮೃತಿ ಮಂಧನಾ (ಭಾರತ), 500 ಬೌಂಡರಿ
ಈ ಪಂದ್ಯದಲ್ಲಿ ಸ್ಮೃತಿ ಮಂಧಾನ 7 ಸಿಕ್ಸರ್ ಸಿಡಿಸಿದರು. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂದಿದ್ದಾರೆ. 28 ವರ್ಷದ ಸ್ಮೃತಿ ಈಗಾಗಲೇ 52 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಹರ್ಮನ್ ಪ್ರೀತ್ ಕೌರ್ ದಾಖಲೆಯ ಸಮಕ್ಕೆ ನಿಂತಿದ್ದಾರೆ.
ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿಯರು
ಡಿಯಾಂಡ್ರಾ ಡಾಟಿನ್ (ವೆಸ್ಟ್ ಇಂಡೀಸ್), 89
ಸೋಫಿಯಾ ಡಿವೈನ್ (ನ್ಯೂಜಿಲೆಂಡ್), 70
ಲಿಜೆಲ್ಲೆ ಲೀ (ದಕ್ಷಿಣ ಆಫ್ರಿಕಾ), 70
ಕ್ಲೋಯ್ ಟ್ರಯಾನ್ (ದಕ್ಷಿಣ ಆಫ್ರಿಕಾ), 60
ಚಾಮರಿ ಅಟ್ಟಪಟ್ಟು (ಶ್ರೀಲಂಕಾ), 56
ಹರ್ಮನ್ ಪ್ರೀತ್ ಕೌರ್ (ಭಾರತ), 52
ಸ್ಮೃತಿ ಮಂಧನಾ (ಭಾರತ), 52
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications