Smriti Mandhana: ವಿರಾಟ್, ರೋಹಿತ್ ಕ್ಲಬ್ ಸೇರಿದ ಸ್ಮೃತಿ
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಹರ್ಮನ್ ಪ್ರೀತ್ ಪಡೆ 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅರ್ಧಶತಕ ಬಾರಿಸಿ ಮಿಂಚಿದರು. ಇದೇ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಚಿಕ್ಕ ಇನಿಂಗ್ಸ್ ಕಟ್ಟಿ ಔಟ್ ಆಗುತ್ತಾರೆ. ಆದರೆ ಇವರ ಈ ಚಿಕ್ಕ ಇನಿಂಗ್ಸ್ ದಾಖಲೆಯ ಪುಟಕ್ಕೆ ಸೇರಲು ಸಾಕಾಗುತ್ತದೆ.
ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 25 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 25 ರನ್ ಸಿಡಿಸುತ್ತಾರೆ. ಈ ಮೂಲಕ ಮತ್ತೊಂದು ಮೈಲಿಗಲ್ಲು ತಲುಪುತ್ತಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಇವರದ್ದಾಗುತ್ತದೆ.

ಸ್ಮೃತಿ ಇನಿಂಗ್ಸ್ ಐದನೇ ಓವರ್ ಬೌಲ್ ಮಾಡಿದ ಲಂಕಾ ತಂಡದ ನಾಯಕಿ ಅಟ್ಟಪಟ್ಟು ಅವರ ಐದನೇ ಎಸೆತದಲ್ಲಿ ಎಕ್ಸಟ್ರಾ ಕವರ್ ಮೇಲಿನಿಂದ ಬೌಂಡರಿ ಬಾರಿಸುತ್ತಾರೆ. ಈ ಮೂಲಕ ಸ್ಮೃತಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4000 ರನ್ ದಾಖಲಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎಂಬ ಹಿರಿಮೆ ಸ್ಮೃತಿ ತಮ್ಮದಾಗಿಸಿಕೊಳ್ಳುತ್ತಾರೆ.
ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ
ನ್ಯೂಜಿಲೆಂಡ್ ತಂಡದ 38 ವರ್ಷದ ಆಟಗಾರ್ತಿ ಸೂಜಿ ಬೇಟ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 4000ಕ್ಕೂ ಹೆಚ್ಚು ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಇವರು ಆಡಿದ 177 ಪಂದ್ಯಗಳಲ್ಲಿ 29ರ ಸರಾಸರಿಯಲ್ಲಿ 4716 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 28 ಅರ್ಧಶತಕಗಳು ಸೇರಿವೆ. ಇನ್ನು ಸ್ಮೃತಿ ಆಡಿದ 154 ಪಂದ್ಯಗಳಲ್ಲಿ 29ರ ಸರಾಸರಿಯಲ್ಲಿ 4007 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 31 ಅರ್ಧಶತಕಗಳು ಸೇರಿವೆ.

ವೇಗವಾಗಿ 4000 ರನ್
ಸ್ಮೃತಿ ಮಂಧಾನ ಅವರು ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 4000 ರನ್ ಕಲೆ ಹಾಕಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ. ಇವರು 4000 ರನ್ ಪೂರೈಸಲು 3227 ಎಸೆತಗಳನ್ನು ಎದುರಿಸಿದ್ದಾರೆ. ಇನ್ನು ಇಷ್ಟೇ ರನ್ ಕಲೆ ಹಾಕಲು ಸೂಜಿ ಬೆಟ್ಸ್ 3675 ಎಸೆತ ಎದುರಿಸಿದ್ದರು.
ಭಾರತ ಮಹಿಳಾ ಹಾಗೂ ಪುರುಷರ ತಂಡಗಳ ಸಾಧನೆಯನ್ನು ಒಟ್ಟಾರೆಯಾಗಿ ನೋಡುವುದಾದರೆ ಸ್ಮೃತಿ 4000 ರನ್‌ಗಳ ಕ್ಲಬ್ ಸೇರಿದ ಮೂರನೇ ಆಟಗಾರ್ತಿ ಆಗಿದ್ದಾರೆ. ಈ ಮೊದಲು ಈ ಸಾಧನೆಯನ್ನು ಭಾರತ ಪುರುಷರ ತಂಡದ ಮಾಜಿ ಆಟಗಾರರಾದ ರೋಹಿತ್ ಶರ್ಮಾ (4231 ರನ್), ವಿರಾಟ್ ಕೊಹ್ಲಿ (4188 ರನ್) ಮಾಡಿದ್ದರು. ಈಗ ಈ ಸಾಲಿಗೆ ಸ್ಮೃತಿ ಮಂಧಾನ ಸೇರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications