Women Cricket: ಪುರುಷರು ಮಾಡೋಕೆ ಆಗದನ್ನು ಮಹಿಳೆಯರು ಮಾಡಿ ಬಿಟ್ರು
ಭಾರತ ಪುರುಷರ ತಂಡದಲ್ಲಿ ವಿರಾಟ್ ಕೊಹ್ಲಿ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಸ್ಫೋಟಕ ಬ್ಯಾಟರ್ ರಿಷಭ್ ಪಂತ್ ಅವರಂತಹ ಆಟಗಾರರು ಇದ್ದರೂ ಸಹ ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡ ಮಾಡುವಲ್ಲಿ ಸಾಧ್ಯವಾಗಿಲ್ಲ. ರಾಜಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಅಮೋಘ ಸಾಧನೆ ಮಾಡಿದೆ. ಸ್ಮೃತಿ ಮಂಧನಾ ಮುಂದಾಳತ್ವ ತಂಡ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದಿದೆ. ಈ ಮೂಲಕ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪುರುಷ ಆಟಗಾರರು ಮಾಡದ ಸಾಧನೆ ಮಾಡಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವನಿತೆಯರು 50 ಓವರ್‌ಗಳಲ್ಲಿ 5 ವಿಕೆಟ್‌ಗೆ 435 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಐರ್ಲೆಂಡ್ 31.4 ಓವರ್‌ಗಳಲ್ಲಿ 131 ರನ್ ಸೇರಿಸಿ ಸೋಲು ಕಂಡಿತು. ಈ ಮೂಲಕ ಟೀಮ್ ಇಂಡಿಯಾ ಮೂರನೇ ಏಕದಿನ ಕ್ರಿಕೆಟ್‌ನಲ್ಲಿ 304 ರನ್‌ಗಳ ಜಯ ದಾಖಲಿಸಿತು.

ಈ ಪಂದ್ಯದಲ್ಲಿ ಆರಂಭಿಕ ಜೋಡಿ ಅಮೋಘ ಜೊತೆಯಾಟದ ನೆರವಿನಿಂದ ಟೀಮ್ ಇಂಡಿಯಾ ಮಹಿಳಾ ತಂಡದ ಬೃಹತ್ ಮೊತ್ತ ಕಲೆ ಹಾಕಿತು. ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದ ವನಿತೆಯರು ಏಕದಿನ ಕ್ರಿಕೆಟ್‌ನಲ್ಲಿ 400 ರನ್‌ಗಳ ಗಡಿಯನ್ನು ಇದೇ ಮೊದಲ ಬಾರಿಗೆ ದಾಟಿತು. ಇಷ್ಟೇ ಅಲ್ಲ ಪುರುಷರ ತಂಡ ಕಲೆ ಹಾಕಿದ ರನ್‌ಗಳಿಗಿಂತ ಹೆಚ್ಚಿನ ಟೋಟಲ್ ಕಲೆ ಹಾಕಿ ಅಬ್ಬರಿಸಿತು. 2011ರಲ್ಲಿ ಭಾರತದ ಪುರುಷರ ತಂಡ ವೆಸ್ಟ್ ಇಂಡೀಸ್ ವಿರುದ್ಧ 418 ರನ್ ಕಲೆ ಹಾಕಿತ್ತು. ಈಗ ಈ ದಾಖಲೆಯನ್ನು ಮಹಿಳಾ ತಂಡ ಮೀರಿ ನಿಂತಿದೆ.
ಇದು ಭಾರತದ ಅತಿ ದೊಡ್ಡ ಗೆಲುವು ಆಗಿದೆ. ಇದಕ್ಕೂ ಮೊದಲು 2017ರಲ್ಲಿ ಮಿಥಾಲಿ ರಾಜ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 249 ರನ್‌ಗಳ ಜಯ ದಾಖಲಿಸಿತ್ತು. ಈ ದಾಖಲೆಯನ್ನು ಸ್ಮೃತಿ ಮಂಧನಾ ಮುಂದಾಳತ್ವದ ಟೀಮ್ ಇಂಡಿಯಾ ಅಳಿಸಿ ಹಾಕಿದೆ. ಮೂರನೇ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 304 ರನ್ ಜಯ ಸಾಧಿಸಿ ದಾಖಲೆ ಬರೆಯಿತು. ಇನ್ನು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಬಾರಿ 400ಕ್ಕೂ ಹೆಚ್ಚು ರನ್ ಕಲೆ ಹಾಕಿದ ಸಾಧನೆಯನ್ನು ನ್ಯೂಜಿಲೆಂಡ್ ತಂಡ ಮಾಡಿದೆ.
ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತ
ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್, 491/4
ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ, 455/5
ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್, 440/3
ಭಾರತ ವಿರುದ್ಧ ಐರ್ಲೆಂಡ್, 435/5
ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್, 418
ಭಾರತ ಪುರುಷರ ತಂಡದ ಗರಿಷ್ಠ ಮೊತ್ತ
ವೆಸ್ಟ್ ಇಂಡೀಸ್ ವಿರುದ್ಧ, 418/5
ಶ್ರೀಲಂಕಾ ವಿರುದ್ಧ, 414/7
ಬರ್ಮುಡಾ ವಿರುದ್ಧ, 413/5
ನೆದರ್ಲೆಂಡ್ಸ್ ವಿರುದ್ಧ, 410/4
ಬಾಂಗ್ಲಾದೇಶ ವಿರುದ್ಧ, 409/8
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications