Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

81 ರನ್‌ ಬಾರಿಸುತ್ತಿದ್ದಂತೆ ಮತ್ತೊಂದು ದಾಖಲೆ ಬರೆಯಲಿರುವ ಸ್ಮೃತಿ

ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಇನ್ನು ಬಿಗ್ ಇನಿಂಗ್ಸ್‌ ಕಟ್ಟಿಲ್ಲ. ಆದರೆ ಇವರ ಮೇಲೆ ಭರವಸೆಯ ದೊಡ್ಡ ಭಾರ ಇದೆ. ಈಗಾಗಲೇ ಆಡಿರುವ 2 ಪಂದ್ಯಗಳಲ್ಲಿ ಸ್ಮೃತಿ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಅಬ್ಬರಿಸುವ ಇರಾದೆಯನ್ನು ಹೊಂದಿದ್ದಾರೆ.

ಸ್ಮೃತಿ ಮಂಧಾನ ಶ್ರೀಲಂಕಾ ವಿರುದ್ಧ 8, ಪಾಕ್‌ ವಿರುದ್ಧ 23 ರನ್‌ ಬಾರಿಸಿದ್ದರು. ಆದರೆ ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದ್ದೇ ಆದಲ್ಲಿ ದಾಖಲೆ ಬರೆಯುವ ಕನಸಿನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 81 ರನ್ ಬಾರಿಸಿದ್ದೇ ಆದಲ್ಲಿ ಏಕದಿನ ಫಾರ್ಮೆಟ್‌ನಲ್ಲಿ ದೊಡ್ಡ ದಾಖಲೆ ಬರೆಯಬಹುದು.

Smriti Mandhana Nears 5 000 ODI Runs Milestone Needs 81 Against South Africa

ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ 81 ರನ್ ಬಾರಿಸಿದ್ದೇ ಆದಲ್ಲಿ 5 ಸಾವಿರ ರನ್‌ಗಳ ಮೈಲುಗಲ್ಲು ತಲುಪಬಹುದು. ಈ ಸಾಧನೆಯನ್ನು ಮಾಡಿದ್ದೇ ಆದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಐದನೇ ಹಾಗೂ ಭಾರತದ ಎರಡನೇ ಆಟಗಾರ್ತಿ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಹಿಂದೆ ಭಾರತದ ಪರ ಮಿಥಾಲಿ ರಾಜ್‌ ಅವರು ಈ ಸಾಧನೆಯನ್ನು ಮಾಡಿದ್ದರು. ಇದಕ್ಕೆ ಮೊದಲು ವಿಶ್ವ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್, ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ ಮತ್ತು ವೆಸ್ಟ್ ಇಂಡೀಸ್‌ನ ಸಾರಾ ಟೇಲರ್ ಈ ಸಾಧನೆ ಮಾಡಿದ್ದರು.

ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಹಿರಿಮೆ ಮಿಥಾಲಿ ರಾಜ್ ಅವರಿಗೆ ಸಲ್ಲುತ್ತದೆ. ಅಲ್ಲದೆ ವಿಶ್ವ ಕ್ರಿಕೆಟ್‌ನಲ್ಲೂ ಗರಿಷ್ಠ ರನ್ ಬಾರಿಸಿದ ಹಿರಿಮೆ ಇವರದ್ದೇ ಆಗಿದೆ. ಮಿಥಾಲಿ ಒಟ್ಟಾರೆ 232 ಪಂದ್ಯಗಳಲ್ಲಿ 50.68 ಸರಾಸರಿಯಲ್ಲಿ 7,805 ರನ್ ಗಳಿಸಿದ್ದಾರೆ.

Smriti Mandhana Nears 5 000 ODI Runs Milestone Needs 81 Against South Africa

ಸ್ಮೃತಿ ಮಂಧಾನ ಸಾಧನೆ

29 ವರ್ಷದ ಸ್ಮೃತಿ ಮಂಧಾನ 110 ಏಕದಿನ ಪಂದ್ಯಗಳನ್ನು ಭಾರತದ ಪರ ಆಡಿದ್ದಾರೆ. ಇನ್ನು ಇವರು 47.29ರ ಸರಾಸರಿಯಲ್ಲಿ 4919 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 13 ಶತಕ ಹಾಗೂ 32 ಅರ್ಧಶತಕಗಳನ್ನು ಸಹ ಬಾರಿಸಿದಾರೆ. ಈಗಾಗಲೇ ಹಲವು ದಾಖಲೆಗಳನ್ನು ಮಾಡಿರುವ ಸ್ಮೃತಿ ಆರಂಭಿಕರಾಗಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನು ಏಕದಿನ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು.

Story first published: Tuesday, October 7, 2025, 11:45 [IST]
Other articles published on Oct 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+