ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರತಿ ವರ್ಷ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಈ ವೇಳೆ ಪುರುಷರ ಹಾಗೂ ಮಹಿಳಾ ಆಟಗಾರ್ತಿಯರಿಗೆ ಅವರ ಪ್ರದರ್ಶನದ ಮೇಲೆ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಐಸಿಸಿ ವರ್ಷದ ಪುರುಷ ಟಿ20 ಕ್ರಿಕೆಟ್ ಆಟಗಾರರ ಪ್ರಶಸ್ತಿ ರೇಸ್‌ನಲ್ಲಿ ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಅರ್ಷದೀಪ್ ಸಿಂಗ್ ಸೇರಿದಂತೆ ನಾಲ್ವರು ಆಟಗಾರರು ಸೇರಿದ್ದಾರೆ. ಈಗ ಮಹಿಳಾ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಗೊಂಡಿರುವ ಆಟಗಾರ್ತಿಯರ ಹೆಸರುಗಳು ಬಹಿರಂಗ ಗೊಂಡಿವೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಆಟಗಾರ್ತಿಯ ಸ್ಥಾನ ಪಡೆದಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಪ್ರಸಕ್ತ ವರ್ಷ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮ ಸ್ಥಿರ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಇತ್ತೀಚಿಗೆ ಭಾರತದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಸ್ಮೃತಿ ಅಮೋಘ ಪ್ರದರ್ಶನ ನೀಡಿದ್ದರು. ಈಗ ಇವರ ಮುಖದಲ್ಲಿ ಮಂದಹಾಸ ಮೂಡಿಸುವ ಸುದ್ದಿಯೊಂದು ಬಂದಿದೆ. ಭಾರತದ ಆರಂಭಿಕ ಆಟಗಾರ್ತಿ ಐಸಿಸಿ 'ವರ್ಷದ ಮಹಿಳಾ ಏಕದಿನ ಕ್ರಿಕೆಟಿಗ' ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದಾರೆ.

ಟೀಮ್ ಇಂಡಿಯಾದ ಸ್ಮೃತಿ ಮಂಧನಾ ಅವರನ್ನು ಹೊರತು ಪಡಿಸಿದರೆ, ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್, ಶ್ರೀಲಂಕಾದ ಚಾಮರಿ ಅಟಪಟ್ಟು ಮತ್ತು ಆಸ್ಟ್ರೇಲಿಯಾ ಅನ್ನಾಬೆಲ್ ಸದರ್ಲ್ಯಾಂಡ್ ಐಸಿಸಿ ಮಹಿಳಾ ಏಕದಿನ ವರ್ಷದ ಆಟಗಾರ್ತಿಯ ರೇಸ್‌ನಲ್ಲಿದ್ದಾರೆ.
ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಪ್ರಸಕ್ತ ವರ್ಷ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ 57.46ರ ಸರಾಸರಿಯಲ್ಲಿ 747 ರನ್ ಸಿಡಿಸಿದ್ದಾರೆ. ಈ ವೇಳೆ ಅವರ ಸ್ಟ್ರೈಕ್ ರೇಟ್ 95.15 ಆಗಿದೆ. ಈ ವೇಳೆ ಅವರು ಬೌಲಿಂಗ್ ಮಾಡಿ ಒಂದು ವಿಕೆಟ್ ಪಡೆದು ಬೀಗಿದ್ದಾರೆ. ಭಾರತದ 28 ವರ್ಷದ ಮಂಧನಾ ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಎರಡು ಶತಕ ಬಾರಿಸಿ ತಮ್ಮ ರನ್ ಬೇಟೆಯ ಅಭಿಯಾನಕ್ಕೆ ಚುರುಕು ಮುಟ್ಟಿಸಿದರು. ಡಿಸೆಂಬರ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎರಡು ಶತಕ ಬಾರಿಸಿ ಅಬ್ಬರಿಸಿದರು.

ಸ್ಮೃತಿ ಮಂಧಾನ 2013ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿದರು. ಇವರು ಈ ವರೆಗೆ ಭಾರತದ ಪರ 94 ಏಕದಿನ ಪಂದ್ಯಗಳಲ್ಲಿ 9 ಶತಕಗಳನ್ನು ಬಾರಿಸಿದ್ದು, 29 ಅರ್ಧಶತಕ ಸಹ ಸೇರಿವೆ. ಇನ್ನು 3960 ರನ್ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ಇವರು ಆಡಿದ 12 ಪಂದ್ಯಗಳಲ್ಲಿ 697 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಅರ್ಧಶತಕ, 3 ಶತಕಗಳು ಸೇರಿವೆ. ಶ್ರೀಲಂಕಾದ ಚಾಮರಿ ಅಟಪಟ್ಟು ಆಡಿದ 9 ಪಂದ್ಯಗಳಲ್ಲಿ 458 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 2 ಅರ್ಧಶತಗಳು ಸೇರಿವೆ. ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಸಹ ಈ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.