Smriti Mandhana: ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಆರ್‌ಸಿಬಿ ಕ್ಯಾಪ್ಟನ್
ವೆಸ್ಟ್ ಇಂಡೀಸ್ ವನಿತೆಯರ ತಂಡ ಭಾರತ ಪ್ರವಾಸ ಕೈಗೊಂಡಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿವೆ. ಈಗ ಟಿ20 ಸರಣಿ ಸಮಗೊಂಡಿದ್ದು, ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಇಂದು (ಗುರುವಾರ) ಕೊನೆಯ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ಉಭಯ ತಂಡಗಳು ಸಜ್ಜಾಗಿವೆ. ಇದರ ನಡುವೆ ಭಾರತ ತಂಡದ ಸ್ಟಾರ್ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿದ್ದಾರೆ.
ಸ್ಮೃತಿ ಮಂಧಾನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಮಾಡುವ ಅಂಚಿನಲ್ಲಿದ್ದಾರೆ. ಸದ್ಯ ಈ ದಾಖಲೆ ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಹೆಸರಿನಲ್ಲಿದ್ದು, ಈ ವರ್ಷ 40 ಸರಾಸರಿ ಹಾಗೂ ಎರಡು ಶತಕಗಳೊಂದಿಗೆ 720 ರನ್ ಗಳಿಸಿದ್ದಾರೆ. ಔಟಾಗದೆ 119 ರನ್ ಗಳಿಸಿರುವುದು ಅವರ ಉತ್ತಮ ಸ್ಕೋರ್. ಮಂಧಾನ ಈ ಸಾಧನೆಯಿಂದ ಕೇವಲ 34 ರನ್ ಅಂತರದಲ್ಲಿದ್ದಾರೆ.

ಈ ವರ್ಷ, 22 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು 40.35 ಸರಾಸರಿ ಮತ್ತು ಏಳು ಅರ್ಧ ಶತಕಗಳೊಂದಿಗೆ 686 ರನ್ ಗಳಿಸಿದ್ದಾರೆ. ಈ ಮೂಲಕ ಮಂಧಾನಾ ಒಂದು ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಹರ್ಮನ್‌ಪ್ರೀತ್ ಕೌರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ವಿಂಡೀಸ್ ವಿರುದ್ಧ ಮಂಧಾನ ಅಬ್ಬರ
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಮಂಧಾನ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಎರಡು ಪಂದ್ಯಗಳಲ್ಲಿ 58ರ ಸರಾಸರಿಯಲ್ಲಿ 116 ರನ್ ಗಳಿಸಿ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮಂಧಾನ 54 ರನ್‌ಗಳನ್ನು ಬಾರಿಸುವ ಮೂಲಕ ಸರಣಿಯನ್ನು ಪ್ರಾರಂಭಿಸಿದರು. ಅವರ ಅರ್ಧಶತಕದ ನೆರವಿನಿಂದ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಎರಡನೇ ಪಂದ್ಯದಲ್ಲೂ ಮಂಧಾನ (62) ಅರ್ಧಶತಕ ಬಾರಿಸಿದರೂ ಭಾರತ ಸೋಲನುಭವಿಸಿತು. ಇದೀಗ ಮೂರನೇ ಪಂದ್ಯದಲ್ಲಿ ಮಂಧಾನ ಬ್ಯಾಟಿಂಗ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಒಂದು ವರ್ಷದಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
- ಚಾಮರಿ ಅಟಪಟ್ಟು (ಶ್ರೀಲಂಕಾ) - 21 ಪಂದ್ಯಗಳಲ್ಲಿ 720 ರನ್ (2024)
- ಇಶಾ ಓಜಾ (ಯುಎಇ) - 20 ಪಂದ್ಯಗಳಲ್ಲಿ 711 ರನ್ (2024)
- ಹೇಯ್ಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್) - 14 ಪಂದ್ಯಗಳಲ್ಲಿ 700 ರನ್ (2023)
- ಕವಿಶಾ ಅಗೋಡೆಗೆ (ಶ್ರೀಈಲಂಕಾ} - 27 ಪಂದ್ಯಗಳಲ್ಲಿ 696 ರನ್ (2022)
- ಇಶಾ ಓಜಾ (ಯುಎಇ) - 25 ಪಂದ್ಯಗಳಲ್ಲಿ 675 ರನ್ (2022)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications