Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಮೃತಿ ಮಂಧಾನ ಮದುವೆ ದಿನಾಂಕ ಫಿಕ್ಸ್: ಡ್ಯಾನ್ಸ್‌ ವಿಡಿಯೋ ವೈರಲ್‌

ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ವಿವಾಹದ ದಿನಾಂಕ ಈಗ ಹೊರಬಿದ್ದಿದೆ. ಸ್ಮೃತಿ ಮಂಧಾನ ಅವರು ತಮ್ಮ ಬಹು ಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರನ್ನು ನವೆಂಬರ್‌ 23 ರಂದು ಮದುವೆಯಾಗಲಿದ್ದಾರೆ. ಸ್ಮೃತಿ ಮದುವೆಗೂ ಮುನ್ನ ತಂಡದ ಆಟಗಾರ್ತಿಯರೊಂದಿಗೆ ಒಂದು ವಿಡಿಯೋ ಶೂಟ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಸ್ಮೃತಿ ಮಂಧಾನ ಅವರು ತಮ್ಮ ನಿಶ್ಚಿತಾರ್ಥವನ್ನು ಅಧಿಕೃತಗೊಳಿಸಿದ್ರು. ಈ ಮೂಲಕ ಹಲವು ದಿನಗಳ ಕಾಲ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಂತೆ ಆಗಿದೆ. ವಿಡಿಯೋದಲ್ಲಿ ಸ್ಮೃತಿ ಜೆಮಿಮಾ ರೊಡ್ರಿಗಸ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್ ಮತ್ತು ಅರುಂಧತಿ ರೆಡ್ಡಿ ಅವರೊಂದಿಗೆ ಡಾನ್ಸ್‌ ಮಾಡಿ ಖುಷಿ ಪಟ್ಟಿದ್ದಾರೆ.

Smriti Mandhana-Palash Muchhal wedding date confirmed Team India s Lage Raho Munna Bhai dance goes viral

ಲಗೇ ರಹೋ ಮುನ್ನಾ ಭಾಯಿ ಚಿತ್ರದ "ಸಂಜೋ ಹೋ ಹಿ ಗಯಾ" ಹಾಡಿಗೆ ಆಟಗಾರ್ತಿಯರು ಸಖತ್ ಸ್ಟೆಪ್ಸ್ ಹಾಕಿ ಖುಷಿ ಪಟ್ಟಿದ್ದಾರೆ. ಇದೇ ಡ್ಯಾನ್ಸ್‌ನಲ್ಲಿ ಸ್ಮೃತಿ ತಮ್ಮ ಕೈಯಲ್ಲಿದ್ದ ನಿಶ್ಚಿತಾರ್ಥದ ಉಂಗರವನ್ನು ತೋರಿಸುತ್ತಾ ಡ್ಯಾನ್ಸ್‌ ಮಾಡಿದರು. ಈ ಮೋಜಿನ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಹಾಕುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ಸ್ಮೃತಿ ಹಾಗೂ ಪಲಾಶ್‌ ಅವರ ಮದುವೆ ಇದೇ ತಿಂಗಳು 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆಯಲಿದೆ. ಮದುವೆಯ ಬಳಿಕ ಇಲ್ಲಿಯೇ ಅದ್ಧೂರಿ ಪಾರ್ಟಿ ನಡೆಯಲಿದೆ. ಬಳಿಕ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಬಹುದಾಗಿದೆ ಎಂದು ತಿಳಿದು ಬಂದಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು ಹಾಗೂ ಭಾರತ ತಂಡದ ಕ್ರಿಕೆಟ್ ಆಟಗಾರರು ಭಾಗವಹಿಸುವ ಸಾಧ್ಯತೆ ಇದೆ.

ಮೋದಿ ಶುಭಾಶಯ

ಸ್ಮೃತಿ ಹಾಗೂ ಪಲಾಶ್‌ ಮದುವೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ದಂಪತಿಗಳು ಒಟ್ಟಿಗೆ ಸಂತೋಷದ ಜೀವನ ನಡೆಸಲಿ ಹರಿಸಿದ್ದಾರೆ. ಅಲ್ಲದೆ ಮೋದಿ ಬರೆದ ಪತ್ರದಲ್ಲಿ ಸ್ಮೃತಿ ಅವರ ಮದುವೆಯ ದಿನಾಂಕವನ್ನು ತಿಳಿಸಿದ್ದಾರೆ. ಸ್ಮೃತಿ ಮತ್ತು ಪಲಾಶ್ ಅವರು ನಂಬಿಕೆಯ ಆಧಾರದ ಮೇಲೆ ಒಟ್ಟಿಗೆ ಜೀವನ ನಡೆಸಬೇಕು., ಯಾವಾಗಲೂ ಪರಸ್ಪರ ಬೆಂಬಲಕ್ಕೆ ನಿಲ್ಲಬೇಕು ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ. ಇದೇ ಪತ್ರದಲ್ಲಿ ಮದುವೆ ನವೆಂಬರ್ 23 ರಂದು ನಡೆಯಲಿದೆ ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ. ಆದರೆ ಈ ಬಗ್ಗೆ ಸ್ಟಾರ್‌ಗಳಿಂದ ಇನ್ನು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

Story first published: Thursday, November 20, 2025, 22:37 [IST]
Other articles published on Nov 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+