For Quick Alerts
ALLOW NOTIFICATIONS  
For Daily Alerts
 

ಪಲಾಶ್‌ ಮೋಸಗಾರನಾ? ಸ್ಮೃತಿಗೆ ವಂಚಿಸಿದ್ರಾ? ಸ್ಕ್ರೀನ್ ಶಾಟ್‌ ರಹಸ್ಯ ಏನು?

ಸ್ಮೃತಿ ಮಂಧಾನ ಅವರು ಈಗ ಭಾರೀ ಸುದ್ದಿಯಲ್ಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಬ್ಯಾಟಿಂಗ್‌ನಲ್ಲಿ ಸದ್ದು ಮಾಡಿದ್ದ ಸ್ಮೃತಿ, ಈಗ ವೈಯಕ್ತಿಕ ಜೀವನದಿಂದ ಸುದ್ದಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಮದುವೆಗೆ ಸಂಬಂಧಿಸಿದ ಸುದ್ದಿಗಳು ಸ್ಮೃತಿ ಅವರನ್ನು ಕೇಂದ್ರಿಕರಿಸಿದ್ದವು. ಆದರೆ ಭಾನುವಾರದ ಸುದ್ದಿಯ ಸ್ವರೂಪವೇ ಬದಲಾಗಿದೆ. ತಂದೆ ಆಸ್ಪತ್ರೆ ಸೇರುತ್ತಿದ್ದಂತೆ ಮದುವೆ ಮುಂದೂಡಲಾಗಿದೆ. ಅಲ್ಲಿಂದ ಮದುವೆ ಸುದ್ದಿಯ ಸುತ್ತ ಹಲವು ವಿಚಾರಗಳು ಗಿರಿಕಿ ಹೊಡೆಯುತ್ತಿವೆ. ಈಗ ಈ ಸುದ್ದಿಗೆ ಹೊಸ ವಿಚಾರವೊಂದು ಸೇರ್ಪಡೆ ಆಗಿದೆ. ಆ ಒಂದು ವಾಟ್ಸ್‌ ಅಪ್‌ ಸ್ಕ್ರೀನ್ ಶಾಟ್‌ ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.

ನವೆಂಬರ್‌ 23 ರಂದು ಸ್ಮೃತಿ ಮಂಧಾನ ಹಾಗೂ ಪಲಾಶ್‌ ಮುಚ್ಚಲ್‌ ಮದುವೆ ಆಗಬೇಕಿತ್ತು. ಆದರೆ ಸ್ಮೃತಿ ಅವರ ತಂದೆಯ ಆರೋಗ್ಯದಲ್ಲಿ ಏರು ಪೇರು ಆಗಿದ್ದರಿಂದ ಮದುವೆಯನ್ನು ಮುಂದೂಡಲಾಯಿತು. ಬಳಿಕ ಸಂಗೀತ ನಿರ್ದೇಶಕ ಪಲಾಶ್‌ ಅವರನ್ನೂ ಸಹ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿದ್ದು, ವಿಶ್ರಾಂತಿಗಾಗಿ ಅವರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈಗ ಸಾಮಾಜಿಕ ತಾಣದಲ್ಲಿ, ಪಲಾಶ್‌, ಬೇರೆ ಯುವತಿಯೊಂದಿಗೆ ಮಾಡಿದ ಚಾಟ್‌ಗಳು ವೈರಲ್ ಆಗುತ್ತಿವೆ.

Smriti Mandhana-Palash Muchhal Wedding Postponed Amidst Father s Health amp amp Chat Leak Controversy

ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹರಡಿರುವಂತೆ ಅಪರಿಚಿತ ಮಹಿಳೆಯೊಬ್ಬಳು ಪಲಾಶ್‌ ಜೊತೆ ಸಂಭಾಷಣೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಸಂಗಿತ ನಿರ್ದೇಶಕ ಸುದ್ದಿಯ ಕೇಂದ್ರ ಬಿಂದು ಆಗಿದ್ದಾರೆ. ಸಾಮಾಜಿಕ ತಾಣದಲ್ಲಿ ಪಲಾಶ್‌, ಇನ್ನೊಬ್ಬ ಯುವತಿಯೊಂದಿಗೆ ನಡೆಸಿದ ಶಾಟ್‌ಗಳ ಸ್ಕ್ರೀನ್‌ ಶಾಟ್‌ ವೈರಲ್ ಆಗುತ್ತಿವೆ. ಸ್ಮೃತಿ ಹಾಗೂ ಪಲಾಶ್‌ ಮದುವೆ ಮುಂದೂಡಿದ ಬಳಿಕ ಈ ಸುದ್ದಿಗಳು ಬುಗಿಲೆದ್ದಿದೆ. ಅಪರಿಚಿತ ಮಹಿಳೆ ತಮ್ಮ ಹಾಗೂ ಪಲಾಶ್‌ ನಡುವಿನ ಸ್ಕ್ರೀನ್‌ಶಾಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಈಗ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.

ಏನೆಲ್ಲಾ ಮೆಸೇಜ್ ಮಾಡಲಾಗಿದೆ?

ಪಲಾಶ್‌ ಅವರ ಮೇಲೆ ಗಂಭೀರ ಆರೋಪ ಮಾಡಿದ ಮಹಿಳೆಯನ್ನು ಮೇರಿ ಡಿಕೋಸ್ಟ್ ಎಂದು ತಿಳಿದು ಬಂದಿದೆ. ಈ ಸ್ಕ್ರೀನ್‌ ಶಾಟ್‌ಗಳಲ್ಲಿ ಯುವತಿ ಪಲಾಶ್‌ ಅವರ ಸೌಂದರ್ಯವನ್ನು ಬಣ್ಣಿಸಿದ ಬಗ್ಗೆ ತಿಳಿದು ಬಂದಿದೆ. ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ಗಳಲ್ಲಿ ಪಲಾಶ್‌ ಈಜಾಡಲು ಬರುವಂತೆ ಮೆಸೇಜ್‌ ಮಾಡಿದ್ದರು. ಸ್ಪಾಗೆ, ಬೀಚ್‌ಗೆ ಹೋಗೋಣ ಎಂಬ ಮೆಸೇಜ್‌ಗಳನ್ನು ಸಹ ಮಾಡಿದ್ದಾರೆ.

ಈ ಸ್ಕ್ರೀನ್‌ಶಾಟ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗದೇ ಇದ್ದರೂ, ಈ ವಿಷಯ ವ್ಯಾಪಕವಾಗಿ ಚರ್ಚೆ, ಟೀಕೆ, ಊಹಾಪೋಹ ಹುಟ್ಟು ಹಾಕಿದೆ.

Story first published: Tuesday, November 25, 2025, 16:41 [IST]
Other articles published on Nov 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+