ಮಹಿಳಾ ಬಿಗ್ ಬಾಷ್ ಲೀಗ್‌ನಲ್ಲಿ ಸ್ಮೃತಿ ಭರ್ಜರಿ ಬ್ಯಾಟಿಂಗ್: ವೈರಲ್ ವಿಡಿಯೋ

ಸಿಡ್ನಿ, ಡಿಸೆಂಬರ್ 24: ಸಿಡ್ನಿ ಶೋಗ್ರೌಂಡ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಬಿಗ್ ಬಾಷ್ ಲೀಗ್ ಟೂರ್ನಿಯಲ್ಲಿ ಭಾರತದ ಸ್ಮೃತಿ ಮಂಧಾನ ಭರ್ಜರಿ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ. ಮಂಧಾನ ಬಿರುಸಿನ ಬ್ಯಾಟಿಂಗ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಸೋಮವಾರ (ಡಿಸೆಂಬರ್ 24) ನಡೆದ ಸಿಡ್ನಿ ಥಂಡರ್ಸ್ ಮತ್ತು ಹೊಬರ್ಟ್ ಹರಿಕೇನ್ಸ್ ನಡುವಿನ ಪಂದ್ಯದಲ್ಲಿ ಹೊಬರ್ಟ್ ಹರಿಕೇನ್ಸ್ ಪ್ರತಿನಿಧಿಸಿದ್ದ ಸ್ಮೃತಿ, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 22 ಎಸೆತಗಳಿಗೆ ಸ್ಮೃತಿ 35 ರನ್ ಕಲೆ ಹಾಕಿದರು. ತಂಡದ ಪರ ಗಮನಾರ್ಹ ಹೋರಾಟ ನಡೆಸಿದ್ದು ಮಂಧಾನ, ಹೀದರ್ ನೈಟ್ (35 ರನ್) ಮತ್ತು ಸ್ಟೆಫಾನಿ ದಫರಾ (26) ಮಾತ್ರ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೊಬರ್ಟ್ ಹರಿಕೇನ್ಸ್ ತಂಡ 19.4 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 135 ರನ್ ಗಳಿಸಿತ್ತು. ಆದರೆ ಸಿಡ್ನಿ ಥಂಡರ್ಸ್ ಪರ ರಾಚೆಲ್ ಹೇಯ್ನ್ಸ್ (68/48) ಆಕರ್ಷಕ ಆರ್ಧಶತಕ ತಂಡಕ್ಕೆ ಗೆಲುವನ್ನು ತಂದಿತು. ಸಿಡ್ನಿ 16.4 ಓವರ್‌ನಲ್ಲಿ 4 ವಿಕೆಟ್ ಕಳೆದು 136 ರನ್ ಪೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications