For Quick Alerts
ALLOW NOTIFICATIONS  
For Daily Alerts
 

ಸ್ಮೃತಿ-ಪ್ರತಿಕಾ ಬರೆದ ದಾಖಲೆಗಳ ಪಟ್ಟಿ

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಗುರುವಾರ ನಡೆದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ 53 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಉಪಾಂತ್ಯವನ್ನು ಪ್ರವೇಶಿಸಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿಯರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಈ ವೇಳೆ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್‌ ಹಾಗೂ ಸ್ಮೃತಿ ಮಂಧಾನ ಜೋಡಿ ಹಲವು ದಾಖಲೆಗಳನ್ನು ಬರೆಯಿತು. ಭಾರತದ ಭರವಸೆಯ ಆರಂಭಿಕ ಜೋಡಿ ಬರೆದ ದಾಖಲೆಗಳ ಪಟ್ಟಿ ಇಲ್ಲಿದೆ.

343/3- ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಕಲೆ ಹಾಕಿದ ಅತಿ ಗರಿಷ್ಠ ಮೊತ್ತವಾಗಿದೆ. ಇದೇ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣಂ 330 ರನ್‌ ಗಳಿಸಿದ ದಾಖಲೆ ಅಳಿಸಿ ಹಾಕಿದೆ.

Smriti Mandhana amp amp Prathika Raval Smash Records as India Secure World Cup Semi-Final Spot

14- ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಬಾರಿಸಿದ ಎರಡನೇ ಗರಿಷ್ಠ ಶತಕದ ಸಂಖ್ಯೆ. ಈ ಮೂಲಕ ಸ್ಮೃತಿ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಎರಡನೇ ಬ್ಯಾಟರ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಇವರಿಗಿಂತ ಮೊದಲು ಮೆಗ್‌ ಲ್ಯಾನಿಂಗ್‌ 15 ಶತಕ ಸಿಡಿಸಿದ್ದರು.

17- ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪದಲ್ಲಿ ಮೆಗ್‌ ಲ್ಯಾನಿಂಗ್ ಬಾರಿಸಿದ ಶತಕದ ಸಂಖ್ಯೆ. ಈ ದಾಖಲೆಯ ಶತಕದ ಸಮಕ್ಕೆ ಸ್ಮೃತಿ ಮಂಧಾನ ನಿಂತಿದ್ದಾರೆ.

ದಾಖಲೆಗಳ ಸುರಿಮಳೆ

23- ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಪ್ರತಿಕಾ ರಾವಲ್‌ 23 ಇನಿಂಗ್ಸ್‌ಗಳಲ್ಲಿ 1000 ರನ್‌ ಪೂರೈಸಿದರು.

5194- ಸ್ಮೃತಿ ಮಂಧಾನ ಆರಂಭಿಕ ಆಟಗಾರ್ತಿಯಾಗಿ ಗರಿಷ್ಠ ರನ್‌ ಕಲೆ ಹಾಕಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಸ್ಮೃತಿ ಸೂಜಿ ಬೇಟ್ಸ್‌ ಅವರ 5088 ರನ್ ದಾಖಲೆಯನ್ನು ಅಳಿಸಿ ಹಾಕಿದರು.

212- ಭಾರತದ ಪರ ಸ್ಮೃತಿ ಹಾಗೂ ಪ್ರತಿಕಾ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ದಾಖಲಾದ ಗರಿಷ್ಠ ರನ್‌. ಇದಕ್ಕೂ ಮೊದಲು 2022ರಲ್ಲಿ ಹರ್ಮನ್ ಪ್ರೀತ್ ಹಾಗೂ ಸ್ಮೃತಿ 184 ರನ್ ಬಾರಿಸಿದ್ದರು.

Smriti Mandhana amp amp Prathika Raval Smash Records as India Secure World Cup Semi-Final Spot

3- ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆರಂಭಿಕ ಆಟಗಾರ್ತಿಯರು ಇದು ಮೂರನೇ ಬಾರಿಗೆ ಸೆಂಚೂರಿ ಸಿಡಿಸಿದ ದಾಖಲೆ ಬರೆದರು.

5- ಸ್ಮೃತಿ ಮಂಧನಾ ಪ್ರಸಕ್ತ ವರ್ಷ ಬಾರಿಸಿದ ಶತಕದ ಸಂಖ್ಯೆ 5. ಈ ಮೂಲಕ ಸ್ಮೃತಿ ದಕ್ಷಿಣ ಆಫ್ರಿಕಾದ ತಜ್ಮಿನ್‌ ಬ್ರಿಟ್ಸ್‌ ಅವರ ದಾಖಲೆಯ ಸಮಕ್ಕೆ ನಿಂತರು.

7- ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್‌ 7 ಶತಕಗಳ ಜೊತೆಯಾಟದ ಕಾಣಿಕೆ ನೀಡಿದರು.

4- ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ ಹಾಗೂ ಪ್ರತಿಕಾ 4 ಬಾರಿ 150ಕ್ಕೂ ಹೆಚ್ಚು ರನ್‌ ಕಲೆ ಹಾಕಿದ ಸಾಧನೆ ಮಾಡಿದರು.

ಭಾರತ ತನ್ನ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಭಾನುವಾರ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಇದೇ ರೀತಿ ಪ್ರದರ್ಶನದ ಕನಸನ್ನು ಆಟಗಾರ್ತಿಯರು ಹೊಂದಿದ್ದಾರೆ.

Story first published: Friday, October 24, 2025, 8:33 [IST]
Other articles published on Oct 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+