ಸ್ಟ್ರೆಸ್ ನಿರ್ವಹಣೆಗೆ ಕ್ರಿಕೆಟರ್ ಸ್ಮೃತಿ ಮಂಧಾನ ಈ ಧಾರಾವಾಹಿ ನೋಡ್ತಾರಂತೆ!
ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮೈದಾನದಲ್ಲಿ ತನ್ನ ಅಮೋಘ ಆಟದ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಆಟಗಾರ್ತಿ. ಇವರು ಬಾರಿಸುವ ಆಫ್ ಸೈಡ್ ಹೊಡೆತಗಳನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇವರು ತಮ್ಮ ಮೋಡಿಯ ಆಟದ ಮೂಲಕ ವಿಶ್ವದಲ್ಲೇ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿದೆ. ಇದೇ ಪ್ರಶ್ನೆಗೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಸ್ಮೃತಿ ಮಂಧಾನ ನೀಡಿದ್ದಾರೆ.
ದಶಕಕ್ಕೂ ಹೆಚ್ಚಿನ ಕ್ರೀಡಾ ಜೀವನದ ಯಶಸ್ಸಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಯಶಸ್ಸು ಎನ್ನುವುದು ಕೇವಲ ಪ್ರತಿಭೆಯಿಂದ ಮಾತ್ರ ಬರುವುದಿಲ್ಲ. ಬದಲಿಗೆ ಶಿಸ್ತು, ತಾಳ್ಮೆ, ದೈನಂದಿನ ನಿರಂತರತೆ ಮತ್ತು ಕಠಿಣ ಸಂದರ್ಭಗಳನ್ನು ಎದುರಿಸುವ ಮಾನಸಿಕತೆಯಿಂದ ಸಾಧ್ಯವಾಗುತ್ತದೆ. ಇದೇ ರೀತಿ ಕ್ರೀಡಾಪಟುಗಳು ಒತ್ತಡವನ್ನು ಮೆಟ್ಟಿನಿಂತು ಸಾಧನೆಯ ಶಿಖರವನ್ನು ಏರುತ್ತಾರೆ.

ಸ್ಮೃತಿ ಮಂಧಾನ ಅವರಿಗೆ ಇತ್ತೀಚೆಗೆ ಸಂದರ್ಶನವೊಂದರದಲ್ಲಿ ನೀವು ಒತ್ತಡವನ್ನು ಮೆಟ್ಟಿನಿಲ್ಲುವುದು ಹೇಗೆ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಈ ವೇಳೆ ಸ್ಮೃತಿ ಮಂಧಾನ ಭಾರತದ ಐಕಾನಿಕ್ ಧಾರಾವಾಹಿ ಮಹಾಭಾರತ ನೋಡುವುದಾಗಿ ತಿಳಿಸಿದ್ದಾರೆ. ಭಗವದ್ಗೀತೆಯ ಬೋಧನೆಗಳ ಮೇಲೆ ತಮಗೆ ಅಪಾರ ನಂಬಿಕೆಯಿದ್ದು, ಜೀವನದ ಪ್ರತಿಯೊಂದು ಪ್ರಶ್ನೆಗೂ ಅದರಲ್ಲಿ ಉತ್ತರವಿದೆ ಎಂದು ಅವರು ವಿವರಿಸಿದ್ದಾರೆ.
ಸ್ಟ್ರೆಸ್ ನಿರ್ವಹಣೆಗೆ ಹೀಗೆ ಮಾಡ್ತಾರೆ ಸ್ಮೃತಿ
ಮೈದಾನದ ಒಳಗೆ ಹಾಗೂ ಹೊರಗಿನ ಸ್ಟ್ರೆಸ್ ನಿವಾರಣೆಗೆ ಸ್ಮೃತಿ ಮಂಧಾನ ಮಹಾಭಾರತ ಹಾಗೂ ಭಗವದ್ಗೀತೆಗಳು ತುಂಬ ಸಹಾಯ ಮಾಡಿವೆ ಎಂದು ಕ್ರೆಡಿಟ್ ನೀಡಿದ್ದಾಗಿ ತಿಳಿಸಿದ್ದಾರೆ. ಮೈದಾನದ ಒಳಗೆ ಮತ್ತು ಹೊರಗೆ ಅವರ ಈ ಅದ್ಭುತ ಶಾಂತ ಮನಸ್ಥಿತಿಯ ಹಿಂದಿನ ಅಸಲಿ ರಹಸ್ಯ ಈಗ ಬಯಲಾಗಿದೆ.
ಸ್ಮೃತಿ ಸಾಧನೆ
ಪ್ರಸ್ತುತ ಮಹಿಳಾ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಸ್ಮೃತಿ ಮಂಧಾನ, ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇನ್ನು ಇವರು ಆರ್‌ಸಿಬಿ ತಂಡದ ನಾಯಕಿಯಾಗಿ ಇವರು ಮಿಂಚು ಹರಿಸಿದ್ದಾರೆ. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಆರಂಭಿಕರಾಗಿ ಕಾಣಿಸಿಕೊಂಡು ಅಬ್ಬರಿಸಿದ್ದಾರೆ. 29 ವರ್ಷದ ಸ್ಮೃತಿ ಮಂಧಾನ ಭಾರತ ತಂಡದ ಉಪನಾಯಕಿಯಾಗಿದ್ದಾರೆ. ಇವರು ಭಾರತ ತಂಡದ ಪರ ಮೂರು ಫಾರ್ಮ್ಯಾಟ್‌ಗಳಲ್ಲಿ ಕಣಕ್ಕೆ ಇಳಿದಿದ್ದು,ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

