Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Smriti Mandhana: ಐಸಿಸಿ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಪಡೆದ RCB ಪ್ಲೇಯರ್‌

ಇತ್ತೀಚಿಗೆ ಭಾರತ ಹಾಗೂ ಐರ್ಲೆಂಡ್‌ ತಂಡಗಳ ನಡುವೆ ಏಕದಿನ ಪಂದ್ಯಗಳು ನಡೆದವು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಮಹಿಳಾ ತಂಡ ಅಮೋಘ ಪ್ರದರ್ಶನ ನೀಡಿ ಕ್ಲೀನ್ ಸ್ವೀಪ್ ಸಾಧನೆಯನ್ನು ಮಾಡಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಸ್ಟಾರ್ ಪ್ಲೇಯರ್‌ ಸ್ಮೃತಿ ಮಂಧನಾ ಈ ಸರಣಿಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಮೂಲಕ ಸ್ಮೃತಿ ಭಾರತದ ಪರ ಗರಿಷ್ಠ ಶ್ರೇಯಾಂಕ ಪಡೆದ ಬ್ಯಾಟರ್‌ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ಮೃತಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದರು. ಈ ಮೂಲಕ ಭಾರತದ ಪರ ಗರಿಷ್ಠ ಶತಕ ಸಾಧನೆ ಮಾಡಿದ ಆಟಗಾರ್ತಿಯರ ಪಟ್ಟಿಗೆ ಸ್ಥಾನ ಪಡೆದರು. ಸ್ಮೃತಿ ಐರ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ 41, ಎರಡನೇ ಪಂದ್ಯದಲ್ಲಿ 73 ರನ್‌ ಸಿಡಿಸಿದ್ದರು. ಆದರೆ ಮೂರನೇ ಏಕದಿನ ಪಂದ್ಯದಲ್ಲಿ 135 ರನ್‌ ಬಾರಿಸಿದರು. ಈ ಮೂಲಕ ಸಾಧನೆ ಮಾಡಿದರು. ಅಲ್ಲದೆ ಐಸಿಸಿ ರೇಟಿಂಗ್‌ನಲ್ಲೂ 28 ವರ್ಷದ ಸ್ಮೃತಿ 738 ರೇಟಿಂಗ್‌ ಪಾಯಿಂಟ್‌ಗಳನ್ನು ಹೊಂದಿದ್ದು, ಎರಡನೇ ಸ್ಥಾನ ತಲುಪಿದ್ದಾರೆ.

Smriti Mandhana Rises to Second in ICC Women s ODI Batsmen Rankings

ಮಹಿಳೆಯರ ಏಕದಿನ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ 773 ರೇಟಿಂಗ್ ಅಂಕಗಳೊಂದಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. 733 ರೇಟಿಂಗ್ ಪಾಯಿಂಟ್‌ ಹೊಂದಿರುವ ಶ್ರೀಲಂಕಾದ ಚಾಮರಿ ಅಟ್ಟಪಟ್ಟು ಮೂರನೇ ಸ್ಥಾನದಲ್ಲಿದ್ದಾರೆ.

ಹರ್ಮನ್‌ ಶ್ರೇಯಾಂಕದಲ್ಲಿ ಕುಸಿತ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್‌ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಇವರು 604 ರೇಟಿಂಗ್ ಪಾಯಿಂಟ್‌ಗಳೊಂದಿಗೆ 15ನೇ ಸ್ಥಾನದಲ್ಲಿದ್ದಾರೆ. ಇವರು ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಶತಕ ಬಾರಿಸಿರುವ ಜೆಮಿಮಾ ರಾಡ್ರಿಗಸ್ ಎರಡು ಸ್ಥಾನ ಬಡ್ತಿ ಪಡೆದು 17ನೇ ಸ್ಥಾನಕ್ಕೆ ತಲುಪಿದ್ದಾರೆ. ಭಾರತದ ಮಹಿಳಾ ಬ್ಯಾಟ್ಸ್‌ಮನ್‌ಗಳ ಏಕದಿನ ಶ್ರೇಯಾಂಕದಲ್ಲಿ ಅಗ್ರ -20 ರಲ್ಲಿ ಕೇವಲ ಮೂವರು ಆಟಗಾರ್ತಿಯರಿದ್ದಾರೆ.

ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಆಶ್ಲೀ ಗಾರ್ಡ್ನರ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದ್ದಾಎರ. ಇವರು ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ್ತಿ ಮರಿಜಾನ್ನೆ ಕಪ್ ಅವರನ್ನು ಹಿಂದಿಕ್ಕಿದ್ದಾರೆ. ಇತ್ತೀಚಿಗೆ ನಡೆದ ಏಕದಿನ ಸರಣಿಯಲ್ಲಿ ಆಶ್ಲೀ ಗಾರ್ಡ್ನರ್ 4 ವಿಕೆಟ್‌ ಪಡೆದು 146 ರನ್‌ ಸಿಡಿಸಿದ್ದಾರೆ. ಇನ್ನು ದೀಪ್ತಿ ಶರ್ಮಾ 344 ರೇಟಿಂಗ್ ಅಂಕಗಳೊಂದಿಗೆ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.ಪಟ್ಟಿಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದರು.

Smriti Mandhana Rises to Second in ICC Women s ODI Batsmen Rankings

ದೀಪ್ತಿಗೆ ಆರನೇ ಸ್ಥಾನ

ಮಹಿಳೆಯರ ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಅಗ್ರ ಸ್ಥಾನ ಹೊಂದಿದ್ದಾರೆ. ಇನ್ನು ಆಸ್ಟ್ರೇಲಿಯಾ ಆಟಗಾರ್ತಿಯರಾ ಆಶ್ ಗಾರ್ಡ್ನರ್, ಮೇಗನ್ ಶುಟ್ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ದೀಪ್ತಿ ಶರ್ಮಾ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

Story first published: Tuesday, January 21, 2025, 17:56 [IST]
Other articles published on Jan 21, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+