For Quick Alerts
ALLOW NOTIFICATIONS  
For Daily Alerts
 

Tri-Series Final: ಸ್ಮೃತಿ ಶತಕ, ಸ್ನೇಹ ಅಬ್ಬರ: ಲಂಕಾ ಮಣಿಸಿದ ಭಾರತ ಚಾಂಪಿಯನ್

ಭರವಸೆಯ ಆಟಗಾರರ್ತಿಯರಾದ ಸ್ಮೃತಿ ಮಂಧನಾ ಹಾಗೂ ಸ್ನೇಹಾ ರಾಣಾ ಅವರ ಭರ್ಜರಿ ಪ್ರದರ್ಶನದ ಫಲವಾಗಿ ಭಾರತ ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ 97 ರನ್‌ಗಳಿಂದ ಶ್ರೀಲಂಕಾ ಮಹಿಳಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 342 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶ್ರೀಲಂಕಾ 245 ರನ್‌ಗಳಿಗೆ ಆಲೌಟ್ ಆಯಿತು. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಭಾರತ ಪ್ರಶಸ್ತಿಗೆ ಮುತ್ತಿಟ್ಟಿದೆ.

Smriti Mandhana s Century Sneha Ranas 4 Wickets Power India to Tri-Series Title Win over Sri Lanka

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ಭರ್ಜರಿಯಾಗಿತ್ತು. ಪ್ರತಿಕಾ ರಾವಲ್‌ (30) ಹಾಗೂ ಸ್ಮೃತಿ ಮಂಧನಾ ಜೋಡಿ ಮೊದಲ ವಿಕೆಟ್‌ಗೆ 70 ರನ್‌ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು. ಎರಡನೇ ವಿಕೆಟ್‌ಗೆ ಹರ್ಲಿನ್‌ ಡಿಯೋಲ್‌ ಹಾಗೂ ಸ್ಮೃತಿ ಮಂಧನಾ ಜೊತೆಗೂಡಿ ಶತಕದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯ ಉತ್ತಮ ಜೊತೆಯಾಟದ ಕಾರಣದಿಂದಾಗಲ ಭಾರತ ಸವಾಲಿನ ಮೊತ್ತವನ್ನು ಕಲೆ ಹಾಕುವಂತೆ ಮಾಡಿತು.

ಸ್ಮೃತಿ ಶತಕ

ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಮೃತಿ ಮಂಧನಾ 101 ಎಸೆತಗಳಲ್ಲಿ 15 ಬೌಂಡರಿ, 2 ಸಿಕ್ಸರ್ ಸಹಾಯದಿಂದ 116 ರನ್‌ ಸಿಡಿಸಿ ತಂಡಕ್ಕೆ ಆಧಾರವಾದ್ರು. ಇದು ಸ್ಮೃತಿ ಮಂಧನಾ ಅವರ ಏಕದಿನ ಕ್ರಿಕೆಟ್‌ನ 11ನೇ ಶತಕವಾಗಿದೆ. ಸ್ಮೃತಿ ಈ ಪಂದ್ಯದಲ್ಲಿ ಮಂಧನಾ ಮತ್ತೊಂದು ದೊಡ್ಡ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡರು. ಇವರು ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹರ್ಮನ್‌ ಪ್ರೀತ್ ದಾಖಲೆಯನ್ನು ಅಳಿಸಿ ಹಾಕಿದರು.

ಭಾರತದ ಪರ ಅತಿ ಹೆಚ್ಚು ಸಿಕ್ಸರ್

ಸ್ಮೃತಿ ಮಂಧಾನ - 54 ಸಿಕ್ಸರ್‌
ಹರ್ಮನ್‌ಪ್ರೀತ್ ಕೌರ್ - 53 ಸಿಕ್ಸರ್‌
ರಿಚಾ ಘೋಷ್ - 21 ಸಿಕ್ಸರ್‌

ಭಾರತದ ಪರ ಹರ್ಮನ್ ಪ್ರೀತ್ ಕೌರ್‌ (41) ಹಾಗೂ ಜೆಮಿಮಾ ರೋಡ್ರಿಗಸ್‌ (44) ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಶ್ರೀಲಂಕಾದ ಪರ ಮಾಲ್ಕಿ ಮಾದರ, ದೇವ್ಮಿ ವಿಹಂಗಾ, ಸುಗಂದಿಕಾ ಕುಮಾರಿ ತಲಾ ಎರಡು ವಿಕೆಟ್‌ ಕಬಳಿಸಿದರು.

ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡದ ಬ್ಯಾಟರ್‌ಗಳು ಜವಾಬ್ದಾರಿ ಅರಿತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ವಿಶ್ಮಿ ಗುಣರತ್ನೆ (36), ನೀಲಾಕ್ಷಿಕಾ ಸಿಲ್ವ (48), ಹರ್ಷಿತಾ ಸಮರವಿಕ್ರಮ (26), ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ನಾಯಕಿರ ಚಾಮರಿ ಅಟ್ಟುಪಟ್ಟು 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 51 ರನ್‌ ಬಾರಿಸಿ ಔಟ್ ಆದರು. ಭಾರತದ ಪರ ಸ್ನೇಹಾ ರಾಣಾ 4, ಅಮನಜೋತ್ ಕೌರ್‌ 3 ವಿಕೆಟ್‌ ಕಬಳಿಸಿದರು.

Story first published: Sunday, May 11, 2025, 21:09 [IST]
Other articles published on May 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+