Smriti Mandhana: ಲಾರ್ಡ್ಸ್‌ನಲ್ಲಿ ಮೈದಾನಕ್ಕೆ ಇಳಿಯುತ್ತಲೇ ದಾಖಲೆ ಬರೆದ ಸ್ಮೃತಿ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕೈಕ ಟೆಸ್ಟ್ ಪಂದ್ಯ ಐಕಾನಿಕ್ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮೈದಾನಕ್ಕೆ ಇಳಿಯುತ್ತಲೇ ದೊಡ್ಡ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಸ್ಮೃತಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ 300ನೇ ಪಂದ್ಯವಾಗಿದೆ. ಈ ಮೂಲಕ ಸ್ಮೃತಿ ಮತ್ತೊಂದು ದಾಖಲೆ ಬರೆದಿದ್ದಾರೆ. ಕಡಿಮೆ ವಯಸ್ಸಿನಲ್ಲಿ 300 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
29 ವರ್ಷದ ಸ್ಮೃತಿ ಮಂಧಾನ ತಮ್ಮ ಅಮೋಘ ಆಟದಿಂದ ಟೀಮ್ ಇಂಡಿಯಾಕ್ಕೆ ಹಲವು ಪಂದ್ಯಗಳಲ್ಲಿ ಆಧಾರವಾಗಿದ್ದಾರೆ. ಶುಕ್ರವಾರವೂ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಸ್ಮೃತಿ ತಂಡಕ್ಕೆ ನೆರವಾಗಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಕ್ಕೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಆಧಾರವಾದರು. ಇವರು 108 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 83 ರನ್ ಸಿಡಿಸಿ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಶತಕದ ಹತ್ತಿರದಲ್ಲಿ ಸ್ಮೃತಿ ಇಸ್ಸಿ ವಾಂಗ್ ಅವರು ತೋಡಿದ ಖೆಡ್ಡಾಗೆ ಬಲಿಯಾದರು.
300ನೇ ಪಂದ್ಯವಾಡಿದ ಮೂರನೇ ಭಾರತೀಯ ಆಟಗಾರ್ತಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಮೃತಿ ದೊಡ್ಡ ಮೈಲಿಗಲ್ಲು ಮುಟ್ಟಿದರು. ಇವರು 300ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ವಿಶ್ವದ 12ನೇ ಆಟಗಾರ್ತಿ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಸ್ಮೃತಿ ಅವರದ್ದಾಗಿದೆ. ಇವರಿಗಿಂತಲೂ ಮೊದಲು 300 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಸಾಧನೆಯನ್ನು ಭಾರತದ ಪರ ಹರ್ಮನ್‌ಪ್ರೀತ್ ಕೌರ್, ದಿಗ್ಗಜ ಬ್ಯಾಟರ್ ಮಿಥಾಲಿ ರಾಜ್ ಮಾಡಿದದರು.
ಲಾರ್ಡ್ಸ್‌ನಲ್ಲಿ ಮೊದಲ ಟೆಸ್ಟ್
ಇಂಗ್ಲೆಂಡ್ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ವರೆಗೆ ಇಂಗ್ಲೆಂಡ್‌ನಲ್ಲಿ ಒಟ್ಟು 19 ಬೇರೆ ಬೇರೆ ಮೈದಾನದಲ್ಲಿ 55 ಟೆಸ್ಟ್ ಪಂದ್ಯಗಳನ್ನು ಈಗಾಗಲೇ ಆಡಲಾಗಿದೆ. ಇದೇ ಮೊದಲ ಬಾರಿಗೆ ಲಾರ್ಡ್ಸ್ ಮೈದಾನದಲ್ಲಿ ಮಹಿಳಾ ಟೆಸ್ಟ್ ನಡೆಯುತ್ತಿದ್ದು, ಇತಿಹಾಸದ ಪುಟ ಸೇರಿದೆ.
ಸ್ಮೃತಿ ಸಾಧನೆ
ಟೀಮ್ ಇಂಡಿಯಾದ ಭರವಸೆಯ ಆಟಗಾರ್ತಿ ಸ್ಮೃತಿ ಮಂಧಾನ ಮೂರು ಮಾದರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಹಿರಿಮೆ ಹೊಂದಿದ್ದಾರೆ. ಇವರು ಆಡಿದ 8 ಟೆಸ್ಟ್ ಪಂದ್ಯಗಳಲ್ಲಿ 635 ರನ್ ಕಲೆ ಹಾಕಿದ್ದು, ಇದರಲ್ಲಿ 2 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ. ಇನ್ನು ಇವರು 120 ಏಕದಿನ ಪಂದ್ಯ ಆಡಿದ್ದು, 47ರ ಸರಾಸರಿಯಲ್ಲಿ 5411 ರನ್ ಸಿಡಿಸಿದ್ದಾರೆ. 171 ಟಿ20 ಪಂದ್ಯಗಳನ್ನು ಆಡಿರುವ ಸ್ಮೃತಿ 4538 ರನ್ ಕಲೆ ಹಾಕಿದ್ದಾರೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಹೆಗ್ಗಳಿಕೆ ಇವರದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications