ಕಿಯಾ ಸೂಪರ್ ಲೀಗ್ ಗೆ ಆಯ್ಕೆಯಾದ ಕ್ರಿಕೆಟರ್ ಸ್ಮೃತಿ

ಲಂಡನ್, ಜೂನ್ 15: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ಟ್ರಾಲ್ ಬ್ಲಾಜರ್ಸ್ ತಂಡದ ನಾಯಕಿ, ಟೀಂ ಇಂಡಿಯಾದ ಪ್ರಮುಖ ಆಟಗಾರ್ತಿ ಸ್ಮೃತಿ ಮಂದಾನ ಅವರು ಇಂಗ್ಲೆಂಡಿನ ಕಿಯಾ ಸೂಪರ್ ಲೀಗ್ ನಲ್ಲಿ ಆಡಲು ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಲೀಗ್ ನಲ್ಲಿ ಆಡುವ ಮೊದಲ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
ಜುಲೈ 22ರಿಂದ ಕಿಯಾ ಸೂಪರ್ ಲೀಗ್ ಟಿ20 ಪಂದ್ಯಗಳು ನಡೆಯಲಿವೆ. ಈ ಟಿ 20 ಲೀಗ್ ನಲ್ಲಿ ಆಡಲಿರುವ 6 ತಂಡಗಳ ಪೈಕಿ ವೆಸ್ಟರ್ನ್ ಸ್ಟ್ರೋಮ್ ತಂಡದ ಪರ ಸ್ಮೃತಿ ಆಡಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ 21 ವರ್ಷ ವಯಸ್ಸಿನ ಮಂದಾನ, 40 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 826ರನ್ ಗಳಿಸಿದ್ದು, 76ರನ್ ಗರಿಷ್ಠ ಮೊತ್ತವಾಗಿದೆ.
ಕಳೆದ ವರ್ಷ ನಡೆದ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಯುವ ಪ್ರತಿಭೆ ಸ್ಮೃತಿ ಅವರು ತಮ್ಮ ತಂಡ ಸೇರುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ವೆಸ್ಟರ್ನ್ಸ್ ಸ್ಟ್ರೋಮ್ ಕೋಚ್ ಟ್ರೆವರ್ ಗ್ರಿಫಿನ್ ಹೇಳಿದ್ದಾರೆ.
ಇಂಗ್ಲೆಂಡಿನಲ್ಲಿ ಟಿ20 ಲೀಗ್ ಆಡುತ್ತಿರುವ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂನ ಹೆಗ್ಗಳಿಕೆ ನನಗೆ ಖುಷಿ ಕೊಟ್ಟಿದೆ. ನನ್ನ ಆಟದಿಂದ ತಂಡಕ್ಕೆ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ ಎಂದು ಸ್ಮೃತಿ ಪ್ರತಿಕ್ರಿಯಿಸಿದ್ದಾರೆ.--
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications