Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

58 ರನ್‌ ಬಾರಿಸುತ್ತಲೇ ದಾಖಲೆ ಬರೆದ ಸ್ಮೃತಿ ಮಂಧಾನ

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ತಂಡ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಅಮೋಘ ಬ್ಯಾಟಿಂಗ್ ನಡೆಸಿದರು. ಅಲ್ಲದೆ ಪ್ರತಿಕಾ ರಾವಲ್ ಹಾಗೂ ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ವೇಳೆ ಟೂರ್ನಿಯಲ್ಲಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಸ್ಮೃತಿ ಮಂಧಾನಾ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿದರು.

ವಿಶಾಖಾಪಟ್ಟಣಂನಲ್ಲಿ ಲೀಗ್‌ ಹಂತದ ನಾಲ್ಕನೇ ಪಂದ್ಯವನ್ನು ಆಡುತ್ತಿರುವ ಭಾರತ ತಂಡಕ್ಕೆ ಆರಂಭಿಕ ಆಟಗಾರ್ತಿಯರು ಆಧಾರವಾದರು. ಭಾನುವಾರ ನಡೆದ ಪಂದ್ಯದಲ್ಲಿ ಸ್ಮೃತಿ ಮಂಧಾನಾ, ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದರು. ಇದು ಆಸ್ಟ್ರೇಲಿಯಾ ವಿರುದ್ಧ ಸ್ಮೃತಿ ಬಾರಿಸಿದ ಸತತ 5ನೇ ಅರ್ಧಶತಕವಾಗಿದೆ. ಈ ಮೂಲಕ ಸ್ಮೃತಿ ಮಂಧಾನ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದರು.

Smriti Mandhana Sets Record with 5000 ODI Runs Against Australia

ಈ ಪಂದ್ಯದಲ್ಲಿ ಸ್ಮೃತಿ ಮಂಧಾನ 58 ರನ್‌ ಬಾರಿಸಿದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ ಕಲೆ ಹಾಕಿದ ಹಿರಿಮೆಗೆ ಪಾತ್ರರಾಗಲಿದ್ದರು. ಈ ಸಾಧನೆಯನ್ನು ಸ್ಮೃತಿ ಮಂಧನಾ ಮಾಡಿ ಬೀಗಿದರು. ಸ್ಮೃತಿ ಕಿಮ್ ಗಾರ್ತ್‌ ಎಸೆದ 21ನೇ ಓವರ್‌ನ ಕೊನೆಯ ಎಸೆತದಲ್ಲಿ ಓವರ್‌ ಎಕ್ಸ್‌ಟ್ರಾ ಕವರ್‌ ಮೇಲಿನಿಂದ ಸಿಕ್ಸರ್ ಬಾರಿಸುವ ಮೂಲಕ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು. ಸ್ಮೃತಿ ಮಂಧಾನಾ ಈ ಸಿಕ್ಸರ್‌ ಮೂಲಕ 5 ಸಾವಿರ ರನ್ ಮಾಡಿದ ದಾಖಲೆ ನಿರ್ಮಿಸಿದರು. ಈ ಮೂಲಕ ಭಾರತದ ಪರ ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮೊದಲು ಮಿಥಾಲಿ ರಾಜ್‌ ಭಾರತದ ಪರ 5 ಸಾವಿರ ರನ್‌ ಗಳ ಗಡಿ ದಾಟಿದ್ದರು.

ವಿಶ್ವ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಮೈಲಿಗಲ್ಲು ತಲುಪಿದ ಐದನೇ ಆಟಗಾರ್ತಿ ಎಂಬ ಹಿರಿಮೆ ಸ್ಮೃತಿ ಅವರ ಪಾಲಾಯಿತು. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮಿಥಾಲಿ ರಾಜ್‌ ಇದ್ದು ಇವರು 7805 ರನ್‌ ಕಲೆ ಹಾಕಿದ್ದಾರೆ.

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌

ಮಿಥಾಲಿ ರಾಜ್‌, ಭಾರತ, 7805 ರನ್‌
ಚಾರ್ಲೆಟ್ ಎಡ್ವರ್ಡ್ಸ್, ಇಂಗ್ಲೆಂಡ್‌, 5992 ರನ್‌
ಸೂಜಿ ಬೇಟ್ಸ್‌, ನ್ಯೂಜಿಲೆಂಡ್‌, 5925 ರನ್‌
ಸ್ಟೆಫನಿ ಟೇಲರ್, ವೆಸ್ಟ್‌ ಇಂಡೀಸ್‌, 5873 ರನ್‌
ಸ್ಮೃತಿ ಮಂಧಾನ, ಭಾರತ, 5022 ರನ್

ಒಂದು ವರ್ಷದಲ್ಲಿ ಒಂದು ಸಾವಿರ ರನ್

ಈ ಕ್ಯಾಲೆಂಡರ್‌ ವರ್ಷದಲ್ಲಿ ರಲ್ಲಿ ಸ್ಮೃತಿ ಮಂಧಾನಾ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧನಾ 12 ರನ್‌ ಬಾರಿಸುತ್ತಲೇ ಈ ವರ್ಷ ಏಕದಿನ ಕ್ರಿಕಟ್‌ನಲ್ಲಿ 1 ಸಾವಿರ ರನ್‌ ಪೂರ್ಣಗೊಳಿಸಿದರು. ಈ ಮೂಲಕ ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ 1 ಸಾವಿರ ರನ್‌ ತಲುಪಿದ ಮೊದಲ ಆಟಗಾರ್ತಿ ಎಂಬ ದಾಖಲೆ ಸ್ಮೃತಿ ಅವರ ಪಾಲಾಯಿತು.

Story first published: Sunday, October 12, 2025, 16:30 [IST]
Other articles published on Oct 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+