Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Smriti Mandhana: ಸ್ಮೃತಿ ಮಂಧನಾ ಶ್ರೇಯಾಂಕದಲ್ಲಿ ಬಡ್ತಿ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಮೈದಾನಕ್ಕೆ ಇಳಿದರೆ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿದ್ದಾರೆ. ಇತ್ತೀಚಿಗೆ ಭಾರತದಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧ ಟಿ20 ಪಂದ್ಯದಲ್ಲಿ ಅಬ್ಬರಿಸಿದರು. ಇದರ ಪರಿಣಾಮ ಇವರಿಗೆ ಐಸಿಸಿ ಶ್ರೇಯಾಂಕದಲ್ಲಿ ಲಾಭವಾಗಿದೆ. ವಿಂಡೀಸ್‌ ವಿರುದ್ಧ ನೀಡಿದ ಭರ್ಜರಿ ಪ್ರದರ್ಶನದ ಫಲವಾಗಿ ಸ್ಮೃತಿ ಐಸಿಸಿಯ ಅತ್ಯಧಿಕ ರೇಟಿಂಗ್ ಪಾಯಿಂಟ್ಸ್‌ ಗಳಿಸಿದ್ದಾರೆ. ಇವರು ಸದ್ಯ 753 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಸ್ಮೃತಿ ಮಂಧಾನ ಟಿ20 ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮುನ್ನ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಟಿ20 ಸರಣಿಯ ಮೂರು ಪಂದ್ಯಗಳಲ್ಲಿ ಅರ್ಧ ಶತಕಗಳನ್ನು ಗಳಿಸಿದರು. ಸ್ಮೃತಿ ಆಡಿದ ಮೂರು ಪಂದ್ಯಗಳಲ್ಲಿ 193 ರನ್‌ ಸಿಡಿಸಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ರನ್‌ ಸಾಧಕರ ಪಟ್ಟಿಯಲ್ಲಿ ಇವರು ಮೊದಲ ಸ್ಥಾನದಲ್ಲಿದ್ದಾರೆ. ಜೆಮಿಮಾ ರೋಡ್ರಿಗಾಸ್‌ ಎರಡನೇ ಸ್ಥಾನದಲಿದ್ದಾರೆ.

ಭಾರತದಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಅಮೋಘ ಪ್ರದರ್ಶನ ನೀಡಿ ಮೂರು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇದರ ಪರಿಣಾಮ ಶ್ರೇಯಾಂಕದಲ್ಲಿ ಬಡ್ತಿ ಕಂಡಿದ್ದಾರೆ. ಇವರು ಆಸ್ಟ್ರೇಲಿಯಾದ ತಾಲಿಯಾ ಮೆಕ್‌ಗ್ರಾತ್ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ದೂಡಿದ್ದಾರೆ. ವೆಸ್ಟ್‌ ಇಂಡೀಸ್ ತಂಡದ ಸ್ಟಾರ್ ಆಟಗಾರ್ತಿ ಹೇಲಿ ಮ್ಯಾಥ್ಯೂಸ್‌ 748 ಅಂಕ ಕಲೆ ಹಾಕಿದ್ದು, ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಭರವಸೆಯ ಆಟಗಾರ್ತಿ ಬೆತ್ ಮೂನಿ 757 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

Smriti Mandhana Shines Against West Indies Achieves Career-High ICC Rankings in T20 and ODI

ಏಕದಿನ ಶ್ರೇಯಾಂಕದಲ್ಲೂ ಅಬ್ಬರ

ಸ್ಮೃತಿ ಮಂಧನಾ ಟಿ20 ಶ್ರೇಯಾಂಕದಲ್ಲಿ ಅಷ್ಟೇ ಅಲ್ಲ ಏಕದಿನ ಶ್ರೇಯಾಂಕದಲ್ಲೂ ಸ್ಥಿರತೆ ತೋರಿಸಿದ್ದಾರೆ. ಇವರು ಸದ್ಯ 739 ಅಂಕಗಳನ್ನು ಕಲೆ ಹಾಕಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ದಕ್ಷಿನ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ 773 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ತಂಡದ ಸ್ಟಾರ್ ಆಟಗಾರ್ತಿ ಚಾಮರಿ ಅಟ್ಟಪಟ್ಟು 733 ಅಂಕಗಳನ್ನು ಕಲೆ ಹಾಕಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಹರ್ಮನ್‌ ಪ್ರೀತ್‌ ಕೌರ್‌ 10ನೇ ಸ್ಥಾನ ಪಡೆದಿದ್ದಾರೆ. ದೀಪ್ತಿ ಶರ್ಮಾ ಶ್ರೇಯಾಂಕದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. 33ನೇ ಸ್ಥಾನಕ್ಕೆ ತಲುಪಿದ್ದಾರೆ.

Smriti Mandhana Shines Against West Indies Achieves Career-High ICC Rankings in T20 and ODI

ಸ್ಮೃತಿ ಭಾರತದಲ್ಲಿ ನಡೆಯುತ್ತಿರುವ ವಿಂಡೀಸ್‌ ವಿರುದ್ಧ ಏಕದಿನ ಪಂದ್ಯದಲ್ಲೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ವಡೋಧರಾದಲ್ಲಿ ನಡೆದ ಪಂದ್ಯದಲ್ಲಿ ಸ್ಮೃತಿ 13 ಬೌಂಡರಿ ನೆರವಿನಿಂದ 91 ರನ್‌ ಸಿಡಿಸಿ ಅಬ್ಬರಿಸಿದರು. ಇನ್ನು ಮಂಗಳವಾರ ನಡೆದ ಎರಡನೇ ಪಂದ್ಯದಲ್ಲೂ ಸ್ಥಿರ ಪ್ರದರ್ಶನ ನೀಡಿ ರನ್‌ ಕಲೆ ಹಾಕಿದ್ದಾರೆ. ಇವರು 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 53 ರನ್‌ ಸಿಡಿಸಿದರು. ಇವರ ಫಾರ್ಮ್ ಹೀಗೆ ಮುಂದುವರೆದಲ್ಲಿ ನಂಬರ್ 1 ಸ್ಥಾನ ಹತ್ತಿರವಾಗುತ್ತರೆ.

Story first published: Tuesday, December 24, 2024, 21:30 [IST]
Other articles published on Dec 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+