For Quick Alerts
ALLOW NOTIFICATIONS  
For Daily Alerts
 

ಸ್ಮೃತಿ ಮಂಧಾನ ಮದುವೆ ಯಾವಾಗ? ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದೇನು?

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಬಳಿಕ ಹರ್ಮನ್ ಪ್ರೀತ್‌ ಪಡೆ ಸದ್ಯ ವಿಶ್ರಾಂತಿಯಲ್ಲಿದೆ. ಇದೇ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ಮದುವೆಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಂದಿದೆ. ಇವರು ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ಇದೇ 23 ರಂದು ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅಲ್ಲದೆ ಸಾಮಾಜಿಕ ತಾಣದಲ್ಲಿ ಇವರ ಮದುವೆಯ ಆಮಂತ್ರಣ ಸಹ ಸಖತ್ ವೈರಲ್ ಆಗುತ್ತಿದೆ.

ಸ್ಮೃತಿ ಮಂಧಾನ ಅವರು ಕಳೆದ ಕೆಲವು ವರ್ಷಗಳಿಂದ ಪಲಾಶ್ ಮುಚ್ಚಲ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಇದಕ್ಕೆ ಪುಷ್ಠಿ ಪಲಾಶ್ ಮುಚ್ಚಲ್ ಮಹಿಳಾ ಪ್ರೀಮಿಯರ್‌ ಲೀಗ್‌ ಹಾಗೂ ಟೀಮ್ ಇಂಡಿಯಾದ ಮಹಿಳಾ ಆಟಗಾರ್ತಿಯರು ಮೈದಾನಕ್ಕೆ ಇಳಿದಾಗಲೆಲ್ಲಾ ಪಲಾಶ್ ಮುಚ್ಚಲ್ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೆ ನವಿ ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಬಳಿಕ ಇವರಿಬ್ಬರ ಆ ಒಂದು ವಿಡಿಯೋ ಸಹ ಸಖತ್ ಸದ್ದು ಮಾಡಿತ್ತು.

Smriti Mandhana Wedding Date CONFIRMED Star Batter to Marry Palash Muchhal on November 23

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಆಟಗಾರರಲ್ಲಿ ಯಾರೊಬ್ಬರು ಮದುವೆ ಆಗಿಲ್ಲ. ಈ ಪರಿಸ್ಥಿತಿಯಲ್ಲಿ ಸ್ಮೃತಿ ವಿವಾಹವನ್ನು ಆಗಲಿರುವ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ವಿಶ್ವ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಬಳಿಕ ಸ್ಮೃತಿ ಮದುವೆ ಆಗುತ್ತಿರುವುದು ವಿಶೇಷವಾಗಿದೆ. ಈ ಬಗ್ಗೆ ಹರ್ಮನ್ ಪ್ರೀತ್‌ ಕೌರ್ ಬಿಗ್ ಅಪ್‌ಡೇಟ್ ನೀಡಿದ್ದಾರೆ.

ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದೇನು?

ಕ್ರಿಕೆಟ್‌ ನೆಕ್ಸಟ್‌ ಜೊತೆ ಮಾತನಾಡಿರುವ ಹರ್ಮನ್ ಪ್ರೀತ್‌ ಕೌರ, ನಮ್ಮ ತಂಡ ಒಬ್ಬರಿಗೊಬ್ಬರು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಒಂದು ಟೂರ್ನಿ ಮುಗಿದ ತಕ್ಷಣ, ಮುಂದಿನ ಸರಣಿಯವರೆಗೂ ನಾವೆಲ್ಲಾ ಕಾಯುತ್ತೇವೆ. ಮತ್ತೆ ಆಗ ಭೇಟಿಯಾಗುವ ಅವಕಾಶ ಸಿಗುತ್ತದೆ. ಈಗ ನಮ್ಮ ತಂಡ ಮತ್ತೊಮ್ಮೆ ಸ್ಮೃತಿ ವಿವಾಹದಲ್ಲಿ ಒಟ್ಟಿಗೆ ನೋಡುವ ಸಂದರ್ಭವಾಗಿದೆ ಎಂದು ತಿಳಿಸಿದ್ದಾರೆ.

ಸ್ಮೃತಿ ಮಂಧಾನ ಅವರ ಮದುವೆ ಸಮಾರಂಭದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಭಾಗವಹಿಸುವ ಸಾಧ್ಯತೆ ಇದೆ.

ಸ್ಮೃತಿ ಮಂಧಾನ ಅವರು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡದ ಜಯದಲ್ಲಿ ಮಿಂಚಿದ್ದರು. ಇವರು ಆಡಿದ 9 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 434 ರನ್‌ ಸಿಡಿಸಿದ್ದರು.

Story first published: Monday, November 17, 2025, 15:18 [IST]
Other articles published on Nov 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+