ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಏಕದಿನ ಫಾರ್ಮೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಆಡಿರುವ ಸ್ಮೃತಿ ಮಂಧಾನ ಹಲವು ದಾಖಲೆಗಳನ್ನು ಬರೆದಿದ್ದಾರೆ. ಸೆಪ್ಟಂಬರ್ ತಿಂಗಳಲ್ಲಿ ಇವರ ಆಟದ ಧಾಟಿಗೆ ಇವರನ್ನು ಐಸಿಸಿ ತಿಂಗಳು ಆಟಗಾರ್ತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿತ್ತು. ಈಗ ಐಸಿಸಿ ಮಹತ್ವದ ಪ್ರಶಸ್ತಿ ಸ್ಮೃತಿ ಪಾಲಾಗಿದೆ. ಈ ಬಗ್ಗೆ ಐಸಿಸಿ ಸ್ವತಃ ಘೋಷಣೆ ಮಾಡಿದೆ.
ಸ್ಮೃತಿ ಮಂಧನಾ ಸೆಪ್ಟಂಬರ್ ತಿಂಗಳಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಮಹಿಳಾ ವಿಶ್ವಕಪ್‌ಗೂ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸ್ಮೃತಿ ಆರ್ಭಟಿಸಿದ್ದರು. ಇವರ ಸ್ಥಿರ ಪ್ರದರ್ಶನಕ್ಕೆ ಈ ಪ್ರತಿಫಲ ಸಿಕ್ಕಿದೆ. ಸ್ಮೃತಿ ಆಸೀಸ್ ವಿರುದ್ಧದ ಪಂದ್ಯದಲ್ಲಿ 2 ಶತಕ ಹಾಗೂ 1 ಅರ್ಧಶತಕ ಬಾರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಈ ತಿಂಗಳಲ್ಲಿ ಸ್ಮೃತಿ ಆಡಿದ 4 ಏಕದಿನ ಪಂದ್ಯಗಳಲ್ಲಿ 77ರ ಸರಾಸರಿಯಲ್ಲಿ 308 ರನ್ ಕಲೆ ಹಾಕಿದ್ದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 135.68 ಆಗಿತ್ತು. ಇವರ ಈ ಸ್ಥಿರ ಪ್ರದರ್ಶನಕ್ಕೆ ಐಸಿಸಿ ಗೌರವ ಸಂದಿದೆ. ಭಾರತದ ಸ್ಟಾರ್ ಆಟಗಾರ್ತಿ ಈ ಪ್ರಶಸ್ತಿಯನ್ನು ಎರಡನೇ ಬಾರಿಗೆ ಗೆದ್ದು ಬೀಗಿದ್ದಾರೆ. ಇದಕ್ಕೂ ಮೊದಲು ಇವರು 2024ರಲ್ಲಿ ಐಸಿಸಿ ತಿಂಗಳು ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದರು.

ಸೆಪ್ಟಂಬರ್ ಆಟಗಾರ್ತಿ ಪ್ರಸ್ತಿಗೆ ಸ್ಮೃತಿ ಸೇರಿದಂತೆ ಮೂರು ಆಟಗಾರ್ತಿಯರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಸಿದ್ರಾ ಅಮೀನ್ ಮತ್ತು ದಕ್ಷಿಣ ಆಫ್ರಿಕಾದ ತಜ್ಮಿನ್ ಬ್ರಿಟ್ಸ್ ಸಹ ಈ ರೇಸ್‌ನಲ್ಲಿ ಇದ್ದರು. ಈ ಪ್ರಶಸ್ತಿ ಲಭಿಸಿದ ಬಳಿಕ ಮಾತನಾಡಿರುವ ಸ್ಮೃತಿ "ಈ ಪ್ರಶಸ್ತಿ ನನಗೆ ತುಂಬ ಖುಷಿ ನೀಡಿದೆ. ಒಬ್ಬ ಆಟಗಾರ್ತಿಯನ್ನು ಈ ರೀತಿ ಪ್ರೋತ್ಸಾಹಿಸಿದಾಗ, ಅವರಿಗೆ ಇನ್ನು ಉತ್ತಮ ಪ್ರದರ್ಶನ ನೀಡಲು ಪ್ರೇರಣೆ ಆಗುತ್ತದೆ ಎಂದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಬಳಿಕ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮೃತಿಗೆ ಎರಡನೇ ಸ್ಥಾನ.
ಮಹಿಳಾ ಏಕದಿನ ವಿಶ್ವಕಪ್‌ನಲ್ಲ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಸ್ಮೃತಿ ಅಬ್ಬರಿಸಿದ್ದರು. ಇವರು ಈ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದ್ದರು. 29 ವರ್ಷದ ಸ್ಮೃತಿ ಮಂಧಾನ ಭಾರತದ ಪರ 112 ಏಕದಿನ ಪಂದ್ಯಗಳನ್ನು ಆಡಿದ್ದು, 47ರ ಸರಾಸರಿಯಲ್ಲಿ 5022 ರನ್ ಕಲೆ ಹಾಕಿದ್ದಾರೆ. ಈ ವೇಳೆ 13 ಶತಕ ಹಾಗೂ 33 ಅರ್ಧಶತಕಗಳು ಸಹ ಸೇರಿವೆ. ಇವರ ಭರ್ಜರಿ ಪ್ರದರ್ಶನದ ಫಲವಾಗಿ ಇವರನ್ನು ತಂಡದ ಉಪನಾಯಕಿ ಎನ್ನಾಗಿ ಘೋಷಣೆ ಮಾಡಲಾಗಿದೆ.