ಸ್ಮೃತಿ ಮಂಧಾನಗೆ ಐಸಿಸಿ 2018 ವರ್ಷದ ಕ್ರಿಕೆಟ್ ಆಟಗಾರ್ತಿ ಗೌರವ

ನವದೆಹಲಿ, ಡಿಸೆಂಬರ್ 31: ಭಾರತದ ಸ್ಟೈಲಿಶ್ ಎಡಗೈ ಆಟಗಾರ್ತಿ, ಸ್ಮೃತಿ ಮಂಧಾನಗೆ ಐಸಿಸಿ 2018ರ ಆಟಗಾರ್ತಿ ಪುರಸ್ಕಾರ ಲಭಿಸಿದೆ. ಐಸಿಸಿ ಮಂಧಾನಗೆ ಪ್ರತಿಷ್ಠಿತ 'ರಾಚೆಲ್ ಹೆಯ್ಹೋ ಫ್ಲಿಂಟ್' ಪ್ರಶಸ್ತಿ ನೀಡಿ ಗೌರವಿಸಿದೆ. ಇದರ ಜೊತೆಗೆ ಸ್ಮೃತಿ, ಐಸಿಸಿ ವರ್ಷದ ಏಕದಿನ ಆಟಗಾರ್ತಿ ಗೌರವಕ್ಕೂ ಪಾತ್ರರಾಗಿದ್ದಾರೆ.
ಐಸಿಸಿ ಮಹಿಳಾ ಏಕದಿನ ಮತ್ತು ಐಸಿಸಿ ಮಹಿಳಾ ಟಿ20 ವರ್ಷದ ತಂಡದಲ್ಲಿ ಹೆಸರಿಸಲ್ಪಟ್ಟಿರುವ ಮಂಧಾನ 12 ಏಕದಿನ ಪಂದ್ಯಗಳಲ್ಲಿ 66.90 ಸರಾಸರಿಯಲ್ಲಿ 669 ರನ್ ಗಳಿಸಿದ್ದಾರೆ. 25 ಟಿ20 ಪಂದ್ಯಗಳಲ್ಲಿ 130.67 ಸ್ಟ್ರೈಕ್ ರೇಟ್‌ನೊಂದಿಗೆ 622 ರನ್ ಸಾಧನೆ ಹೊಂದಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಐಸಿಸಿ ಸ್ಮೃತಿ ಅವರನ್ನು ಗೌರವಿಸಿದೆ.
ಐಸಿಸಿ ಮಹಿಳಾ ವಿಶ್ವ ಟಿ20 ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಂಡದ ಪರ ಮಂಧಾನ ಗಣನೀಯ ಹೋರಾಟ ನಡೆಸಿದ್ದರು. ಸ್ಮೃತಿ ಅಂದು 55 ಎಸೆತಗಳಿಗೆ 83 ರನ್ ಚಚ್ಚಿದ್ದರು. ಇದರಲ್ಲಿ ಭಾರತ 48 ರನ್ ಜಯ ಗಳಿಸಿತ್ತು. ಟೂರ್ನಿಯಲ್ಲಿ ಮಂಧಾನ ಐದು ಪಂದ್ಯಗಳಲ್ಲಿ 125.35 ಸ್ಟ್ರೈಕ್ ರೇಟ್‌ನಂತೆ 178 ರನ್ ಗಳಿಸಿದ್ದರು. ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಸ್ಮೃತಿ ಸದ್ಯ 4ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications