For Quick Alerts
ALLOW NOTIFICATIONS  
For Daily Alerts
 

IND-W vs WI-W: ಸ್ಮೃತಿ, ರೇಣುಕಾ ಅಬ್ಬರ: ಟೀಮ್ ಇಂಡಿಯಾಕ್ಕೆ 211 ರನ್‌ಗಳ ಭರ್ಜರಿ ಜಯ

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ (91 ರನ್) ಅವರು ಬಾರಿಸಿದ ಅರ್ಧಶತಕ ಹಾಗೂ ರೇಣುಕಾ ಸಿಂಗ್‌ ( 29 ಕ್ಕೆ 5) ಇವರುಗಳ ಭರ್ಜರಿ ಪ್ರದರ್ಶನ ಫಲವಾಗಿ ಟೀಮ್ ಇಂಡಿಯಾ ವನಿತೆಯರ ತಂಡ 211 ರನ್‌ಗಳಿಂದ ಪ್ರವಾಸಿ ವೆಸ್ಟ್‌ ಇಂಡೀಸ್ ತಂಡವನ್ನು ಮಣಿಸಿ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ತಂಡ 1-0 ಮುನ್ನಡೆ ಸಾಧಿಸಿದೆ.

ವಡೋಧರಾದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 314 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವೆಸ್ಟ್‌ ಇಂಡೀಸ್ 103 ರನ್‌ಗಳಿಗೆ ಆಲೌಟ್ ಆಯಿತು. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಎರಡನೇ ಅತಿ ದೊಡ್ಡ ಗೆಲುವಾಗಿದೆ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ದೊಡ್ಡ ಗೆಲುವು. ಆ ಪಂದ್ಯವನ್ನು ಭಾರತ ಮಹಿಳಾ ತಂಡ 249 ರನ್‌ಗಳಿಂದ ಗೆದ್ದಿತ್ತು. ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 207 ರನ್‌ಗಳ ಜಯ ಸಾಧಿಸಿತ್ತು.

Smriti Mandhana s 91 and Renuka s 5 Wickets Secure India s 211-Run Win Over West Indies

ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟ

ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಹಾಗೂ ಪ್ರತೀಕಾ ರಾವಲ್ ಅವರ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಟೀಮ್ ಇಂಡಿಯಾ ಮೊದಲ ವಿಕೆಟ್‌ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದ ಜೋಡಿ ಅಬ್ಬರಿಸಿತು. ಈ ಜೋಡಿ 23.2 ಓವರ್‌ಗಳಲ್ಲಿ 110 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ 69 ಎಸೆತಗಳಲ್ಲಿ 40 ರನ್‌ ಸಿಡಿಸಿದರು.

ಇನ್ನು ಎರಡನೇ ವಿಕೆಟ್‌ಗೆ ಸ್ಮೃತಿ ಹಾಗೂ ಹರ್ಲೀನ್ ಡಿಯೋಲ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಸಹ ತಂಡಕ್ಕೆ ಅರ್ಧಶತಕದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ವೇಳೆ ಸ್ಮೃತಿ 102 ಎಸೆತಗಳಲ್ಲಿ 13 ಬೌಂಡರಿ ಸಹಾಯದಿಂದ 91 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಇವರು 9 ರನ್‌ಗಳಿಂದ ಶತಕ ವಂಚಿತರಾದರು.

ಟೀಮ್ ಇಂಡಿಯಾದ ನಾಯಕಿ ಹರ್ಮನ್‌ ಪ್ರೀತ್ ಕೌರ್ 34, ರಿಚಾ ಘೋಷ್ 26, ಜೆಮಿಮಾ ರೊಡಿಗ್ರಸ್ 31, ದೀಪ್ತಿ ಶರ್ಮಾ ಅಜೇಯ 14 ರನ್‌ ಗಳ ಕಾಣಿಕೆ ನೀಡಿದರು. ಪರಿಣಾಮ ಟೀಮ್ ಇಂಡಿಯಾ ಸವಾಲಿನ ಮೊತ್ತವನ್ನು ಕಲೆ ಹಾಕಿತು. ವಿಂಡೀಸ್‌ ಪರ ಜೈದಾ ಜೇಮ್ಸ್ 45 ರನ್‌ಗಳಿಗೆ 5 ವಿಕೆಟ್‌ ಪಡೆದರು.

ರೇಣುಕಾ ಪಂಚ್

ವೆಸ್ಟ್‌ ಇಂಡೀಸ್ ತಂಡದ ಪರ ಶೆಮೈನ್ ಕ್ಯಾಂಪ್ಬೆಲ್ಲೆ (21), ಆಲಿಯಾ ಅಲೀನ್ (13), ಅಫಿ ಫ್ಲೆಚರ್ (24), ಕರಿಷ್ಮಾ ರಾಮ್ಹರಾಕ್ (11) ಸ್ಥಿರ ಬ್ಯಾಟಿಂಗ್‌ ನಡೆಸಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಉಳಿದ ಬ್ಯಾಟರ್‌ಗಳು ಟೀಮ್ ಇಂಡಿಯಾದ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಭಾರತದ ಪರ ರೇಣುಕಾ ಸಿಂಗ್ 29 ರನ್‌ಗಳಿಗೆ 5 ವಿಕೆಟ್‌ ಪಡೆದರು. ಪ್ರಿಯಾ ಮಿಶ್ರಾ 2 ವಿಕೆಟ್‌ ಕಬಳಿಸಿದರು.

Story first published: Sunday, December 22, 2024, 22:15 [IST]
Other articles published on Dec 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+