Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿ.7ಕ್ಕೆ ಸ್ಮೃತಿ ಮಂಧಾನ ಮದುವೆ? ಸಹೋದರ ಹೇಳಿದ್ದೇನು?

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ಸ್ಮೃತಿ ಮಂಧಾನ ಅವರು ನವಂಬರ್‌ 23 ರಂದು ಹಸೆಮಣೆ ಏರಬೇಕಿತ್ತು. ಆದರೆ ಅದೇ ದಿನ ಬೆಳಗ್ಗೆ ಸ್ಮೃತಿ ತಂದೆ ಶ್ರೀನಿವಾಸ್ ಅನಾರೋಗ್ಯಕ್ಕೆ ಈಡಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಾಗಿದ್ದರಿಂದ ಸ್ಮೃತಿ ಅವರ ಮದುವೆಯನ್ನು ಮುಂದೂಡಲಾಗಿತ್ತು. ಈಗ ಅವರ ಮದುವೆ ಯಾವಾಗ ಎಂಬ ಪ್ರಶ್ನೆಗಳು ಎದ್ದಿವೆ. ಈಗ ಸ್ಮೃತಿ ಸಹೋದರ ಶ್ರವಣ್‌ ಈ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

ಸ್ಮೃತಿ ಮಂಧಾನ ಅವರು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್‌ ಅವರೊಂದಿಗೆ ಸಪ್ತಪದಿ ತುಳಿಯಲಿದ್ದರು. ಆದರೆ ತಂದೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ಮದುವೆಯ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇನ್ನು ಪಲಾಶ್‌ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಇವರು ಮುಂಬೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Smriti Mandhana s Brother Dismisses December 7 Wedding Rumours Calls Reports False

ಸ್ಮೃತಿ ಅವರ ಮದುವೆ ಡಿಸೆಂಬರ್ 7 ರಂದು ನಡೆಯಲಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ನಡೆಯಲಿದೆ ಎಂದು ಚರ್ಚೆ ಆಗುತ್ತಿತ್ತು. ಇನ್ನು ಹಲವು ಸಾಮಾಜಿಕ ತಾಣಗಳಲ್ಲಿ ಬಳಕೆದಾರರು ಇದೇ ದಿನಾಂಕವನ್ನು ದೃಢೀಕರಿಸಿದರು. ಆದರೆ ಇದೇ ವೇಳೆ ಎರಡೂ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಬಗ್ಗೆ ಸ್ಮೃತಿ ಸಹೋದರ ಶ್ರವಣ್‌ ಈ ವರದಿಗಳನ್ನು ಸುಳ್ಳು ಎಂದು ತಿಳಿಸಿದ್ದಾರೆ.

ಸಹೋದರ ಹೇಳಿದ್ದೇನು?

ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ದಿನಾಂಕಗಳ ಬಗ್ಗೆ ಏನು ತಿಳಿದಿಲ್ಲ. ಸದ್ಯಕ್ಕಂತೂ ವಿವಾಹವನ್ನು ಮುಂದೂಡಲಾಗಿದೆ. ಹೊಸ ದಿನಾಂಕದ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆ ಇಲ್ಲ. ಇವೆಲ್ಲಾ ವದಂತಿಗಳು ಎಂದು ಶ್ರವಣ್‌ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಎರಡೂ ಕುಟುಂಬಗಳಿಗೆ ಬೇಸರ ತರಿಸಿದೆ. ಇನ್ನು ಸದ್ಯದ ಘಟನೆಗಳು ಎರಡೂ ಕುಟುಂಬಗಳ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದು ಪಲಾಶ್ ಅವರ ತಾಯಿ ಅಮಿತಾ ಮುಚ್ಚಲ್ ಕೂಡ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಸ್ಮೃತಿಯ ಆಪ್ತ ಸ್ನೇಹಿತೆ ಮತ್ತು ಟೀಮ್ ಇಂಡಿಯಾ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಕೂಡ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸ್ಮೃತಿ ಅವರೊಂದಿಗೆ ಇರಲು ಜೆಮಿಮಾ ಅವರು ಮಹಿಳಾ ಬಿಗ್ ಬ್ಯಾಷ್‌ ಲೀಗ್‌ನಿಂದ ದೂರ ಉಳಿದಿದ್ದಾರೆ. ಇವರ ಈ ನಿರ್ಧಾರವನ್ನು ನಟ ಸುನಿಲ್ ಶೆಟ್ಟಿ ಸ್ವಾಗತಿಸಿದ್ದಾರೆ. ಜೆಮಿಮಾ "ನಿಜವಾದ ಸ್ನೇಹ"ದ ಉದಾಹರಣೆ ಎಂದು ಅವರು ಸಾಮಾಜಿಕ ತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

Story first published: Wednesday, December 3, 2025, 11:31 [IST]
Other articles published on Dec 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+