ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಅಮೋಘ ಫಾರ್ಮ್‌ನಲ್ಲಿದ್ದಾರೆ. ಸ್ಮೃತಿ ಅವರ ಈ ಫಾರ್ಮ್ ಬೇರೆ ತಂಡಗಳಿಗೆ ಎಚ್ಚರಿಕೆ ನೀಡಿದಂತಿದೆ. ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್ ನಡೆಯಲಿದೆ. ಈ ವೇಳೆ ಟೀಮ್ ಇಂಡಿಯಾವನ್ನು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗಿದೆ. ಈ ವೇಳೆ ಭಾರತದ ಆರಂಭಿಕ ಆಟಗಾರ್ತಿ ಅಮೋಘ ಫಾರ್ಮ್ ಉಳಿದ ತಂಡಗಳ ಚಿಂತೆಯನ್ನು ದ್ವಿಗುಣ ಮಾಡಿದೆ. ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಶತಕ ಸಿಡಿಸಿದ್ದಾರೆ. ಈ ಮೂಲಕ ಇವರು ಹಲವು ದಾಖಲೆಗಳನ್ನು ಬರೆದಿದ್ದಾರೆ.
ನವದೆಹಲಿ ಮೈದಾನದಲ್ಲಿ ಸ್ಮೃತಿ ಅಬ್ಬರಿಸಿದ್ದ ಹಲವು ದಾಖಲೆ ಬರೆದಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ 125 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಹಲವಾರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ ವೇಗವಾಗಿ ಶತಕ ಬಾರಿಸಿದ ಎರಡನೇ ಆಟಗಾರ್ತಿ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಕೇವಲ 50 ಎಸೆತಗಳಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಇದಕ್ಕೂ ಮೊದಲು ಆಸೀಸ್ ಬ್ಯಾಟರ್ ಮೆಗ್ ಲ್ಯಾನಿಂಗ್ 45 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಸ್ಮೃತಿ 108 ಇನಿಂಗ್ಸ್‌ಗಳಲ್ಲಿ 47ರ ಸರಾಸರಿಯಲ್ಲಿ 4888 ರನ್ ಸಿಡಿಸಿದ್ದಾರೆ. ಈ ವೇಳೆ 13 ಶತಕ ಹಾಗೂ 22 ಅರ್ಧಶತಕ ಸಿಡಿಸಿದ್ದಾರೆ. ಆಸೀಸ್ ವಿರುದ್ಧದ ಶತಕದ ಮೂಲಕ ಸ್ಮೃತಿ ಮತ್ತೊಂದು ದಾಖಲೆಯನ್ನು ಸಹ ಬರೆದರು. ಇವರು ಏಕದಿನ ಮಹಿಳಾ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇವರು ನ್ಯೂಜಿಲೆಂಡ್ ತಂಡದ ಸೂಜಿ ಬೇಟ್ಸ್ 12 ಶತಕ ಬಾರಿಸಿದ್ದರು.
ಸ್ಮೃತಿ ಮಂಧಾನ, ಭಾರತ, 13 ಶತಕ
ಸುಜಿ ಬೇಟ್ಸ್, ನ್ಯೂಜಿಲೆಂಡ್, 12 ಶತಕ
ಟ್ಯಾಮಿ ಬ್ಯೂಮಾಂಟ್, ಇಂಗ್ಲೆಂಡ್, 12 ಶತಕ
ಷಾರ್ಲೆಟ್ ಎಡ್ವರ್ಡ್ಸ್, ಇಂಗ್ಲೆಂಡ್, 9 ಶತಕ
ಹೇಲಿ ಮ್ಯಾಥ್ಯೂಸ್, ವೆಸ್ಟ್ ಇಂಡೀಸ್, 9 ಶತಕ
ಲೌರಾ ವೋಲ್ವಾರ್ಡ್ಟ್, ದಕ್ಷಿಣ ಆಫ್ರಿಕಾ, 9 ಶತಕ

ಮಹಿಳಾ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸದ ಹೆಗ್ಗಳಿಕೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಮೆಗ್ ಲ್ಯಾನಿಂಗ್ ಅವರಿಗೆ ಸಲ್ಲುತ್ತದೆ. ಇವರು ಆಡಿದ 103 ಪಂದ್ಯಗಳಲ್ಲಿ 15 ಶತಕ ಸಿಡಿಸಿದ ಹಿರಿಮೆ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಸ್ಮತಿ ಮಂಧನಾ ಎರಡನೇ ಸ್ಥಾನದಲ್ಲಿದ್ದಾರೆ.
ಮೆಗ್ ಲ್ಯಾನಿಂಗ್, ಆಸ್ಟ್ರೇಲಿಯಾ, 15 ಶತಕ
ಸ್ಮೃತಿ ಮಂಧನಾ, ಭಾರತ, 13 ಶತಕ
ಸೂಜಿ ಬೆಟ್ಸ್, ನ್ಯಜಿಲೆಂಡ್, 13 ಶತಕ
ಟ್ಯಾಮಿ ಬ್ಯೂಮಾಂಟ್, ಇಂಗ್ಲೆಂಡ್, 12 ಶತಕ
ಹೇಲಿ ಮ್ಯಾಥ್ಯೂಸ್, ವೆಸ್ಟ್ ಇಂಡೀಸ್, 9 ಶತಕ