Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಸೊಹೈಲ್ ನಿಂದ ಭುವಿವರೆಗೆ ಪರ್ಪಲ್ ಕ್ಯಾಪ್ ವಿನ್ನರ್ಸ್

ಬೆಂಗಳೂರು, ಏಪ್ರಿಲ್ 23: ಹತ್ತು ಹಲವು ವಿವಾದ, ಹೊಸ ಹೊಸ ಪ್ರತಿಭೆಗಳ ಆಟ, ಪ್ರೇಕ್ಷಕರಿಗೆ ರಸದೂಟ ನೀಡುವ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಎಂಬ ಮನರಂಜನಾಯುಕ್ತ ಕ್ರಿಕೆಟ್ ಲೀಗ್ ಈಗ 10ನೇ ಆವೃತ್ತಿ ಸದ್ಯಕ್ಕೆ ಚಾಲನೆಯಲ್ಲಿದೆ. ಈ ಸಂಭ್ರಮಾಚರಣೆ ನಡುವೆ ಐಪಿಎಲ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ನೇರಳೆ ಟೋಪಿ ಗೆದ್ದಿರುವ ಆಟಗಾರರ ಪಟ್ಟಿ ಇಲ್ಲಿದೆ.

ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ಕಿತ್ತಳೆ ಬಣ್ಣದ ಟೋಪಿ ಹಾಗೂ ಅತಿಹೆಚ್ಚು ವಿಕೆಟ್ ಪಡೆದವರಿಗೆ ನೇರಳೆ ಬಣ್ಣದ ಟೋಪಿ ನೀಡಲಾಗುತ್ತದೆ. ಈ ರೀತಿ ವೈಯಕ್ತಿಕ ಸಾಧನೆ ಮಾಡಿದವರ ಪಟ್ಟಿ ಇಲ್ಲಿದೆ:

ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವಾಯ್ನೆ ಬ್ರಾವೊ ಅವರು 2013 ಹಾಗೂ 2015ರಲ್ಲಿ ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದುಕೊಂಡಿದೆ. 2013ರಲ್ಲಿ 32 ವಿಕೆಟ್ ಗಳನ್ನು ಗಳಿಸಿದ್ದು, ಅತಿಹೆಚ್ಚು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

ಭಾರತೀಯ ಬೌಲರ್ ಗಳ ಪೈಕಿ ಆರ್ ಪಿ ಸಿಂಗ್ ಅವರು ಪರ್ಪಲ್ ಕ್ಯಾಪ್ ಗೆದ್ದ ಮೊದಲ ಭಾರತೀಯ ವೇಗಿಯಾಗಿದ್ದಾರೆ. 2009ರಲ್ಲಿ ಅರ್ ಪಿ ಸಿಂಗ್ ಸಾಧನೆ ಮಾಡಿದ ನಂತರ, 2011ರಲ್ಲಿ ಪ್ರಗ್ನಾನ್ ಓಝಾ, 2014ರಲ್ಲಿ ಮೋಹಿತ್ ಶರ್ಮ ಹಾಗೂ 2016ರಲ್ಲಿ ಭುವನೇಶ್ವರ್ ಕುಮಾರ್ ಅವರು ನೇರಳೆ ಟೋಪಿ ಗಳಿಸಿದ್ದಾರೆ.

2016ರಲ್ಲಿ ಭುವನೇಶ್ವರ್ ಕುಮಾರ್

2016ರಲ್ಲಿ ಭುವನೇಶ್ವರ್ ಕುಮಾರ್

2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಲು ಭುವನೇಶ್ವರ್ ಕುಮಾರ್ ಅವರು ಕೂಡಾ ಕಾರಣ. 17 ಪಂದ್ಯಗಳಲ್ಲಿ 23 ವಿಕೆಟ್ ಕಿತ್ತು ಭರ್ಜರಿ ಪ್ರದರ್ಶನ ನೀಡಿದ್ದ ಭುವನೇಶ್ವರ್ ಅವರು ಪರ್ಪಲ್ ಕ್ಯಾಪ್ ವಿಜೇತರಾದರು.

2015ರಲ್ಲಿ ಡ್ವಾಯ್ನೆ ಬ್ರಾವೊ

2015ರಲ್ಲಿ ಡ್ವಾಯ್ನೆ ಬ್ರಾವೊ

2015ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾ ಆಲ್ ರೌಂಡರ್ ಡ್ವಾಯ್ನೆ ಬ್ರಾವೋ ಅವರು 17 ಪಂದ್ಯಗಳಿಂದ 26 ವಿಕೆಟ್ ಗಳನ್ನು ಗಳಿಸಿ ನೇರಳೆ ಕ್ಯಾಪ್ ಗಳಿಸಿದರು.

2014ರಲ್ಲಿ ಮೋಹಿತ್ ಶರ್ಮ

2014ರಲ್ಲಿ ಮೋಹಿತ್ ಶರ್ಮ

ಭಾರತ ಪರ ಆಡುವ ಮೋಹಿತ್ ಶರ್ಮ ಅವರು 2014ರಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಮೋಹಿತ್ ಶರ್ಮ ಅವರು ಕೂಡಾ ಚೆನ್ನೈ ಸೂಪರ್ ಕಿಂಗ್ಸ್ ಪರ ಅಡಿದ್ದಾರೆ. 16 ಪಂದ್ಯಗಳಿಂದ 23 ವಿಕೆಟ್ ಗಳನ್ನು ಗಳಿಸಿ ನೇರಳೆ ಟೋಪಿ ಧರಿಸಿದ್ದರು.

2013ರಲ್ಲಿ ಬ್ರಾವೊ

2013ರಲ್ಲಿ ಬ್ರಾವೊ

ಡ್ವಾಯ್ನೆ ಬ್ರಾವೊ ಅವರು ಐಪಿಎಲ್ ನ ಆರಂಭದ ವರ್ಷದಿಂದ ಉತ್ತಮ ಆಲ್ ರೌಂಡರ್ ಆಗಿ ರೂಪುಗೊಂಡಿದ್ದಾರೆ. 2013ರಲ್ಲಿ ಬ್ರಾವೊ ಅವರು ಪರ್ಪಲ್ ಕ್ಯಾಪ್ ಅವರು 18 ಪಂದ್ಯಗಳಿಂದ 32 ವಿಕೆಟ್ ಗಳನ್ನು ಗಳಿಸಿ ಮೊದಲ ಬಾರಿಗೆ ಪರ್ಪಲ್ ಕ್ಯಾಪ್ ಗಳಿಸಿದ್ದರು.

2012ರಲ್ಲಿ ಮಾರ್ನೆ ಮಾರ್ಕೆಲ್

2012ರಲ್ಲಿ ಮಾರ್ನೆ ಮಾರ್ಕೆಲ್

2012ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಾ ದಕ್ಷಿಣ ಆಫ್ರಿಕಾದ ವೇಗಿ ಮಾರ್ನೆ ಮಾರ್ಕೆಲ್ ಅವರು 16 ಪಂದ್ಯಗಳಿಂದ 25 ವಿಕೆಟ್ ಗಳನ್ನು ಗಳಿಸಿ ನೇರಳೆ ಕ್ಯಾಪ್ ಧರಿಸಿದರು.

2011ರಲ್ಲಿ ಲಸಿತ್ ಮಾಲಿಂಗ

2011ರಲ್ಲಿ ಲಸಿತ್ ಮಾಲಿಂಗ

ಲಸಿತ್ ಮಾಲಿಂಗ ಅವರು ಐಪಿಎಲ್ ನ ಯಶಸ್ವಿ ಬೌಲರ್ ಗಳಲ್ಲಿ ಒಬ್ಬರಾಗಿದ್ದು, 2011ರಲ್ಲಿ 16 ಪಂದ್ಯಗಳಿಂದ 28 ವಿಕೆಟ್ ಗಳನ್ನು ಗಳಿಸಿ ನೇರಳೆ ಟೋಪಿ ಗಳಿಸಿದರು.

2010ರಲ್ಲಿ ಓಝಾ

2010ರಲ್ಲಿ ಓಝಾ

2010ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡುತ್ತಾ ಸ್ಪಿನ್ನರ್ ಪ್ರಗ್ನಾಜ್ ಓಝಾ ಅವರು 16 ಪಂದ್ಯಗಳಿಂದ 21 ವಿಕೆಟ್ ಗಳನ್ನು ಪಡೆದು ಪರ್ಪಲ್ ಕ್ಯಾಪ್ ಧರಿಸಿದರು.

2009ರಲ್ಲಿ ಆರ್ ಪಿ ಸಿಂಗ್

2009ರಲ್ಲಿ ಆರ್ ಪಿ ಸಿಂಗ್

2009ರಲ್ಲಿ ಭಾರತೀಯ ಬೌಲರ್ ಗಳ ಪೈಕಿ ರುದ್ರಪ್ರತಾಪ್ ಸಿಂಗ್ ಅವರು ಡೆಕ್ಕನ್ ಚಾರ್ಜರ್ಸ್ ಪರ ಆಡುತ್ತಾ 16 ಪಂದ್ಯಗಳಿಂದ 23 ವಿಕೆಟ್ ಪಡೆದು ಮೊಟ್ಟ ಮೊದಲ ಬಾರಿಗೆ ಪರ್ಪಲ್ ಕ್ಯಾಪ್ ಧರಿಸಿದರು.

2008ರಲ್ಲಿ ಸೊಹೈಲ್

2008ರಲ್ಲಿ ಸೊಹೈಲ್

2008ರಲ್ಲಿ ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನದ ಸೊಹೈಲ್ ತನ್ವೀರ್ ಅವರು ರಾಜಸ್ಥಾನ ರಾಯಲ್ಸ್ ಪರ ಆಡುತ್ತಾ 11 ಪಂದ್ಯಗಳಿಂದ 22 ವಿಕೆಟ್ ಗಳನ್ನು ಗಳಿಸಿ ಪರ್ಪಲ್ ಕ್ಯಾಪ್ ಗೆದ್ದರು.

Story first published: Wednesday, January 3, 2018, 10:04 [IST]
Other articles published on Jan 3, 2018
Read in English: Purple Cap winners in IPL
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+