ಸೋಮಾಲಿಯಾ ರೆಫರಿ ಒಮರ್ ಅಬ್ದುಲ್ಕಾದಿರ್ ಅರ್ತಾನ್ ಅಮೆರಿಕ ಪ್ರವೇಶಕ್ಕೆ ನಿರಾಕರಣೆ; ಮರಳಿ ತವರಿಗೆ
ಸೋಮಾಲಿಯಾದ ರೆಫರಿ ಒಮರ್ ಅಬ್ದುಲ್ಕಾದಿರ್ ಅರ್ತಾನ್ ಅವರಿಗೆ 2026ರ ಫಿಫಾ ವಿಶ್ವಕಪ್‌ನಲ್ಲಿ ಪಂದ್ಯದ ಅಧಿಕಾರಿಯಾಗುವ ಕನಸಿಗೆ ಪೆಟ್ಟುಬಿದ್ದಿದೆ. ಅಮೆರಿಕದ ಅಧಿಕಾರಿಗಳು ಅವರಿಗೆ ದೇಶವನ್ನು ಪ್ರವೇಶಿಸಲು ನಿರಾಕರಿಸಿದ್ದರಿಂದ ಅಬ್ದುಲ್ಕಾದಿರ್ ಅರ್ತಾನ್ ಅವರಿಗೆ ನಿರಾಸೆಯಾಗಿದೆ. ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಮೊದಲ ಸೋಮಾಲಿಯಾ ಅಧಿಕಾರಿ ಎಂಬ ಹೆಗ್ಗಳಿಕೆ ಇವರದ್ದಾಗಲಿತ್ತು. ಅಗತ್ಯ ದಾಖಲೆಗಳು ಎಲ್ಲವೂ ತಮ್ಮ ಬಳಿ ಇದ್ದರೂ ಇವರಿಗೆ ಅವಕಾಶ ನೀಡದಿರುವ ಬಗ್ಗೆ ಅಬ್ದುಲ್ಕಾದಿರ್ ನಿರಾಸೆ ಹೊರಹಾಕಿದ್ದಾರೆ.
ಅಮೆರಿಕ ಪ್ರವೇಶಕ್ಕೆ ಅನುಮತಿ ಸಿಗದ ಕಾರಣ ಅರ್ತಾನ್ ಅವರನ್ನು ವಿಶ್ವಕಪ್‌ನ ಪಂದ್ಯ ಅಧಿಕಾರಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಫಿಫಾ ಖಚಿತಪಡಿಸಿದೆ. ಅಮೆರಿಕ ಪ್ರವೇಶಕ್ಕೆ ಅನುಮತಿ ಸಿಗದ ಕಾರಣ ಪಂದ್ಯ ಅಧಿಕಾರಿ ಒಮರ್ ಅಬ್ದುಲ್ಕಾದಿರ್ ಅರ್ತಾನ್ ಅವರು 2026ರ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಲು ಮತ್ತು ರೆಫರಿಂಗ್ ಮಾಡಲು ಸಾಧ್ಯವಿಲ್ಲ ಎಂದು ಫಿಫಾ ಖಚಿತಪಡಿಸಿದೆ.

ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ ಜಾರಿಯಾದ ಪ್ರಯಾಣ ನಿರ್ಬಂಧಗಳಿಗೆ ಒಳಪಟ್ಟ ದೇಶಗಳಲ್ಲಿ ಸೋಮಾಲಿಯಾ ಒಂದಾಗಿದೆ. ಸೋಮಾಲಿಯಾದ ಯುವ ಮತ್ತು ಕ್ರೀಡಾ ಸಚಿವಾಲಯದ ಹಿರಿಯ ಸಲಹೆಗಾರರೂ ಈ ಪ್ರವೇಶ ನಿರಾಕರಣೆಯನ್ನು ದೃಡೀಕರಿಸಿದ್ದಾರೆ. ಸೋಮಾಲಿಯಾದಿಂದ ಹೊರಡುವಾಗ ಅರ್ತಾನ್ ಅವರಲ್ಲಿದ್ದ ಎಲ್ಲಾ ದಾಖಲೆಗಳು ಸರಿಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಅಮೆರಿಕದ ಅಧಿಕಾರಿಗಳು ಯಾವುದೇ ಸಾರ್ವಜನಿಕ ಸ್ಪಷ್ಟೀಕರಣವನ್ನು ನೀಡಿಲ್ಲ.
11 ಗಂಟೆ ವಿಚಾರಣೆ
ಈ ಘಟನೆಯ ಬಗ್ಗೆ ಅಬ್ದುಲ್ಕಾದಿರ್ ಅರ್ತಾನ್ ಮಾತನಾಡಿದ್ದಾರೆ. ಇಮಿಗ್ರೇಶನ್ ಅಧಿಕಾರಿಗಳು ಸುಮಾರು 11 ಗಂಟೆಗಳ ಕಾಲ ವಿಚಾರಣೆ ನಡೆಸಿ, ಕಸ್ಟಡಿಯಲ್ಲಿಟ್ಟುಕೊಂಡು ನಂತರ ಇಸ್ತಾಂಬುಲ್‌ಗೆ ತೆರಳುವ ವಿಮಾನದಲ್ಲಿ ಮರಳಿ ಕಳುಹಿಸಿದ್ದಾರೆ. ತಮ್ಮ ದಾಖಲೆಗಳಲ್ಲಿ ಯಾವುದೇ ಕೊರತೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ವಿಶ್ವಕಪ್‌ಗೆ ತಲುಪುವ ನನ್ನ ಜೀವನದ ಅತಿದೊಡ್ಡ ಕನಸನ್ನು ನನಸಾಗಿಸಿಕೊಳ್ಳಲು ಬಯಸಿದ್ದೆ ಎಂದು ನ್ಯೂಯಾರ್ಕ್ ಟೈಮ್ಸ್ ಜೊತೆ ಮಾತನಾಡುತ್ತಾ ಅರ್ತಾನ್ ಅಳಲು ತೋಡಿಕೊಂಡಿದ್ದಾರೆ.
ಆತಿಥೇಯ ದೇಶದ ಇಮಿಗ್ರೇಶನ್ ಪ್ರಕ್ರಿಯೆಗಳು ಅಥವಾ ವೀಸಾಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಫಿಫಾ ಸ್ಪಷ್ಟಪಡಿಸಿದೆ. ಫಿಫಾ ಆತಿಥೇಯ ದೇಶದ ವೀಸಾ ನಿರ್ಧಾರಗಳು ಸೇರಿದಂತೆ ಇಮಿಗ್ರೇಶನ್ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅರ್ತಾನ್ ಅವರ ವಿಷಯದಲ್ಲಿ ಸದ್ಯ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಫಿಫಾ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications