ಯೋಗ ಮತ್ತು ಸೆಲ್ಫಿ ದಿನ; ಕ್ರಿಕೆಟಿಗರ ಕಸರತ್ತು, ಕರಾಮತ್ತು!

ಬೆಂಗಳೂರು, ಜೂನ್ 21: ಎಲ್ಲದಕ್ಕೂ ಒಂದು ದಿನ ಅಂತ ಬರುತ್ತೆ ಎನ್ನುತ್ತಿದ್ದರು ಹಿರಿಯರು. ನಿಜ, ಈಗ ಎಲ್ಲದಕ್ಕೂ ದಿನಗಳು ಬರುತ್ತಿವೆ, ಅರ್ಥಾತ್ ದಿನಾಚರಣೆಗಳು ಬರುತ್ತಿವೆ.
ಕೆಲವು ಪ್ರಮುಖ ಘಟನಾವಳಿಗಳು, ಮಹಾನಾಯಕರ ಜನ್ಮದಿನಗಳನ್ನು ಸ್ಮರಿಸುವ ಸಲುವಾಗಿ ಆರಂಭವಾದ ದಿನಾಚರಣೆಗಳು, ಈಗ ಹಲವು ಸ್ವರೂಪ ಪಡೆದುಕೊಂಡಿವೆ.
ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೆಲವು ದಿನಾಚರಣೆಗಳು ಹುಟ್ಟಿಕೊಂಡಿದ್ದರೆ, ಈಗಿನ ಆಧುನಿಕ ಯುಗದಲ್ಲಿ ಪ್ರತಿ ವಸ್ತುವಿಗೂ ಒಂದು ದಿನದ ಆಚರಣೆ ಸಿಗುತ್ತಿದೆ.
ಅಂತಹ ಹೊಸ ಸಂಭ್ರಮಗಳಲ್ಲಿ ಇತ್ತೀಚೆಗೆ ಶುರುವಾಗಿರುವುದು ಸೆಲ್ಫಿ ದಿನಾಚರಣೆ. ಮೊಬೈಲ್ ಕ್ಯಾಮೆರಾಗಳು ಪ್ರಸಿದ್ಧವಾಗುತ್ತಿದ್ದಂತೆಯೇ ಸೆಲ್ಫಿ ಕ್ರೇಜ್ ಕೂಡ ಹೆಚ್ಚಾಗಿದೆ.
ಕ್ರೀಡೆಯಲ್ಲಿಯೂ ಸೆಲ್ಫಿ ಹುಚ್ಚು ಕಡಿಮೆಯಿಲ್ಲ. ಅದರ ಜತೆಗೆ ಯೋಗ ದಿನಾಚರಣೆ ಕೂಡ. ಜಗತ್ತಿನಾದ್ಯಂತ ಯೋಗ ದಿನಾಚರಣೆ ಮಹತ್ವ ಪಡೆದುಕೊಂಡು ಆಚರಿಸಲಾಗುತ್ತಿದೆ.
ಅಂತಹ ಯೋಗ ಮತ್ತು ಸೆಲ್ಫಿ ದಿನಾಚರಣೆ ಸಂಭ್ರಮದ ಕೆಲವು ಚಿತ್ರಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿವೆ. ಅವುಗಳತ್ತ ಒಂದು ಸುತ್ತು.

ಮಾರ್ಕಸ್ ಟ್ರಸ್ಕೋಥಿಕ್
ಇಂಗ್ಲೆಂಡ್‌ನ ಮಾಜಿ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಕಸ್ ಟ್ರೆಸ್ಕೋಥಿಕ್ ಅಬ್ಬರದ ಆಟಕ್ಕೆ ಹೆಸರಾಗಿದ್ದವರು. ಮೈದಾನದಲ್ಲಿ ಸಿಡಿಲಬ್ಬರದ ಆಟ ಪ್ರದರ್ಶಿಸುತ್ತಿದ್ದ ಅವರು, ಮೈದಾನದಾಚೆ ಬಹಳ ಕೂಲ್. ಅದಕ್ಕೆ ಕಾರಣ ಯೋಗ. ಜೊಹಾನ್ಸ್‌ಬರ್ಗ್‌ನಲ್ಲಿ ಕ್ರಿಕೆಟ್ ಆಡುವ ವೇಳೆ ಅವರು ಹೋಟೆಲ್ ಹೊರಭಾಗದಲ್ಲಿ ಯೋಗಕ್ಕೆ ಕುಳಿತಿದ್ದ ಚಿತ್ರವಿದು.
ಸುರೇಶ್ ರೈನಾ
ಅಂಬಾಟಿ ರಾಯುಡು ಗಾಯಗೊಂಡ ಕಾರಣ ಇಂಗ್ಲೆಂಡ್ ಪ್ರವಾಸಕ್ಕೆ ಏಕದಿನ ತಂಡದಲ್ಲಿ ಆಡುವ ಅದೃಷ್ಟ ಪಡೆದುಕೊಂಡ ಸುರೇಶ್ ರೈನಾ, ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಯೋಗ ಪ್ರದರ್ಶಿಸಿದ್ದಾರೆ.
ದೇಹವನ್ನು ಚಾಚುವ ಮತ್ತು ಉಸಿರಾಟದ ನಿಯಂತ್ರಣದ ಮೂಲಕ ನನ್ನ ಯೋಗ ದಿನ ಆರಂಭವಾಯಿತು. ಸ್ವಲ್ಪ ಯೋಗ ಮತ್ತು ಉಸಿರಾಟದ ಮೂಲಕ ನಿಮ್ಮ ದೇಹಕ್ಕೆ ಚೈತನ್ಯ ತುಂಬಿ ಎಂದು ರೈನಾ ಸಲಹೆ ನೀಡಿದ್ದಾರೆ.
ವಿವಿಎಸ್ ಲಕ್ಷ್ಮಣ್
ನಮ್ಮ ಹೊರ ಜಗತ್ತಿನಲ್ಲಿ ಆಗುವುದನ್ನು ನಿಮ್ಮಿಂದ ಯಾವಾಗಲೂ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ದೇಹದೊಳಗಿದ್ದನ್ನು ನಿಯಂತ್ರಿಸಬಹುದು ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಯೋಗದ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಜ್ಜಿ, ಪಠಾಣ್
ಭಾರತದ ಹಿರಿಯ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಅವರ ದೈಹಿಕ ಕಸರತ್ತಿನ ಚಿತ್ರವನ್ನು ಐಸಿಸಿ ಹಂಚಿಕೊಂಡಿದೆ. ಇದು ಈ ಇಬ್ಬರೂ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದ ಸಮಯದಲ್ಲಿ ತೆಗೆದ ಚಿತ್ರ.

ಚಾಂಪಿಯನ್‌ಗಳ ಸೆಲ್ಫಿ
ಈ ಬಾರಿಯ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು ಗೆದ್ದು ಚಾಂಪಿಯನ್ ಆದ ಭಾರತದ ಕಿರಿಯರ ಸಂಭ್ರಮ. ಈ ಸೆಲ್ಫಿ ಚಿತ್ರ ವೈರಲ್ ಆಗಿತ್ತು.

ಮಹಿಳಾ ಚಾಂಪಿಯನ್ನರು
ಇತ್ತೀಚೆಗೆ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರನ್ನು ಸೋಲಿಸಿದ ಇಂಗ್ಲೆಂಡ್ಗ ವನಿತೆಯರ ಸಂಭ್ರಮ ಇದು. ಚಾಂಪಿಯನ್ನರು ಟ್ರೋಫಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪರಿ

ಆಸ್ಟ್ರೇಲಿಯಾದ ಹಿರಿಯರು
ಗ್ಲೆನ್ ಮೆಕ್‌ಗ್ರಾತ್ ಅವರ ಸಹಾಯಾರ್ಥ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರ ಸೆಲ್ಫಿ ಸಮಯ. ಮೈಕಲ್ ಕ್ಲಾರ್ಕ್, ಇಯಾನ್ ಹೀಲಿ, ಶೇನ್ ವಾರ್ನ್, ಮಾರ್ಕ್ ನಿಕೋಲಸ್, ಬಿಲ್ ಲಾರಿ, ಮೈಕಲ್ ಸ್ಲೇಟರ್ ಮತ್ತು ಮಾರ್ಕ್ ಟೇಲರ್ ಪಿಂಕ್ ಜಾಕೆಟ್ ಧರಿಸಿ ಕಾಣಿಸಿಕೊಂಡು ವಿಶಿಷ್ಟ ಚಿತ್ರವಿದು.

ಆಸ್ಟ್ರೇಲಿಯಾ ವನಿತೆಯರು
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮಹಿಳಾ ಆಶಸ್ ಸರಣಿಗೆ ಸಜ್ಜುಗೊಂಡಿದ್ದ ಆಸ್ಟ್ರೇಲಿಯಾದ ವನಿತೆಯರು ತಮ್ಮ ಮೋಜಿನ ಪ್ರವಾಸ ನಡುವೆ ತೆಗೆದುಕೊಂಡ ಸೆಲ್ಫಿ ಇದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications