ಸುರೇಶ್ ರೈನಾ ನಂತರ ಹರ್ಭಜನ್ ಸಿಂಗ್ ಮನವಿಗೆ ಸ್ಪಂದಿಸಿದ ನಟ ಸೋನು ಸೂದ್

ಕೊರೊನಾ ವೈರಸ್‌ನ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಸಾರ್ವಜನೊಕರಿಗೆ ನೀಡುತ್ತಿರುವ ಸಹಾಯ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಸುರೇಶ್ ರೈನಾ ಕೂಡ ಸೋನು ಸೂದ್ ಅವರಿಂದ ಸಹಾಯವನ್ನು ಪಡೆದುಕೊಂಡಿದ್ದರು. ಈಗ ಹರ್ಭಜನ್ ಸಿಂಗ್ ಟ್ವಿಟ್ಟರ್‌ನಲ್ಲಿ ಕೇಳಿದ ಸಹಾಯಕ್ಕೆ ಸೋನು ಸೂದ್ ಸ್ಪಂದಿಸಿದ್ದು ಕರ್ನಾಟಕದ ರೋಗಿಯೊಬ್ಬರಿಗೆ ನೆರವಾಗಿದ್ದಾರೆ.
ಹರ್ಭಜನ್ ಸಿಂಗ್ ಕರ್ನಾಟಕದ ಕೊರೊನಾ ಪಾಸಿಟಿವ್ ರೋಗಿಯೊಬ್ಬರಿಗೆ ರೆಮ್‌ಡಿಸಿವರ್ ಇಂಜಕ್ಷನ್ ಅಗತ್ಯವಿದೆ ಎಂದು ಕೇಳಿಕೊಂಡಿದ್ದರು. ಜೊತೆಗೆ ರೋಗಿಯ ಸಂಪರ್ಕ ಸಂಖ್ಯೆಯನ್ನು ಕೂಡ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡ ಮನವಿಗೆ ಸೋನು ಸೀದ್ ತಕ್ಷಣವೇ ಸ್ಪಂದಿಸಿದರು.
"ಭಜ್ಜಿ.. ತಲುಪಿಸಲಾಗುತ್ತಿದೆ" ಎಂದು ಟ್ವಿಟ್ಟರ್‌ನಲ್ಲಿ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸ್ಪಂದನೆಗೆ ಹರ್ಭಜನ್ ಸಿಂಗ್ ಕೂಡ ಪ್ರತ್ಯುತ್ತರವನ್ನು ನೀಡಿದ್ದು "ಧನ್ಯವಾದಗಳು ಸೋದರ. ಮತ್ತಷ್ಟು ಸಾಮರ್ಥ್ಯದೊಂದಿಗೆ ದೇವರು ಒಳ್ಳೆಯದನ್ನು ಮಾಡಲಿ" ಎಂದಿದ್ದಾರೆ.
ಇದಕ್ಕೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಆಕ್ಸಿಜನ್ ಸಿಲಿಂಡರ್‌ಗಾಗಿ ಟ್ವಿಟ್ಟರ್‌ನಲ್ಲಿ ಮನವಿ ಮಾಡಿದ್ದರು. ತಮ್ಮ ಕುಟುಂಬಸ್ಥರಿಗೆ ಅಗತ್ಯವಿದೆ ಎಂದು ಕೇಳಿಕೊಂಡಿದ್ದ ನಂತರ ಸೋನು ಸೂದ್ ವಿವರವನ್ನು ಪಡೆದುಕೊಂಡು ಹತ್ತು ನಿಮಿನಷದಲ್ಲಿ ತಲುಪಿಸಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಈ ಸ್ಪಂದನೆಗೂ ಸಾಕಷ್ಟು ಸಂಖ್ಯೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications