WPL 2026: ಯುಪಿ ವಿರುದ್ಧ ಗುಜರಾತ್‌ಗೆ ಎರಡನೇ ಸ್ಥಾನ
ವಡೋದರಾ: ಭರವಸೆಯ ಆಟಗಾರ್ತಿ ಸೋಫಿ ಡಿವೈನ್ ಆಲ್‌ರೌಂಡರ್ ಆಟದ ಪ್ರದರ್ಶನದ ಬಲದಿಂದ ಗುಜರಾತ್ ಜೈಂಟ್ಸ್ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಗುಜರಾತ್ ಆಡಿದ 6 ಪಂದ್ಯಗಳಲ್ಲಿ 3 ಗೆಲುವು, 3 ಸೋಲು ಕಂಡಿದ್ದು, 6 ಅಂಕವನ್ನು ಕಲೆ ಹಾಕಿದೆ.
ಗುಜರಾತ್ ವಿರುದ್ಧ ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ (14) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರಂತೆ ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ್ತಿ ಸಹ (14) ಜವಾಬ್ದಾರಿ ಮರೆತರು. ಗುಜರಾತ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಂದೇ ಖ್ಯಾತಿ ಪಡೆದಿರುವ ಆಶ್ಲೀ ಗಾರ್ಡ್ನರ್ 5 ರನ್‌ಗಳಿಗೆ ಆಟ ಮುಗಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಭಾರತಿ ಫುಲ್ಮಾಲಿ (5), ಅನಿಕಾ ಆಹುಜಾ (6), ಕಾಶ್ವಿ ಗೌತಮ್ (11) ಸಹ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಒಂದು ಕಡೆಯಲ್ಲಿ ವಿಕೆಟ್ ಬೀಳುತ್ತಾ ಇದ್ದರೂ ಇನ್ನೊಂದು ಬದಿಯಲ್ಲಿ ಕ್ರೀಸ್‌ನಲ್ಲಿ ತಳವೂರಿ ಬ್ಯಾಟ್ ಮಾಡಿದ ಅನುಭವಿ ಸೋಫಿ ಡಿವೈನ್, ಯುಪಿ ಬೌಲರ್‌ಗಳಿಗೆ ಸವಾಲಾದರು. ಇವರು ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರು 42 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 50 ರನ್ ಬಾರಿಸಿದರು. ಅಂತಿಮವಾಗಿ ಗುಜರಾತ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 153 ರನ್ ಸಿಡಿಸಿತು.
ರನ್‌ಗಳಿಸಲು ಯುಪಿ ಬ್ಯಾಟರ್ಸ್ ವಿಫಲ
154 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಯುಪಿ ತಂಡದ ಆರಂಭ ಕಳಪೆಯಾಗಿತ್ತು. ಕಿರಣ್ ನವಗಿರೆ ಸೊನ್ನೆ ಸುತ್ತಿದರು. ಉತ್ತಮವಾಗಿ ಆಡುತ್ತಿದ್ದ ನಾಯಕಿ ಮೆಗ್ ಲ್ಯಾನಿಂಗ್ 14 ರನ್‌ಗಳಿಗೆ ಆಟ ಮುಗಿಸಿದರು. ಫೋಬೆ ಲಿಚ್‌ಫೀಲ್ಡ್ 32, ಕ್ಲೋಯ್ ಟ್ರಯಾನ್ 30 ರನ್ ಸಿಡಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಯಪಿ ತಂಡ 17.3 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟ್ ಆಯಿತು. ಯುಪಿ 45 ರನ್‌ಗಳಿಂದ ಸೋಲು ಕಂಡಿದ್ದು, ಲೀಗ್‌ನಲ್ಲಿ ನಾಲ್ಕನೇ ಸೋಲು ಕಂಡಿದ್ದು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications