For Quick Alerts
ALLOW NOTIFICATIONS  
For Daily Alerts
 

Sorry.. ಕನ್ಫೂಸ್‌ ಆಗಿ ಬಿಟ್ತ್‌ ರೀ: ಥರ್ಡ್‌ ಅಂಪೈರ್‌ ನಿರ್ಣಯ ನೀಡಿದರೂ, ಫೀಲ್ಡ್‌ ಅಂಪೈರ್‌ ಔಟ್ ಎಂದಿದ್ದು ಏಕೆ?

ದಕ್ಷಿಣ ಆಫ್ರಿಕಾ ಮಹಿಳಾ ತಂಡ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಫೆಬ್ರವರಿ 7 ರಂದು ಬುಧವಾರ ನಡೆಯಿತು. ಮೊದಲ ಪಂದ್ಯಕ್ಕೆ ಮಳೆ ಸಹ ಕಾಟ ನೀಡಿತು. ಆದರೆ ಇದರ ನಡುವೆಯೂ ಅಂಪೈರ್‌ ನಿರ್ಣಯ ಎಲ್ಲರನ್ನೂ ನಗೆ ಪಾಟಲಲ್ಲಿ ತೇಲಿಸಿತು.

ಆತಿಥೇಯ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವೇಳೆ ಎಲ್ಲರನ್ನು ಅಚ್ಚರಿ ಪಡುವಂತಹ ಘಟನೆ ನಡೆದಿದೆ. ಮೂರನೇ ಅಂಪೈರ್ ಅವರು ನಾಟೌಟ್ ಎಂದು ಘೋಷಿಸಿದ ನಂತರವೂ ಫೀಲ್ಡ್ ಅಂಪೈರ್ ಬೆರಳು ಎತ್ತಿ ಔಟ್ ಎಂದು ನೀಡಿದರು.

Sorry.. Confused Bit: Even though the third umpire gives the decision, why is the field umpire out?

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ್ದರಿಂದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆತಿಥೇಯ ತಂಡದ ನಿರ್ಧಾರ ಸರಿಯಾಗಿದೆ ಎಂದು ಬೌಲರ್‌ಗಳು ಸಮರ್ಥಿಸಿಕೊಂಡರು. ದಕ್ಷಿಣ ಆಫ್ರಿಕಾಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಆಸೀಸ್ ಯಶಸ್ವಿಯಾಯಿತು. ಅರ್ಧದಷ್ಟು ತಂಡ ಔಟಾಗಿ 153 ರನ್ ಗಳಿಸಿ ಮರಳಿತು. ಅನುಭವಿ ಮರಿಜನ್ ಕಾಪ್ ತಮ್ಮ ಅರ್ಧಶತಕದ ಇನ್ನಿಂಗ್ಸ್‌ನೊಂದಿಗೆ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಸಮಯದಲ್ಲಿ, 23.5 ಓವರ್‌ಗಳಲ್ಲಿ ಸಂಭವಿಸಿದ್ದ ಸನ್ನಿವೇಶ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿತು. ಅವರು ನಗು ತಡೆಯಲು ಸಾಧ್ಯವಾಗಲಿಲ್ಲ. ಸುನೆ ಲೂಸ್ ವಿರುದ್ಧ ಆಶ್ಲೇ ಗಾರ್ನರ್ ಅವರು ಔಟ್ ಗಾಗಿ ಬಲವಾದ ಮನವಿ ಮಾಡಿದರು. ಆದರೆ ಫೀಲ್ಡ್ ಅಂಪೈರ್ ಅದನ್ನು ತಿರಸ್ಕರಿಸಿದರು.

ಆಸ್ಟ್ರೇಲಿಯಾದ ನಾಯಕಿ ರಿವ್ಯೂ ತೆಗೆದುಕೊಂಡರು ಮತ್ತು ಮೂರನೇ ಅಂಪೈರ್ ಕೂಡ ಅದನ್ನು ನಾಟೌಟ್ ಎಂದು ಘೋಷಿಸಿದರು. ಇಲ್ಲಿ ಫೀಲ್ಡ್ ಅಂಪೈರ್ ಬೆರಳು ಮೇಲೆತ್ತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಆದಾಗ್ಯೂ, ಅವರು ತಮ್ಮ ತಪ್ಪನ್ನು ಅರಿತುಕೊಂಡ ತಕ್ಷಣ, ಅವರು ತಕ್ಷಣ ಈ ನಿರ್ಧಾರವನ್ನು ಹಿಂತೆಗೆದುಕೊಂಡರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ 45 ಓವರ್‌ಗಳಲ್ಲಿ 6 ವಿಕೆಟ್‌ಗೆ 229 ರನ್ ಸೇರಿಸಿತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ಮಹಿಳಾ ತಂಡ 29.3 ಓವರ್‌ಗಳಲ್ಲಿ 149 ರನ್ ಬಾರಿಸಿ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಪರ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಿದ ಪರಿಣಾಮ ಗೆಲುವು ದಕ್ಕಿತು. ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಸಮಬಲ ಸಾಧಿಸುವಲ್ಲಿ ಸಫಲವಾಹಗಿದೆ.

Story first published: Wednesday, February 7, 2024, 17:33 [IST]
Other articles published on Feb 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+