For Quick Alerts
ALLOW NOTIFICATIONS  
For Daily Alerts
 

Sourav Ganguly: ಸೌರವ್‌ ಗಂಗೂಲಿ 52ನೇ ಹುಟ್ಟುಹಬ್ಬ ಸಂಭ್ರಮ; ದಾದಾಗಿರಿ ದಿನಗಳು ಹೇಗಿತ್ತು?

ಜುಲೈ 8 ಸೋಮವಾರ, ಭಾರತ ತಂಡ ಮಾಜಿ ನಾಯಕ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಇಂದು ತಮ್ಮ 52 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇಂದು ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸಲು ಸೌರವ್ ಗಂಗೂಲಿ ಕೊಡುಗೆ ಸಾಕಷ್ಟಿದೆ.

8 ಜುಲೈ 1972 ರಂದು ಕೋಲ್ಕತ್ತಾದಲ್ಲಿ ಜನಿಸಿದ ಸೌರವ್ ಗಂಗೂಲಿ, ತಮ್ಮ ಕ್ರಿಕೆಟ್‌ ವೃತ್ತಿಜೀವನದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಜೊತೆಗೆ ಭಾರತದ ಕ್ರಿಕೆಟ್‌ಗೆ ಹೊಸ ಸ್ಥಾನಮಾನ ಸಿಗಲು ಶ್ರಮಿಸಿದ್ದಾರೆ.

Sourav Ganguly 52nd birthday celebration

ತವರಿನಲ್ಲಿ ಹುಲಿ, ವಿದೇಶದಲ್ಲಿ ಇಲಿ ಎನ್ನುತ್ತಿದ್ದವರಿಗೆ ವಿದೇಶಿ ನೆಲದಲ್ಲೂ ಎದುರಾಳಿಗಳ ಸದ್ದಡಗಿಸಿದ್ದ ಸೌರವ್‌ ಗಂಗೂಲಿ ದಾದಾಗಿರಿ ದಿನಗಳು ಅಭಿಮಾನಿಗಳ ನೆನಪಿನಲ್ಲಿ ಇಂದಿಗೂ ಹಾಗೆ ಉಳಿದಿದೆ.ಇದೇ ಕಾರಣಕ್ಕಾಗಿ ಆಕ್ರಮಕಾರಿ ನಾಯಕತ್ವ ಹೊಂದಿದ ಸೌರವ್ ಗಂಗೂಲಿ ಅವರನ್ನು ಕ್ರಿಕೆಟ್ ಅಭಿಮಾನಿಗಳು 'ದಾದಾ' 'ಬೆಂಗಾಲ್‌ ಟೈಗರ್‌' ಮತ್ತು 'ಪ್ರಿನ್ಸ್ ಆಫ್ ಕೋಲ್ಕತ್ತಾ' ಎಂದೂ ಕರೆಯುತ್ತಾರೆ.

ಮೈದಾನದಲ್ಲಿ ಸದಾ ಧೈರ್ಯವಾಗಿ ಮುನ್ನುಗ್ಗುತ್ತಿದ್ದ ದಾದಾ ಹುಟ್ಟಿದ್ದು ಕೋಲ್ಕತ್ತದ ಬೆಹಲಾದಲ್ಲಿ. ಪತ್ನಿಯ ಹೆಸರು ಡೋನಾ ಗಂಗೂಲಿ. ಮಗಳ ಹೆಸರು ಸನಾ ಗಂಗೂಲಿ. 2003 ಏಕದಿನ ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾವನ್ನು ಫೈನಲ್‌ಗೆ ಕರೆದುಕೊಂಡು ಹೋಗಿದ್ದ ಹೆಗ್ಗಳಿಕೆಯನ್ನು ಹೊಂದಿರುವ ಗಂಗೂಲಿಯ ಪೂರ್ಣ ಹೆಸರು ಸೌರವ್ ಚಂಡೀದಾಸ್ ಗಂಗೂಲಿ. ಇಂತಹ ಹಲವು ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತ ಕ್ರಿಕೆಟ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌

1999 ಭಾರತ ಕ್ರಿಕೆಟ್‌ ಮತ್ತು ಭಾರತೀಯರು ಮರೆಯಲಾಗದ ವರ್ಷ. ಏಕೆಂದರೆ ಆ ವರ್ಷ ಮೊಹಮ್ಮದ್‌ ಅಜರುದ್ದೀನ್‌ ನೇತತ್ವದ ಟೀಮ್‌ ಇಂಡಿಯಾ ಏಕದಿನ ವಿಶ್ವಕಪ್‌ ಸೂಪರ್‌-6 ಹಂತದಲ್ಲೇ ಹೊರಬಿದ್ದಿತ್ತು.

Sourav Ganguly 52nd birthday celebration

ಅಲ್ಲದೇ, ಏಕದಿನ ವಿಶ್ವಕಪ್‌ ಬಳಿಕ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಮ್ಯೂಚ್‌ ಫಿಕ್ಸಿಂಗ್‌ ಭೂತ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ನಾಯಕ ಅಜುರುದ್ದೀನ್‌, ಅಜಯ್ ಜಡೇಜಾ ಸೇರಿದಂತೆ ಹಿರಿಯ ಆಟಗಾರರು ನಿಷೇದಕ್ಕೆ ಒಳಪಟ್ಟಿದ್ದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆರಂಭಿಕ ಆಟಗಾರ, ಎಡಗೈ ಬ್ಯಾಟರ್‌​ ಸೌರವ್​ ಗಂಗೂಲಿಗೆ ಹೆಗಲಿಗೆ ಟೀಮ್‌ ಇಂಡಿಯಾದ ಜವಾಬ್ದಾರಿ ನೀಡಲಾಗಿತ್ತು. ಗಂಗೂಲಿ ನಾಯಕತ್ವ ವಹಿಸಿಕೊಂಡ ಬಳಿಕ ಟೀಮ್‌ ಇಂಡಿಯಾಕ್ಕೆ ಹೊಸ ರೂಪ ಸಿಕ್ಕಿತ್ತು.

ದಾದಾಗಿರಿ ದಿನಗಳು

2002ರಲ್ಲಿ ಕ್ರಿಕೆಟ್‌ನ ಮೆಕ್ಕಾ ಎಂದು ಕರೆಯಲ್ಪಡುವ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್​ ವಿರುದ್ಧ ಫೈನಲ್ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಅವರ ಅದ್ಭುತ ಇನ್ನಿಂಗ್ಸ್‌ನಿಂದ ಭಾರತ ಗೆಲುವು ಸಾಧಿಸಿ ನ್ಯಾಟ್​ವೆಸ್ಟ್ ಸರಣಿ ವಶಪಡಿಸಿಕೊಂಡಿತ್ತು.

ಈ ವೇಳೆ ಲಾರ್ಡ್ಸ್ ಬಾಲ್ಕನಿಯಲ್ಲಿ ಕುಳಿತ್ತಿದ್ದ ನಾಯಕ ಸೌರವ್​ ಟೀ ಶರ್ಟ್​ ಬಿಚ್ಚಿ ಸಂಭ್ರಮಿಸಿದ್ದರು.ಇದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದು ಕ್ರಿಕೆಟ್​ ಇರುವವರೆಗೂ ಅಜರಾಮರ.

ಇದಾದ ನಂತರ ಈ ಬಗ್ಗೆ ಆಂಗ್ಲ ಪತ್ರಿಕೆಗಳು ಗಂಗೂಲಿ ಅವರನ್ನು ಸಾಕಷ್ಟು ಟೀಕೆ ಮಾಡಿದರೂ, ಭಾರತೀಯ ಕ್ರಿಕೆಟ್‌ನ ಹಲವು ಹಿರಿಯ ಕ್ರಿಕೆಟಿಗರು ಕೂಡ ಇದನ್ನು ತಪ್ಪು ಎಂದು ಹೇಳಿದ್ದರೂ ಗಂಗೂಲಿ ಯಾರ ಬಗ್ಗೆಯೂ ತಲೆಕೆಡಿಸಿಕೊಂಡಿರಲಿಲ್ಲ.

ಸೌರವ್ ಗಂಗೂಲಿ ವೃತ್ತಿ ಜೀವನ

1990ರಲ್ಲಿ ರಣಜಿ ಟ್ರೋಫಿಯ ಫೈನಲ್‌ನಲ್ಲಿ ಚೊಚ್ಚಲ ಪಾದರ್ಪಣೆ ಪಂದ್ಯವಾಡಿದ್ದ ಗಂಗೂಲಿ, 1992ರ ಆಸ್ಟ್ರೇಲಿಯಾ ಪ್ರವಾಕ್ಕೆ ಭಾರತ ತಂಡಕ್ಕೆ ಆಯ್ಕೆ ಆಗಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೇ ವರ್ಷದಲ್ಲಿ (1992) ಏಕದಿನ ಕ್ರಿಕೆಟ್‌ಪದಾರ್ಪಣೆ ಮಾಡಿದ್ದರು. ಇದಾದ ನಾಲ್ಕು ವರ್ಷಗಳ ನಂತರ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆಯವಲ್ಲಿ ಯಶಸ್ವಿಯಾಗಿದ್ದರು.

ಸೌರವ್ ಗಂಗೂಲಿ ಅಂತರಾಷ್ಟ್ರೀಯ ಕ್ರಿಕೆಟ್ ಬಗ್ಗೆ ನೋಡುವುದಾರೆ, ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 424 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 35 ಶತಕಗಳನ್ನು ಒಳಗೊಂಡಂತೆ 18575 ರನ್ ಗಳಿಸಿದ್ದಾರೆ.

ಗಂಗೂಲಿ ಅವರು ಟಿ20 ಕ್ರಿಕೆಟ್ ಅಸ್ತಿತ್ವಕ್ಕೆ ಬರುವ ಮೊದಲು ನಿವೃತ್ತಿ ಹೊಂದಿದ್ದರಿಂದ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 311 ಏಕದಿನ ಪಂದ್ಯಗಳ 300 ಇನ್ನಿಂಗ್ಸ್‌ಗಳಲ್ಲಿ 76 ಅರ್ಧಶತಕ ಮತ್ತು 22 ಶತಕಗಳನ್ನು ಬಾರಿಸಿದ್ದಾರೆ. ಇನ್ನು ಟೆಸ್ಟ್‌ನಲ್ಲಿ 188 ಇನ್ನಿಂಗ್ಸ್‌ಗಳಲ್ಲಿ 35 ಅರ್ಧಶತಕ ಮತ್ತು 16 ಶತಕಗಳನ್ನು ಒಳಗೊಂಡಂತೆ 7212 ರನ್ ಗಳಿಸಿದ್ದಾರೆ.

Story first published: Monday, July 8, 2024, 13:20 [IST]
Other articles published on Jul 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+