Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಸೌರವ್ ಗಂಗೂಲಿಗೆ ಮಹತ್ವದ ಜವಾಬ್ದಾರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

Sourav Ganguly Appointed As Director Of Cricket For Delhi Capitals

ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ಕ್ರಿಕೆಟ್‌ ಜಗತ್ತಿಗೆ ಮರಳಿದ್ದಾರೆ. ಈ ಬಾರಿ ಬಿಸಿಸಿಐ ಬಿಟ್ಟು ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಕೆಲಸ ಮಾಡಲಿದ್ದಾರೆ.

ಬಿಸಿಸಿಐನ ಪದಚ್ಯುತಗೊಂಡ ಗಂಗೂಲಿ ಮೂರು ತಿಂಗಳ ಬ್ರೇಕ್ ಬಳಿಕ ವಾಪಸಾಗಿದ್ದಾರೆ. JSW-GMR ಮಾಲೀಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಪ್ರಾಂಚೈಸಿಯ ಎಲ್ಲಾ ಕ್ರಿಕೆಟ್‌ ಕಾರ್ಯಾಚರಣೆಗಳಿಗೆ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. 2019ರಲ್ಲಿ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ನಂತರ ಅವರು ಬಿಸಿಸಿಐ ಅಧ್ಯಕ್ಷರಾದ ಕಾರಣ ಮೆಂಟರ್ ಸ್ಥಾನವನ್ನು ತೊರೆದಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ಸೌರವ್ ಗಂಗೂಲಿ ತಮ್ಮ ಮಾಜಿ ಸಹೋದ್ಯೋಗಿ ರಿಕಿ ಪಾಂಟಿಂಗ್ ಜೊತೆ ಮತ್ತೆ ಕೆಲಸ ಮಾಡಲಿದ್ದಾರೆ. ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ. ಈ ಬಾರಿ ಸೌರವ್ ಗಂಗೂಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಕೌಟಿಂಗ್ ಕಾರ್ಯಕ್ರಮ ಸೇರಿದಂತೆ ಸಂಪೂರ್ಣ ಕ್ರಿಕೆಟ್ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.

Sourav Ganguly Appointed As Director Of Cricket For Delhi Capitals

ಹೊಸ ನಾಯಕನ ಆಯ್ಕೆ ಹೊಣೆ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿರುವ ಸೌರವ್ ಗಂಗೂಲಿ ಮತ್ತು ರಿಕಿ ಪಾಂಟಿಂಗ್ 2023ರ ಆವೃತ್ತಿಗಾಗಿ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಈ ಬಾರಿ ಐಪಿಎಲ್ ಆಡುವುದು ಅನುಮಾನವಾಗಿದ್ದು, ಹೊಸ ನಾಯಕನನ್ನು ನೇಮಿಸಬೇಕಾಗಿದೆ.

ಹಿಡಿಯ ಆಟಗಾರ ಡೇವಿಡ್ ವಾರ್ನರ್ ತಂಡದ ನಾಯಕತ್ವ ವಹಿಸಿಕೊಳ್ಳಲು ಸೂಕ್ತ ಆಯ್ಕೆ ಎನ್ನಲಾಗುತ್ತಿದೆ. ಆದರೂ ಮನೀಶ್ ಪಾಂಡೆ ತಂಡದ ಮತ್ತೊಂದು ಆಯ್ಕೆಯಾಗಿದೆ. 2023ರ ಮಿನಿ ಹರಾಜಿನಲ್ಲಿ ಮನೀಶ್ ಪಾಂಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಕ್ಷಣದವರೆಗೆ ಕಾದು ನೋಡಲು ನಿರ್ಧರಿಸಿದೆ. ರಿಷಬ್ ಪಂತ್ ಐಪಿಎಲ್‌ನಲ್ಲಿ ಆಡುವ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡ ಬಳಿಕ ಹೊಸ ನಾಯಕನ ಆಯ್ಕೆ ಬಗ್ಗೆ ಘೋಷಣೆ ಮಾಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಈಗ ಐಪಿಎಲ್‌ನಲ್ಲಿ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್‌ಎಟಿ20 ಟೂರ್ನಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಮಾಲಿಕತ್ವ ಹೊಂದಿದೆ. ಇಂಟರ್ ನ್ಯಾಷನಲ್ ಲೀಗ್ ಟಿ20ಯಲ್ಲಿ ದುಬೈ ಕ್ಯಾಪಿಟಲ್ಸ್ ತಂಡವನ್ನು ಹೊಂದಿದೆ. ಈ ಮೂರು ತಂಡದ ಉಸ್ತುವಾರಿಯನ್ನು ಸೌರವ್ ಗಂಗೂಲಿ ವಹಿಸಿಕೊಳ್ಳಲಿದ್ದಾರೆ.

Story first published: Tuesday, January 3, 2023, 15:53 [IST]
Other articles published on Jan 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+