Sourav Ganguly: ಸೌರವ್ ಗಂಗೂಲಿಗೆ ಐಸಿಸಿ ವಿಶೇಷ ಜವಾಬ್ದಾರಿ
ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಹೊಸ ಜವಾಬ್ದಾರಿಯನ್ನು ನೀಡಿದೆ. ಇವರಿಗೆ ಐಸಿಸಿ ಪುರುಷರ ಕ್ರಿಕೆಟ್ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಿದೆ. ಈ ಮೂಲಕ ಸೌರವ್ ಗಂಗೂಲಿ ಕನ್ನಡದ ಸ್ಟಾರ್ ಆಟಗಾರ ಅನಿಲ್ ಕುಂಬ್ಳೆ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ. ಅನಿಲ್ ಕುಂಬ್ಳೆ ತಮ್ಮ ಮೂರು ವರ್ಷದ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಈ ಸಮತಿಯಲ್ಲಿ ಗಂಗೂಲಿಯ ಜೊತೆಗೆ ವಿವಿಎಸ್ ಲಕ್ಷ್ಮಣ ಸಹ ಸೇರಿಕೊಂಡಿದ್ದಾರೆ.
ಐಸಿಸಿಯ ಪುರುಷರ ಕ್ರಿಕೆಟ್ ಸಮಿತಿಯ ಭಾಗವಾದ ಸದಸ್ಯರಲ್ಲಿ ವಿವಿಎಸ್ ಲಕ್ಷ್ಮಣ, ಅಫ್ಘಾನಿಸ್ತಾನದ ಮಾಜಿ ಕ್ರಿಕೆಟಿಗ ಹಮೀದ್ ಹಸನ್, ವೆಸ್ಟ್ ಇಂಡೀಸ್‌ನ ಅನುಭವಿ ಆಟಗಾರ ಡೆಸ್ಮಂಡ್ ಹೇನ್ಸ್, ದಕ್ಷಿಣ ಆಫ್ರಿಕಾದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ತೆಂಬು ಬವುಮಾ, ಮತ್ತು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಜೊನಾಥನ್ ಟ್ರಾಟ್ ಗಂಗೂಲಿಯ ಜೊತೆ ಕೆಲಸ ಮಾಡಲಿದ್ದಾರೆ.

ಇನ್ನು ಮಹಿಳಾ ಸಮಿತಿಯ ಬಗ್ಗೆ ಹೇಳುವುದಾದರೆ, ಕಿವೀಸ್ ತಂಡದ ಮಾಜಿ ಸ್ಪಿನ್ ಬೌಲರ್ ಕ್ಯಾಥರೀನ್ ಕ್ಯಾಂಪ್‌ಬೆಲ್ ಅವರನ್ನುಈ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆಸೀಸ್ ತಂಡದ ಮಾಜಿ ಆಟಗಾರ್ತಿ ಅವ್ರಿಲ್ ಫಾಹಿ ಮತ್ತು ಫ್ಲೋಟ್ಸಿ ಮೊಸೆಕಿ ಸಹ ಕ್ಯಾಥರೀನ್ ತಂಡದ ಭಾಗವಾಗಿದ್ದಾರೆ.
ಮಹತ್ವದ ನಿರ್ಧಾರ
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇತ್ತೀಚಿಗೆ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ, ಇಸಿಬಿ, ಜೊತೆಗೂಡಿ ಹೊಸ ಕಾರ್ಯವನ್ನು ಆರಂಭಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಲಿ ಮಹಿಳೆಯರು ಕ್ರಿಕೆಟ್ ಆಡುವುದನ್ನು ನಿಷೇಧಿಸಿದೆ. ಐಸಿಸಿ ತನ್ನ ಹೊಸ ಕಾರ್ಯದ ಅಡಿಯಲ್ಲಿ ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡ ಮಹಿಳಾ ಆಟಗಾರರಿಗೆ ಆರ್ಥಿಕ ನೆರವು ಹಾಗೂ ವಿಶ್ವ ದರ್ಜೆಯ ಸೌಲಭ್ಯಗಳನ್ನು ನೀಡಲು ತೀರ್ಮಾನಿಸಲಾಗಿದೆ. ಈ ಕ್ರಮಕ್ಕೆ ಐಸಿಸಿ ಅಧ್ಯಕ್ಷ ಜಯ್ ಶಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇವರು ಈ ಯೋಜನೆ ಮಹಿಳಾ ಕ್ರಿಕೆಟ್ ಆಟಗಾರಲ್ಲಿ ಹೊಸ ಭರವಸೆಯ ಮೂಡಿಸಲಿದೆ ಎಂಬ ಆಶಯವನ್ನು ವ್ಯಕ್ತ ಪಡಿಸಿದ್ದಾರೆ.

ಗಂಗೂಲಿ ಸಾಧನೆ
ಟೀಮ್ ಇಂಡಿಯಾವನ್ನು ವಿಶ್ವ ಕ್ರಿಕೆಟ್‌ನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರಲ್ಲಿ ಗಂಗೂಲಿ ಅವರಿಗೆ ಆದ್ಯತೆ. ಇವರು 2000ರಲ್ಲಿ ಮ್ಯಾಚ್ ಫಿಕ್ಸಿಂಗ್‌ನಿಂದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದ ಟೀಮ್ ಇಂಡಿಯಾವನ್ನು ಮೇಲೆತ್ತಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದೇ ವೇಳೆಯಲ್ಲಿ ಗಂಗೂಲಿ ಅವರನ್ನು ಟೀಮ್ ಇಂಡಿಯಾ ನಾಯಕರನ್ನಾಗಿ ನೇಮಿಸಲಾಯಿತು. ಸೌರವ್ ಗಂಗೂಲಿ ಬಲಿಷ್ಠ ತಂಡವನ್ನು ಕಟ್ಟಿದ್ರು. ಇದೇ ವೇಳೆಗೆ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಅವರಂತಹ ಹೊಸ ಆಟಗಾರರು ಬೆಳಕಿಗೆ ಬಂದರು. ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಕೆಲವೇ ಕೆಲವು ಆಟಗಾರರಲ್ಲಿ ಗಂಗೂಲಿಗೂ ಸ್ಥಾನ. ಇವರ ನಾಯಕತ್ವದಲ್ಲಿ ಟೀಮ್ ಇಂಡಿಯ ವಿದೇಶಿ ನೆಲದಲ್ಲಿ ಅನೇಕ ಪ್ರಮುಖ ಜಯ ದಾಖಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications